ಈ ವಾರದ ದ್ವಾದಶ ರಾಶಿಗಳ ಫಲಾಫಲ- ಈ 3 ರಾಶಿಗಳಿಗೆ ಬಾರಿ ಯಶಸ್ಸು, ಲಾಭ. ಯಾವ್ಯಾವು ಗೊತ್ತಾ?

ಈ ವಾರದ ದ್ವಾದಶ ರಾಶಿಗಳ ಫಲಾಫಲ- ಈ 3 ರಾಶಿಗಳಿಗೆ ಬಾರಿ ಯಶಸ್ಸು, ಲಾಭ. ಯಾವ್ಯಾವು ಗೊತ್ತಾ?

0

ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರದ ಭವಿಷ್ಯ ಈ ಕೆಳಗಿನಂತೆ ಇದ್ದು, ಈ ವಾರ ಹಲವಾರು ರಾಶಿಗಳಿಗೆ ಬಹಳ ಉತ್ತಮವಾಗಿರುತ್ತದೆ, ಅದರಲ್ಲಿಯೂ ವೃಷಭ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದ್ದು ಭಾರಿ ಯಶಸ್ಸನ್ನು ಗಳಿಸುತ್ತಾರೆ. ಪ್ರತಿಯೊಂದು ದ್ವಾದಶ ರಾಶಿಗಳ ಫಲಾಫಲಗಳು ಈ ಕೆಳಗಿನಂತಿವೆ.

ಮೇಷ: 14-June-2020 to 20-June-2020

ಈ ವಾರ ನಿಮಗೆ ಖರ್ಚು ಹೆಚ್ಚಾಗುತ್ತದೆ, ಹಲವಾರು ದಿನಗಳಿಂದ ನಿಮ್ಮ ಖರ್ಚು ಹೆಚ್ಚಾಗುತ್ತಿದ್ದು, ನಿಯಂತ್ರಣ ಮಾಡಿಕೊಳ್ಳುವುದು ಬಹಳ ಒಳಿತು. ಅದ್ಯಾಗೋ ಖರ್ಚು ಹೆಚ್ಚಾದರೂ ಕೂಡ ನಿಮಗೆ ಈ ಸಮಯ ಬಹಳ ಒಳ್ಳೆಯದಾಗಿದೆ. ವಿದೇಶಿ ವ್ಯವಹಾರ ಮಾಡುವವರು ಬಹಳ ಹೆಸರನ್ನು ಪಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ಈ ವಾರ ಪ್ರತಿಕೂಲವಾಗಲಿದೆ ಆದ್ದರಿಂದ ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ ಹಾಗೂ ನೀವು ಸೇವಿಸಬೇಕಾದ ಆಹಾರದ ಕುರಿತು ಗಮನ ಹರಿಸಿ. ಈ ಬಾರಿ ನಿಮಗೆ ಶಕ್ತಿ ಮತ್ತು ಧೈರ್ಯ ಹೆಚ್ಚಾಗಿರುತ್ತದೆ. ಇದರಿಂದ ನೀವು ನಿಮ್ಮ ಕ್ಷೇತ್ರದ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತೀರಿ. ವ್ಯಾಪಾರಿಗಳು ಬಹಳ ಅದೃಷ್ಟವಂತಾಗಿರುತ್ತಾರೆ ಹಾಗೂ ಭವಿಷ್ಯದ ಲಾಭವನ್ನು ಪಡೆಯುತ್ತಾರೆ. ನಿಮ್ಮ ಪ್ರೀತಿಯ ಸಂಬಂಧಗಳ ಬಗ್ಗೆ ಕೊಂಚ ಕಾಳಜಿ ಇರಲಿ, ಮಾತಿನ ಮೂಲಕ ವಾದ-ವಿವಾದಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ವೃಷಭ: 14-June-2020 to 20-June-2020

ಈ ವಾರ ವೃಷಭ ರಾಶಿಯವರಿಗೆ ಬಹಳ ಒಳ್ಳೆಯದಾಗಿದೆ. ಯಾಕೆಂದರೆ ಅದೃಷ್ಟ ನಿಮ್ಮ ಕೈಯಲ್ಲಿ ಇರುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಯಾಗುವ ಸಾಧ್ಯತೆಗಳು ಇವೆ ಹಾಗೂ ಅದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ನಿಮ್ಮ ತಾಯಿಯ ಬೆಂಬಲ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಇರುತ್ತದೆ. ಈ ವಾರ ನಿಮಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ, ಪ್ರತಿಯೊಂದು ವ್ಯವಹಾರಗಳಲ್ಲಿಯೂ ಲಾಭ ಗಳಿಸುತ್ತೀರಿ‌‌. ಆದರೆ ಖರ್ಚು ವೆಚ್ಚಗಳ ಕುರಿತು ಗಮನ ಹರಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಪ್ರೀತಿಸಿದವರ ಜೊತೆ ಕೆಲವು ವಾದ-ವಿವಾದಗಳು ಹುಟ್ಟಿಕೊಳ್ಳುತ್ತವೆ.

