ಸೂರ್ಯನ ಸ್ಥಾನಪಲ್ಲಟದಿಂದ ಬದವಾಗಲಿವೆ ರಾಶಿ ಫಲಗಳು! ಯಾರಿಗೆಲ್ಲ ಲಾಭ ಗೊತ್ತಾ??

ಸೂರ್ಯನ ಸ್ಥಾನಪಲ್ಲಟದಿಂದ ಬದವಾಗಲಿವೆ ರಾಶಿ ಫಲಗಳು! ಯಾರಿಗೆಲ್ಲ ಲಾಭ ಗೊತ್ತಾ??

0

ನಮಸ್ಕಾರ ಸ್ನೇಹಿತರೇ, ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯನ ಸ್ಥಾನಪಲ್ಲಟವು ಪ್ರತಿಯೊಂದು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದೀಗ ಇದೇ ಭಾನುವಾರ ಸೂರ್ಯನು ಮಧ್ಯಾಹ್ನ 12:10 ಕ್ಕೆ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಪ್ರತಿಯೊಂದು ರಾಶಿಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಈ ದಿನ ಸೂರ್ಯ ದೇವರನ್ನು ಪೂಜಿಸುವುದು ಉತ್ತಮ ಎಂದು ನಂಬಾಲಾಗಿದೆ. ಈ ಪ್ರವೇಶದಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಗಾರು ಆರಂಭವಾಗಲಿದೆ. ಈ ಲೇಖನದಲ್ಲಿ ವಿವಿಧ ರಾಶಿಗಳ ಮೇಲೆ ಬೀರುವ ಪ್ರಭಾವವನ್ನು ತಿಳಿದುಕೊಳ್ಳೋಣ.

ಮೇಷ:

ಸೂರ್ಯ ನಿಮ್ಮ ಮೂರನೇ ಮನೆಯಲ್ಲಿ ಇರುತ್ತಾನೆ, ಇದು ನಿಮಗೆ ಒಂದು ಉತ್ತಮ ಸಂಕೇತವಾಗಿದೆ. ನಿಮ್ಮ ಕೆಲಸ, ವ್ಯವಹಾರಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ವಿರೋಧಿಗಳು ಸೋಲು ಕಾಣುವುದು ಖಚಿತ. ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾಥಿಗಳಿಗೆ ಈ ಸಮಯ ಯಶಸ್ಸು ಸಿಗಲಿದೆ.

ವೃಷಭ:

ನಿಮ್ಮ ರಾಶಿಯಲ್ಲಿ ಸೂರ್ಯನು ಎರಡನೇ ಮನೆಯಲ್ಲಿ ಇರುತ್ತಾನೆ, ಇದು ನಿಮ್ಮ ಹಣವನ್ನು ಹೂಡಿಕೆ ಮಾಡಲು ಸರಿಯಾದ ಸಮಯ. ಆದರೆ ಈಗಿನ ವ್ಯವಹಾರಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಿಕರೊಂದಿಗೆ ವಾಗ್ವಾದ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಮಾಜದಲ್ಲಿ ಗೌರವ ಕಡಿಮೆಯಾಗುವಂತಹ ಘಟನೆಗಳು ನಡೆಯಲಿವೆ, ಆದರಿಂದ ಎಚ್ಚರವಾಗಿರಿ. ಸೂರ್ಯನ ಪಥಸಂಚಲನೆಯ ವೇಳೆ ಎಚ್ಚರದಿಂದಿರುವುದು ಒಳ್ಳೆಯದು.

ಮಿಥುನ:

ನಿಮ್ಮ ಆರ್ಥಿಕತೆ ಹಾಗೂ ವೈಯಕ್ತಿಕ ಜೀವನದ ಮೇಲೆ ಸೂರ್ಯನ ಸ್ಥಾನಪಲ್ಲಟವು ಪರಿಣಾಮ ಬೀಳಲಿದೆ. ಆದ್ದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಗಳಿವೆ. ಕೆಲವೊಂದು ಅಹಿತಕರ ಘಟನೆಗಳಿಂದ ನಿಮಗೆ ಅಪಪ್ರಚಾರ ಉಂಟಾಗಬಹುದು. ಆರೋಗ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಅಸಡ್ಡೆ ಬೇಡ, ದಾಂಪತ್ಯ ಜೀವನದಲ್ಲಿ ಕೂಡ ವಾಗ್ವಾದಗಳ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಕರ್ಕಾಟಕ:

