ವ್ಯವಹಾರದಲ್ಲಿ ಯಶಸ್ಸುಗಳಿಸಲು ಹಾಗೂ ಹಣದ ಸಮಸ್ಯೆಗಳನ್ನು ನಿವಾರಿಸಲು ಚಾಣಕ್ಯನ ಈ ಸೂತ್ರಗಳನ್ನು ಅನುಸರಿಸಿ.

ವ್ಯವಹಾರದಲ್ಲಿ ಯಶಸ್ಸುಗಳಿಸಲು ಹಾಗೂ ಹಣದ ಸಮಸ್ಯೆಗಳನ್ನು ನಿವಾರಿಸಲು ಚಾಣಕ್ಯನ ಈ ಸೂತ್ರಗಳನ್ನು ಅನುಸರಿಸಿ.

ನಮಸ್ಕಾರ ಸ್ನೇಹಿತರೇ, ಈಗಿನ ಯುಗದಲ್ಲಿ ಪ್ರತಿಯೊಬ್ಬರಿಗೂ ಹಣ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಹಣವನ್ನು ಸಂಪಾದಿಸಲು ಸಾಕಷ್ಟು ಶ್ರಮಿಸುತ್ತಾರೆ. ಇನ್ನು ಹಲವಾರು ಜನರಿಗೆ ಹಣದ ಸಮಸ್ಯೆ ಎದ್ದು ಕಾಣುತ್ತಿದೆ, ಅಷ್ಟೇ ಅಲ್ಲದೆ ಹಣ ಇದ್ದರೂ ಕೂಡ ನಿರ್ವಹಣೆ ಮಾಡದೇ ಹಲವಾರು ಜನ ಅದನ್ನು ಕಳೆದು ಕೊಳ್ಳುತ್ತಿದ್ದಾರೆ. ಹೀಗಿರುವಾಗ ಹಲವಾರು ವರ್ಷಗಳ ಹಿಂದೆಯೇ ಆಚಾರ್ಯ ಚಾಣಕ್ಯ ರವರು ತಮ್ಮ ನೀತಿ ಪುಸ್ತಕದಲ್ಲಿ ಯಾವ ರೀತಿ ಹಣದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ‌ಇವುಗಳನ್ನು ಅನುಸರಿಸುವ ಮೂಲಕ ನೀವು ಯಶಸ್ಸನ್ನು ಗಳಿಸಬಹುದು ಹಾಗೂ ವ್ಯವಹಾರಗಳಲ್ಲಿ ಹಣದ ಸಮಸ್ಯೆ ಹಾಗೂ ನಿರ್ವಹಣೆ ಮಾಡುವುದನ್ನು ಕಲಿಯಬಹುದು.

ಯಾವುದೇ ಕೆಲಸ ಅಥವಾ ವ್ಯವಹಾರವಾಗಲಿ ಯಶಸ್ವಿಯಾದರೇ ಮಾತ್ರ ಹಣ ಬರುತ್ತದೆ. ಆದರೆ ಯಶಸ್ವಿಯಾಗುವುದು ಹೇಗೆ? ಇದರ ಕುರಿತು ಚಾಣಕ್ಯ ರವರು ಈ ರೀತಿ ಹೇಳಿದ್ದಾರೆ. ನೀವು ಯಾವುದೇ ಕೆಲಸವನ್ನು ಆರಂಭ ಮಾಡುವ ಮುನ್ನ ನಿಮಗೆ ಆ ಕೆಲಸ ಮಾಡಿ ಮುಗಿಸಲು ಸಮಯವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಸಮಯ ಇದ್ದಾಗ ಮಾತ್ರ ಏಕಾಗ್ರತೆಯಿಂದ ಕೆಲಸ ಮಾಡಬಹುದು. ಅಷ್ಟೇ ಅಲ್ಲದೇ ಸಂವೇದನಾಶೀಲ ವ್ಯಕ್ತಿಯು ತನ್ನ ಸಮಯದ ಅರಿವು ಇಲ್ಲದೇ ಯಾವುದೇ ಕೆಲಸವನ್ನು ಪ್ರಾರಂಭಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ತಪ್ಪು ಸಮಯದಲ್ಲಿ ಕೆಲಸ ಪ್ರಾರಂಭವಾಗುತ್ತದೆ ಹಾಗೂ ಇದು ಯಶಸ್ವಿಗೊಳ್ಳವ ಸಾಧ್ಯತೆಗಳು ಕಡಿಮೆ.