ಮಿಥುನ: 14-June-2020 to 20-June-2020

ಈ ವಾರ ನಿಮ್ಮ ಕುಟುಂಬಕ್ಕೆ ಬಹಳ ಒಳ್ಳೆಯದಾಗುತ್ತದೆ, ನಿಮ್ಮ ಕುಟುಂಬದವರು ನಿಮಗೆ ಪ್ರತಿಯೊಂದು ಕಾರ್ಯದಲ್ಲಿಯೂ ಬೆಂಬಲ ನೀಡುತ್ತಾರೆ. ಆದಕಾರಣ ನೀವು ಯಾವುದೇ ವಿಷಯಗಳಿಗೂ ಮಾನಸಿಕ ಒತ್ತಡ ಅನುಭವಿಸುವುದಿಲ್ಲ. ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಕೆಲವು ಅಡಚಣೆಗಳು ಎದುರಾಗಬಹುದು ಹಾಗೂ ಹಣಕಾಸಿನ ವಿಚಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ನಷ್ಟದ ಆರ್ಥಿಕತೆಯಿಂದ ನಿಮ್ಮ ಸ್ವಭಾವದ ಮೇಲೆ ನಿಮಗೆ ಹಿಡಿತ ತಪ್ಪುವ ಸಾಧ್ಯತೆಗಳಿವೆ ಮತ್ತು ಕೆಲಸದ ಸ್ಥಳದಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ವಿವಾದ ಮಾಡಿ ವಾದ-ವಿವಾದಗಳಲ್ಲಿ ಭಾಗಿಯಾಗುತ್ತೀರಿ. ಆದ್ದರಿಂದ ತಾಳ್ಮೆ ತೋರಿಸಿ ನಿಮ್ಮ ಕೋಪವನ್ನು ಶಾಂತವಾಗಿರಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಘನತೆಗೆ ಧಕ್ಕೆ ಬರಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಸಶಕ್ತವಾಗಿದೆ.

ಕರ್ಕಾಟಕ: 14-June-2020 to 20-June-2020

ಈ ವಾರ ನೀವು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತೀರಿ, ಆದಕಾರಣ ಕೆಲವು ದಾನ-ಧರ್ಮದ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಒದಗಿ ಬರಲಿದೆ. ನಿಮ್ಮ ಪೋಷಕರ ಆರೋಗ್ಯದ ದೃಷ್ಟಿಯಿಂದ ಬಹಳ ಕಾಳಜಿ ವಹಿಸಿ. ಈ ಸಮಯದಲ್ಲಿ ನೀವು ಹೆಚ್ಚು ಕೆಲಸ ಮಾಡಬೇಕಾದ ಕಾರಣ ದೈಹಿಕವಾಗಿ ಆಯಾಸಗೊಳ್ಳಬಹುದು. ಆದ್ದರಿಂದ ಕೆಲಸದ ಜೊತೆ ಕುಟುಂಬದ ಜೊತೆ ಕೂಡ ಕಾಲಕಳೆಯಿರಿ, ಇದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಪ್ರತಿಯೊಂದು ಪರಿಸ್ಥಿತಿಯಲ್ಲೂ ಶಾಂತತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಪಡಿ, ಕೋಪ ಒಳ್ಳೆಯದಲ್ಲ.

ಸಿಂಹ: 14-June-2020 to 20-June-2020

ಈ ವಾರ ನೀವು ಗೆಲುವನ್ನು ಸಾಧಿಸಲು ಕೆಲವು ಅಡ್ಡದಾರಿಗಳನ್ನು ಅಥವಾ ಕಾನೂನು ಬಾಹಿರ ಕೃತ್ಯಗಳನ್ನು ಮಾಡುವ ಸಾಧ್ಯತೆಗಳು ಇವೆ. ಇದು ಭವಿಷ್ಯದಲ್ಲಿ ನಿಮಗೆ ತೊಡಕಾಗಬಹುದು. ಆದ್ದರಿಂದ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಂದ ನಿಮ್ಮನ್ನು ನೀವು ದೂರ ಇಟ್ಟುಕೊಳ್ಳಿ ಮತ್ತು ಯಾವುದೇ ರೀತಿಯ ವಿವಾದಗಳಿಗೆ ಸಿಲುಕಬೇಡಿ. ಇನ್ನು ಈ ಸಮಯವು ನಿಮ್ಮ ನಿತ್ಯ ಜೀವನಕ್ಕೆ ಬಹಳ ಉತ್ತಮವಾಗಿದೆ. ನಿಮ್ಮ ಜೊತೆಯಲ್ಲಿ ಅದೃಷ್ಟ ಇರುತ್ತದೆ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ನೀವು ಲಾಭ ಗಳಿಸುತ್ತೀರಿ. ತಂದೆಯೊಂದಿಗಿನ ವಾಗ್ವಾದ ಕಡಿಮೆಯಾಗಿ ಸಂಬಂಧವೂ ಸುಧಾರಿಸುತ್ತದೆ. ತಂದೆಯ ಸಹಾಯದಿಂದ ನೀವು ಹಲವಾರು ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ.

