ಒಂದಾದ ಜಪಾನ್-ಭಾರತ ! ಚೀನಾದ ದಶಕಗಳ ತಂತ್ರಕ್ಕೆ ಮರು ತಂತ್ರ ಹೆಣೆದ ಮೋದಿಗೆ ಭರ್ಜರಿ ಗೆಲುವು ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶದ ಪ್ರಕಾರ ಟಿಬೆಟ್ ಅವರದ್ದು, ಹಿಂದೂ ಮಹಾಸಾಗರ ಅವರದ್ದು, ದಕ್ಷಿಣ ಚೀನಾ ಸಮುದ್ರದ ಬಹುತೇಕ ಪಾಲು ಅವರದ್ದು, ಅರುಣಾಚಲ ಪ್ರದೇಶ ಅವರದ್ದು, ಲಡಾಕ್ ಪ್ರದೇಶ ಕೂಡ ಅವರದ್ದೇ, ತೈವಾನ್ ಕೂಡ ಅವರದ್ದೇ. ಈ ರೀತಿ ಹಲವಾರು ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳನ್ನು ತನ್ನದು ತನ್ನದು ಎಂದು ವಾದ ಮಂಡಿಸುತ್ತಿರುವ ಚೀನಾ ದೇಶವು ತನ್ನಲ್ಲಿಯೇ ಉದ್ಭವಿಸಿರುವ ಕರೋನ ವೈರಸ್ ಮಾತ್ರ ನಮ್ಮದಲ್ಲ ಬದಲಾಗಿ ಅದು ಪ್ರಾಣಿಗಳಿಂದ ಬಂದದ್ದು ನಮಗೆ ಸಂಬಂಧವಿಲ್ಲ ಎನ್ನುತ್ತಿದೆ.

ಈ ರೀತಿ ಪ್ರತಿಯೊಂದು ಗಡಿಯಲ್ಲಿಯೂ ಕೂಡ ಒಂದಲ್ಲ ಒಂದು ಖ್ಯಾತೆ ತೆಗೆದುಕೊಂಡು ಇತರ ದೇಶಗಳ ಜೊತೆ ಸದಾ ಸುಖಾ ಸುಮ್ಮನೆ ವಾದ ಮಾಡುತ್ತಾ ಮೊಂಡುತನ ಪ್ರದರ್ಶನ ಮಾಡಿರುವ ಚೀನಾ ದೇಶವು ಭಾರತದ ಹಲವಾರು ಭೂಭಾಗಗಳನ್ನು ತನ್ನದು ಎಂದು ವಾದ ಮಂಡಿಸುತ್ತದೆ. ಭಾರತದ ಗಡಿ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಬಾರದು ಎಂದು ಸದಾ ಖ್ಯಾತೆ ತೆಗೆಯುತ್ತಿದೆ. ಆದರೆ ನರೇಂದ್ರ ಮೋದಿ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿದ್ದಾರೆ.

ಇದರಿಂದ ತಲೆ ಕೆಡಿಸಿಕೊಂಡ ಚೀನಾ ದೇಶವು ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆದು ಭಾರತಕ್ಕೆ ಕಡಿವಾಣ ಹಾಕಲು ಶ್ರೀಲಂಕಾ, ಮಾಲ್ಡಿವ್ಸ್ ಹಾಗೂ ಪಾಕಿಸ್ತಾನ ದೇಶಗಳ ಜೊತೆ ಮಿಲಿಟರಿ ಲಾಜಿಸ್ಟಿಕ್ ಎಕ್ಸ್ಚೇಂಜ್ ಒಪ್ಪಂದ ಮಾಡಿಕೊಂಡು ನೆಲೆಗಳನ್ನು ಸ್ಥಾಪಿಸಿ ಭಾರತವನ್ನು ಸುತ್ತುವರಿಯಲು ಪ್ಲಾನ್ ರಚಿಸಿತ್ತು. ಇದಕ್ಕಾಗಿ ಈಗಾಗಲೇ ಹಲವಾರು ಒಪ್ಪಂದಗಳಿಗೆ ಕೂಡ ಸಹಿ ಹಾಕಿತ್ತು.

