ಹೊಸ ನಕ್ಷೆ ಮಂಡಿಸಿ, ಕೊರೋನಕ್ಕೆ ಭಾರತವೇ ಕಾರಣ ಎಂದ ನೇಪಾಳಿ ಪ್ರಧಾನಿಗೆ ಕೆಲವೇ ಕ್ಷಣದಲ್ಲಿ ಶಾಕ್ ನೀಡಿದ ನೇಪಾಳಿ ಜನತೆ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತದ ಭೂಭಾಗಗಳನ್ನು ತನ್ನದು ಎಂದು ಹೊಸ ನಕ್ಷೆ ಸಿದ್ದ ಪಡಿಸಿ ಮೊದಲನೇ ಬಾರಿಗೆ ಮಸೂದೆ ಮಂಡಿಸಲು ವಿಫಲವಾದ ಬಳಿಕ ಎರಡನೇ ಬಾರಿಗೆ ಸಭೆಯಲ್ಲಿ ಎಲ್ಲರನ್ನೂ ಒಪ್ಪಿಸಿ ನೇಪಾಳದ ಪ್ರಧಾನಿ ಇದೀಗ ಕೆಲವು ದಿನಗಳ ನಂತರ ಮಸೂದೆಯನ್ನು ಅಧಿಕೃತವಾಗಿ ಮಂಡಿಸಿ ಭಾರತದ ಭೂಭಾಗಗಳನ್ನು ತನ್ನದು ಎಂದು ಹೊಸ ನಕ್ಷೆ ಬಿಡುಗಡೆ ಮಾಡಿದ್ದಾರೆ ಹಾಗೂ ಭಾರತ ಆ ಭೂಬಾಗಗಳನ್ನು ಕಾಲಿ ಮಾಡಬೇಕು ಎಂದಿದ್ದಾರೆ.

ಈ ಮಸೂದೆ ಮಂಡಿಸುವ ಮುನ್ನ ನೇಪಾಳದ ಪ್ರಧಾನಿ ಭಾಷಣ ಮಾಡಿ ಭಾರತದ ವಿರುದ್ಧ ಟೀಕಾಪ್ರಹಾರ ಮಾಡಿದರು, ಶೇಕಡ 85 ರಷ್ಟು ಕೋರೋನ ಸೋಂಕಿತರು ಬಂದಿರುವುದು ಭಾರತದಿಂದ, ಭಾರತಕ್ಕೆ ಹೋಗಿ ಬಂದವರಿಗೆ ಕೋರೋನ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭಾರತದ ವಿರುದ್ಧ ಭಾಷಣ ಮಾಡಿದರು. ನೇಪಾಳದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಕೋರೋನ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ ಎಂದರೇ ಅದಕ್ಕೆ ಕಾರಣ ಭಾರತ ಎಂದರು. ಅಷ್ಟೇ ಅಲ್ಲದೇ ಗಡಿಯ ಭೂಭಾಗಗಳನ್ನು ಭಾರತ ತನ್ನದು ಎನ್ನುತ್ತಿದೆ ಎಂದು ಸುಖಾ ಸುಮ್ಮನೆ ಭಾರತವನ್ನು ಕೆಣಕಿದರು.

ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ನೇಪಾಳದ ಪ್ರಧಾನಿಯವರಿಗೆ ಜನರು ಶಾಕ್ ನೀಡಿದ್ದಾರೆ, ಹೌದು ಸ್ನೇಹಿತರೇ ಮಸೂದೆ ಮಂಡಿಸಿದ ಬಳಿಕ ನೇಪಾಳದ ಸಾವಿರಾರು ನಾಗರಿಕರು ಬೀದಿಗಿಳಿದರು. ಜನರನ್ನು ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಸುಖಾಸುಮ್ಮನೆ ಭಾರತದ ಮೇಲೆ ಆರೋಪ ಹೊರಿಸುತ್ತಿದ್ದಾರೆ, ಈ ಖುಷಿಗೆ ಯಾವ ಕಾರಣಕ್ಕೆ ನಾವು ತೆರಿಗೆ ನೀಡಬೇಕು ಎಂದು ಪ್ರಧಾನಿಗೆ ತಿರುಗೇಟು ನೀಡಿದರು.

ಅಷ್ಟೇ ಅಲ್ಲದೇ ನೇಪಾಳದ ಆರ್ಥಿಕತೆ ಹದಗೆಟ್ಟಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಭಾರತವನ್ನು ದೂಷಿಸದೇ ಆರ್ಥಿಕತೆಯ ಪುನರುಜ್ಜೀವನ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಟೆಸ್ಟಿಂಗ್ ನಡೆಸುವಂತೆ ಒತ್ತಾಯ ಮಾಡಿದರು. ಸರ್ಕಾರಕ್ಕೆ ಸಾಕಷ್ಟು ಸಮಯವಿದ್ದರೂ ಕೂಡ, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇಂದು ನೇಪಾಳದಲ್ಲಿ ಕೊರೋಣ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ ಮತ್ತು ವೈಫಲ್ಯವನ್ನು ಮರೆಮಾಚಲು ಭಾರತದ ಕಡೆ ಬೆಟ್ಟು ತೋರಿಸುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

Post Author: Ravi Yadav