ಸೂರ್ಯ ನಿಮ್ಮ ನಿಧಿಯ 12ನೇ ಅಭಿವ್ಯಕ್ತಿಗಳಲ್ಲಿ ಸಾಗುತ್ತದೆ, ಈ ಸಮಯದಲ್ಲಿ ನೀವು ಆರ್ಥಿಕ ಸವಾಲುಗಳನ್ನು ಎದುರಿಸಬಹುದು. ಕೆಲಸ ಹಾಗೂ ವ್ಯವಹಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಇಲ್ಲವಾದರೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಿಮ್ಮ ಕೆಲಸ ಬಿಟ್ಟು ಇತರರ ಯಾವುದೇ ವಿವಾದಕ್ಕೆ ಸಿಲುಕಲು ಹೋಗಬೇಡಿ. ಸ್ನೇಹಿತರು ಹಾಗೂ ನಿಮ್ಮ ಹಿರಿಯರ ಜೊತೆ ಯಾವುದೇ ಕಾರಣಕ್ಕೂ ಜಗಳ ಬೇಡ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು.

ಸಿಂಹ:

ನಿಮ್ಮ ರಾಶಿ ಚಕ್ರದ ಮೂಲಕ ಸೂರ್ಯ ಸಾಗುತ್ತಿರುವ ಕಾರಣ ಈ ಸಮಯ ಪ್ರತಿ ವಿಷಯದಲ್ಲಿಯೂ ನಿಮಗೆ ಯಶಸ್ಸು ಹಾಗೂ ಪ್ರಗತಿ ಸಿಗುತ್ತದೆ. ನೀವು ಉದ್ಯೋಗ ಅಥವಾ ವ್ಯವಹಾರಗಳನ್ನು ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಇದು ಸಶಕ್ತವಾದ ಸಮಯ. ಕೆಲಸದ ಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ ಹಾಗೂ ಸ್ನೇಹಿತರು ಮತ್ತು ಕುಟುಂಬದ ಸಹಕಾರದೊಂದಿಗೆ ಎಲ್ಲಾ ಒಳ್ಳೆಯದು ಆಗಲಿದೆ.

ಕನ್ಯಾ:

ನಿಮ್ಮ ರಾಶಿ ಚಕ್ರದಲ್ಲಿ 10ನೇ ಮನೆಯಲ್ಲಿ ಸೂರ್ಯ ಸಾಗುತ್ತಿರುತ್ತಾನೆ, ಶುಭ ಫಲಿತಾಂಶಗಳನ್ನು ನೀವು ಕಾಣಬಹುದು. ನಿಮಗೆ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುವ ನಿರೀಕ್ಷೆ ಇದೆ. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ನೀವು ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಿರುತ್ತದೆ.

ತುಲಾ:

9ನೇ ಮನೆಯಲ್ಲಿ ಸೂರ್ಯ ಇರುವ ಕಾರಣ ನಿಮ್ಮ ಸುತ್ತಮುತ್ತಲಿನ ಸುಳ್ಳು ಆರೋಪ ಹೊರಿಸುವವರ ಬಗ್ಗೆ ಬಹಳ ಕಾಳಜಿಯಿಂದ ಇರಬೇಕು. ಕಾರಣವಿಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮ ಸ್ನೇಹಿತರ ಹಾಗೂ ಕುಟುಂಬ ಸದಸ್ಯರ ಜೊತೆ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತವೆ. ನಿಮಗೆ ಈ ಸಮಯದಲ್ಲಿ ಅದೃಷ್ಟ ಕಡಿಮೆಯಾಗಲಿದ್ದು, ಆರೋಗ್ಯದ ಬಗ್ಗೆ ದಯವಿಟ್ಟು ಜಾಗರೂಕರಾಗಿರಿ.