ಇದರಿಂದ ಭಾರತಕ್ಕೆ ಬಹಳ ಅಭದ್ರತೆ ಕಾಡುತ್ತಿದ್ದ ವಿಷಯ ಸುಳ್ಳಲ್ಲ ಯಾಕೆಂದರೆ, ಒಂದು ವೇಳೆ ಯುದ್ದ ನಡೆದರೆ ಭಾರತವು ನಾಲ್ಕು ದಿಕ್ಕುಗಳಿಂದ ತನ್ನನ್ನು ತಾನು ರಕ್ಷಿಸಿ ಬೇಕಾದಂತಹ ಅಗತ್ಯ ಉಂಟಾಗುತ್ತದೆ. ಇದನ್ನು ಗಮನಿಸಿದ ನರೇಂದ್ರ ಮೋದಿರವರು, ಚೀನಾದ ತಂತ್ರವನ್ನು ತಾನು ಬಳಸಿಕೊಂಡು ಮರು ತಂತ್ರ ಹೆಣೆದು ಇದೀಗ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಕಳೆದ 2016ರಲ್ಲಿ ಪ್ರಾರಂಭವಾದ ಮೋದಿ ರವರ ಈ ನಡೆ ಮೊದಲಿಗೆ ಅಮೇರಿಕಾ ದೇಶದ ಜೊತೆ ಲಾಜಿಸ್ಟಿಕ್ ಎಕ್ಸ್ಚೇಂಜ್ ಒಪ್ಪಂದ ಮಾಡಿಕೊಂಡಿತು, ಇದರಿಂದ ಅಮೇರಿಕಾ ದೇಶದ ಪ್ರಮುಖ ಚೆಕ್ಪಾಯಿಂಟ್ ಗಳಾದ ಜಿಬೌಟಿ, ಡಿಯೆಗೋ ಗರ್ಸಿಯ, ಗುವಾಮ್ ಮತ್ತು ಸುದೀಪ್ ಕೊಲ್ಲಿಯಲ್ಲಿರುವ ಅಮೇರಿಕಾ ದೇಶದ ನೆಲೆಗಳಿಗೆ ಭಾರತೀಯ ನೌಕಾಪಡೆ ಪ್ರವೇಶ ಪಡೆದಿತ್ತು. ಇದೇ ರೀತಿ ಭಾರತ ದೇಶವು ಫ್ರಾನ್ಸ್, ದಕ್ಷಿಣ ಕೊರಿಯ ಮತ್ತು ಸಿಂಗಾಪುರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದಾದ ಬಳಿಕ ಕೆಲವೇ ಕೆಲವು ದಿನಗಳ ಹಿಂದೆ ವರ್ಚುಯಲ್ ಸಭೆಯಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮತ್ತು ಅದಕ್ಕಿಂತ ಹೊರಗಡೆ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯನ್ನು ವಿಸ್ತರಿಸಲು ಭಾರತ-ಆಸ್ಟ್ರೇಲಿಯಾ ದೇಶದ ಜೊತೆ ಒಪ್ಪಂದ ಮಾಡಿಕೊಂಡು ಚೀನಾ ದೇಶಕ್ಕೆ ಶಾಕ್ ನೀಡಿತ್ತು.

ಇದಾದ ಬಳಿಕ ಇದೀಗ ವಿಶ್ವದಲ್ಲಿಯೇ ಬಲಾಢ್ಯ ಸೇನೆಗಳಲ್ಲಿ ಒಂದಾಗಿರುವ ಜಪಾನ್ ದೇಶದ ನೌಕಾಪಡೆಯಿಂದ ಒಪ್ಪಂದ ಮಾಡಿಕೊಳ್ಳಲು ಮುಂದಾಗಿ, ಎರಡು ದೇಶಗಳು ಮಿಲಿಟರಿ ಲಾಜಿಸ್ಟಿಕ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿವೆ. ಇಷ್ಟೇ ಅಲ್ಲದೆ ಭಾರತ ದೇಶವು ಇದೀಗ ರಷ್ಯಾ ಹಾಗೂ ಯುಕೆ ದೇಶಗಳ ಜೊತೆ ಇದೇ ರೀತಿಯ ಒಪ್ಪಂದಗಳನ್ನು ನಡೆಸಲು ಸಿದ್ದವಾಗುತ್ತಿದೆ. ಒಂದು ವೇಳೆ ಅದು ಮುಗಿದು ಬಿಟ್ಟರೆ ಚೀನಾ ದೇಶದ ಸುತ್ತ ಭಾರತದ ನೌಕಾಪಡೆಯು ತನ್ನ ಪ್ರಭಾವವನ್ನು ವಿಸ್ತರಿಸಬಹುದು.