ಕನ್ಯಾ: 14-June-2020 to 20-June-2020

ವಿವಾಹಿತರು ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಪಡುತ್ತೀರೀ, ಇದು ನಿಮ್ಮ ಸಂಬಂಧವನ್ನು ಬಲಗೊಳಿಸುತ್ತದೆ. ಕೆಲಸದ ಕ್ಷೇತ್ರದಲ್ಲಿ ಸಮಯ ಬಹಳ ಒಳ್ಳೆಯದಾಗಿದೆ. ಈ ಸಮಯದಲ್ಲಿ ನಿಮ್ಮ ಸ್ಥಾನ ಮತ್ತು ಖ್ಯಾತಿ ಸುಧಾರಿಸುತ್ತದೆ. ನಿಮ್ಮ ಮೇಲಿನ ಅಧಿಕಾರಿಗಳು ನಿಮ್ಮ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಹಾಗೂ ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ, ಇದರಿಂದ ಮುಂದೆ ನಿಮಗೆ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ಆದಕಾರಣ ಹಣವನ್ನು ಸೂಕ್ತವಾಗಿ ಬಳಸಿ.

ತುಲಾ: 14-June-2020 to 20-June-2020

ನಿಮ್ಮ ಕೆಲಸ ಸ್ಥಳದಲ್ಲಿ ಈ ವಾರ ಉತ್ತಮವಾಗಿರುತ್ತದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದ್ದು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಂದ ಅವರು ಸಂಪೂರ್ಣ ಸಂತೋಷಗೊಂಡು ನಿಮ್ಮನ್ನು ಉತ್ತೇಜಿಸುತ್ತಾರೆ. ಆದರೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಜಾಗೃತಿ ವಹಿಸಿ ಕೆಲಸ ನಿರ್ವಹಿಸಿ. ಹಿರಿಯರ ಜೊತೆ ವಾಗ್ವಾದ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಹಿರಿಯರೊಂದಿಗೆ ಸಂವಹನ ನಡೆಸುವಾಗ ಯಾವುದೇ ವಾದ ವಿವಾದಗಳಿಗೆ ಸಿಲುಕಬೇಡಿ. ಇನ್ನು ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಈ ಸಮಯ ಬಹಳ ಶುಭವಾಗಿದೆ. ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಕೇಸುಗಳು ಮುಗಿಯುತ್ತವೆ ಹಾಗೂ ನಿರ್ಧಾರ ನಿಮ್ಮ ಪರವಾಗಿ ಬರುವ ಸಾಧ್ಯತೆಗಳಿವೆ.

ವೃಶ್ಚಿಕ: 14-June-2020 to 20-June-2020

ಈ ವಾರ ನಿಮಗೆ ಬಹಳ ಶುಭವಾಗಿರುತ್ತದೆ. ನೀವು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳಿರುತ್ತವೆ. ಪೋಷಕರು ನಿಮ್ಮನ್ನು ಸಂಪೂರ್ಣ ಬೆಂಬಲಿಸುತ್ತಾರೆ. ಇದರಿಂದ ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಪ್ರೀತಿ ಜೀವನದಲ್ಲಿ ಹೊಸತನವನ್ನು ತರುತ್ತದೆ ಮತ್ತು ನಿಮ್ಮವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ‌. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಉತ್ತಮವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವವರಿಗೆ ಅನುಕೂಲಕರವಾಗಿದೆ. ನೆನಪಿಡಿ ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ನೀವು ಇನ್ನಿತರರ ಜೊತೆ ಮಾತನಾಡುವಾಗ ಕಠೋರತೆ ಕಂಡುಬರುತ್ತದೆ, ವಾದ-ವಿವಾದಗಳು ಹೆಚ್ಚಾಗುವ ಸಾಧ್ಯತೆಗಳಿವೆ.