ವೃಶ್ಚಿಕ:

ನಿಮ್ಮ ರಾಶಿಚಕ್ರ ಚಿಹ್ನೆಯಿಂದ 8ನೇ ಮನೆಯಲ್ಲಿ ಸೂರ್ಯನು ಸಾಗುತ್ತಾನೆ. ನಿಮಗೆ ಈ ಸಮಯದಲ್ಲಿ ದೈಹಿಕವಾಗಿ ಕೆಲವೊಂದು ಸಮಸ್ಯೆಗಳು ಕಾಣಿಸುತ್ತವೆ. ವೈವಾಹಿಕ ಜೀವನ ಅಶಾಂತಿಯಿಂದ ಕೂಡಿರುವ ಸಾಧ್ಯತೆಗಳು ಹೆಚ್ಚಾಗಿವೆ. ನೀವು ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ಸೋಲಿನ ಭಯ ಪಡಬೇಕಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗಿದ್ದು, ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಕೆಲವೊಂದು ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಧನಸ್ಸು:

ನಿಮ್ಮ ರಾಶಿಚಕ್ರದಿಂದ ಏಳನೇ ಮನೆಯಲ್ಲಿ ಸೂರ್ಯನು ಸಾಗುತ್ತಾನೆ, ಇದು ದಾಂಪತ್ಯ ವಿಚಾರದಲ್ಲಿ ಉತ್ತಮ ಸಂಕೇತವಲ್ಲ. ಹೊಟ್ಟೆಗೆ ಸಂಬಂಧಿಸಿದ ತೊಂದರೆ ಉಂಟಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ವಿರೋಧಿಗಳು ನಿಮ್ಮ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಲು-ಸಾಲು ಸವಾಲುಗಳು ಅಡೆತಡೆಗಳು ಎದುರಾಗುತ್ತವೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಬಹಳ ಜಾಗರೂಕರಾಗಿರಬೇಕು.

ಮಕರ:

ಈ ಬಾರಿ ಆರನೇ ಮನೆಯಲ್ಲಿ ಸೂರ್ಯ ಇರುವ ಕಾರಣ ನಿಮಗೆ ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಕಾಣಸಿಗುತ್ತದೆ. ಅದರಲ್ಲಿಯೂ ಉದ್ಯೋಗ ಹಾಗೂ ವ್ಯವಹಾರ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಹಲವಾರು ದಿನಗಳ ಹಿಂದಿನ ಹಾಗೂ ನಿಲ್ಲಿಸಿರುವ ಕಾರ್ಯಗಳು ಪೂರ್ಣಗೊಳ್ಳಲು ಪ್ರಾರಂಭವಾಗುತ್ತವೆ. ಸಂತೋಷದ ವಿಷಯಗಳು ನಿಮಗೆ ಕೇಳಿಬರುತ್ತವೆ.

ಕುಂಭ:

ನಿಮಗೆ ಐದನೇ ಮನೆಯಲ್ಲಿ ಸೂರ್ಯ ಸಾಗುತ್ತಾನೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಈ ಸಮಯದಲ್ಲಿ ನಿಮಗೆ ಎದುರಾಳಿಗಳ ಸಂಖ್ಯೆ ಹೆಚ್ಚಾಗಬಹುದು. ಸಾಲ ಪಡೆದುಕೊಳ್ಳಲು ಅಥವಾ ಸಾಲ ನೀಡಲು ಇದು ಉತ್ತಮವಾದ ಸಮಯ.

ಮೀನ:

ನಾಲ್ಕನೇ ಮನೆಯಲ್ಲಿ ಸೂರ್ಯ ಸಾಗುತ್ತಿರುವ ಕಾರಣ ನಿಮ್ಮ ಕೆಲಸ ಮತ್ತು ಉದ್ಯೋಗದಲ್ಲಿ ನೀವು ತೊಂದರೆ ಎದುರಿಸಬೇಕಾಗುತ್ತದೆ. ಪ್ರತಿಯೊಂದು ಮಾತಿನಲ್ಲೂ ಸಂಯಮ ಕಾಯ್ದುಕೊಳ್ಳಬೇಕು. ಕುಟುಂಬದ ಜೊತೆ ಅಭಿಪ್ರಾಯಗಳು ಕೇಳಿ ಬರುವ ಸಾಧ್ಯತೆಯಿದ್ದು ಸಂತೋಷದ ಕೊರತೆ ಕಾಣಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇತರರನ್ನು ಭೇಟಿಯಾಗುವುದನ್ನು ಸಾಧ್ಯವಾದಷ್ಟು ಮುಂದೂಡಿ.