ಧನಸ್ಸು: 14-June-2020 to 20-June-2020

ಕೌಟುಂಬಿಕವಾಗಿ ನಿಮಗೆ ಈ ಸಮಯ ಬಹಳ ಶುಭವಾಗಿದೆ. ಈ ಸಮಯದಲ್ಲಿ ನಿಮ್ಮ ಹಣವನ್ನು ಮನೆಯ ದುರಸ್ತಿ ಅಥವಾ ಅಲಂಕಾರಕ್ಕಾಗಿ ಖರ್ಚು ಮಾಡುತ್ತೀರಿ. ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಅದ್ಯಾಗೋ ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ನೀವು ಸರಿಯಾಗಿ ಹೊಂದಿಸಿರಬೇಕಾಗುತ್ತದೆ. ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯವಾಗಿದೆ. ಆದರೆ ಹೂಡಿಕೆ ಮಾಡುವ ಮುನ್ನ ನಿಮ್ಮ ಹಿರಿಯರೊಂದಿಗೆ ಮಾತುಕತೆ ನಡೆಸಿ ಅವರ ಸಲಹೆಗಳನ್ನು ಪಡೆದು ಕೊಳ್ಳುವುದನ್ನು ಮರೆಯಬೇಡಿ.

ಮಕರ: 14-June-2020 to 20-June-2020

ಮಕರ ಸಂಕ್ರಾಂತಿ ಅವರು ಮೊದಲಿಗಿಂತಲೂ ತಮ್ಮ ಶ್ರಮವನ್ನು ಹೆಚ್ಚು ಮಾಡಬೇಕಾಗುತ್ತದೆ. ಆಗ ಮಾತ್ರ ನಿಮ್ಮ ಗುರಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಸಹೋದರ ಅಥವಾ ಸಹೋದರಿಯ ರಿಂದ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲ ಸಿಗುತ್ತದೆ. ಇದರಿಂದ ನಿಮ್ಮ ನಡುವಿನ ಸಂಬಂಧದಲ್ಲಿ ಸಾಮರಸ್ಯ ಕಾಣುತ್ತದೆ. ಗೆಳೆಯರ ಜೊತೆ ಭಿನ್ನಾಭಿಪ್ರಾಯಗಳು ಕೇಳಿಬರುತ್ತವೆ. ನಿಮ್ಮ ಮೇಲಿನ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ನು ವ್ಯಾಪಾರ-ವ್ಯವಹಾರ ಸಂಬಂಧಿತ ಇದು ಒಳ್ಳೆಯ ವಾರವಾಗಿದ್ದು ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಆದರೆ ಆರೋಗ್ಯದ ವಿಚಾರದಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು.

ಕುಂಭ: 14-June-2020 to 20-June-2020

ಈ ವಾರ ನೀವು ಅನಿರೀಕ್ಷಿತ ವೆಚ್ಚವನ್ನು ಭರಿಸಬೇಕಾಗುತ್ತದೆ. ಇದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ನೀವು ನಿಮ್ಮ ಹಣವನ್ನು ಆಪ್ತ ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ಖರ್ಚು ಮಾಡಬೇಕಾದ ಸಮಯ ಕಾಣಬಹುದು. ನಿಮ್ಮ ಕಾರ್ಯಕ್ಷೇತ್ರಗಳಲ್ಲಿ, ನೀವು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತೀರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಭವಿಷ್ಯದಲ್ಲಿ ಇದರಿಂದ ನಿಮಗೆ ಲಾಭವೂ ಕೂಡ ಇದೆ. ಕೆಲವೊಮ್ಮೆ ಒತ್ತಡಗಳು ಎದುರಾದಾಗ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸಿ.

ಮೀನ: 14-June-2020 to 20-June-2020

ಈ ವಾರ ನಿಮಗೆ ಒಳ್ಳೆಯ ವಾರವಾಗಿದೆ, ನಿಮ್ಮ ಕಠಿಣ ಪರಿಶ್ರಮದಿಂದ ನಿಮಗೆ ಈ ವಾರ ಬಹಳ ಸಂತೋಷ ತರುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಈ ಸಮಯ ಬಹಳ ಒಳ್ಳೆಯದಾಗಿದೆ, ನೀವು ಲಾಭ ಗಳಿಸುವುದು ಖಚಿತ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸುವುದನ್ನು ಕಾಣಬಹುದು, ಇದರಿಂದ ಅವರ ಕಾರ್ಯಕ್ಷಮತೆ ಸುಧಾರಿಸುತ್ತದೆ. ಈ ವಾರ ನಿಮ್ಮ ರಾಶಿಚಕ್ರದಲ್ಲಿ ಧನಯೋಗ ಇರುವ ಕಾರಣ ಭೂಮಿ ಮತ್ತು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.