ಇನ್ನು ನೀವು ಸಮಯ ನಿರ್ಧಾರ ಮಾಡಿ ಯಾವುದೇ ಕೆಲಸ ಆರಂಭ ಮಾಡುವ ಮುನ್ನ ನಿಮ್ಮನ್ನು ನೀವು ಈ ಮೂರು ಪ್ರಶ್ನೆಗಳನ್ನು ಕೇಳಿ, ಮೊದಲನೆಯದು ನಾನು ಯಾವ ಕಾರಣಕ್ಕೆ ಯಾವ ಉದ್ದೇಶದಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ? ಈ ಕೆಲಸದಿಂದ ಹೊರಬರುವ ಫಲಿತಾಂಶವೇನು? ಈ ಕೆಲಸದಿಂದ ಯಾವ ರೀತಿ ಯಶಸ್ಸು ಗಳಿಸಬಹುದು. ಈ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪಡೆದುಕೊಳ್ಳದೇ ಕೆಲಸವನ್ನು ಆರಂಭಿಸಬೇಡಿ‌.

ನೀವು ಜೀವನದಲ್ಲಿ ಮುಂದುವರೆಸಲು ಬಯಸಿದರೆ ಹಳೆಯದನ್ನು ಎಂದಿಗೂ ಚಿಂತಿಸಬೇಡಿ. ನೀವು ಯಾವುದಾದರೂ ತಪ್ಪು ಮಾಡಿದ್ದರೇ ಅದರ ಕುರಿತು ಅರಿತುಕೊಂಡು ಸರಿಪಡಿಸುವ ಮೂಲಕ ಇಂದಿನ ದಿನವನ್ನು ತಪ್ಪಿಲ್ಲದೇ ಮಾಡುವಂತೆ ಪ್ರಯತ್ನಿಸಿ, ತಪ್ಪಿನ ಬಗ್ಗೆ ಆಲೋಚನೆ ಮಾಡುತ್ತಾ ಕುಳಿತರೆ ಯಶಸ್ಸು ನಿಮ್ಮ ಬಳಿ ಬರುವುದಿಲ್ಲ. ನೀವು ನಿಮ್ಮ ತಪ್ಪನ್ನು ಸರಿಮಾಡಿಕೊಂಡು ಮುಂದುವರಿದರೆ ಮಾತ್ರ ಭವಿಷ್ಯ ಸುರಕ್ಷಿತವಾಗಿರುತ್ತದೆ.

ಸಂವೇದನಾಶೀಲ ವ್ಯಕ್ತಿಯು ಯಾವಾಗಲೂ ತನ್ನ ಗಳಿಕೆ ಮತ್ತು ವೆಚ್ಚಗಳಲ್ಲಿ ಸರಿಯಾದ ಸಮಯವನ್ನು ಇಟ್ಟುಕೊಳ್ಳುತ್ತಾನೆ. ಅಂದರೆ ನೀವು ಈ ಕೆಲಸದಿಂದ ಒಂದು ರೂಪಾಯಿ ಅಥವಾ 1,00,000 ದುಡಿದರೂ ಕೂಡ ಎಷ್ಟು ಸಮಯ ಕೆಲಸ ಮಾಡಿ ಎಷ್ಟು ಗಳಿಸಿದ್ದೇನೆ ಎಂಬುದನ್ನೂ ತಿಳಿದು ಕೊಳ್ಳಲೇಬೇಕು. ಒಂದು ನಿಮಿಷಕ್ಕೆ ಒಂದು ರೂಪಾಯಿ ದುಡಿದರೇ ಉತ್ತಮ ಎನ್ನಬಹುದು, ಆದರೆ ಹತ್ತು ವರ್ಷ ದುಡಿದು ಒಂದು ಲಕ್ಷ ರೂಪಾಯಿ ದುಡಿದರೆ ಅವನನ್ನು ದಡ್ಡ ಎಂದು ಕರೆಯುತ್ತಾರೆ.

Money

ಇನ್ನು ನಿಮಗೆ ಎಷ್ಟೇ ಕನಸುಗಳು ಇರಲಿ, ನಿಮ್ಮ ಆದಾಯಕ್ಕೆ ತಕ್ಕಂತೆ ನಿಮ್ಮ ಜೀವನ ನಡೆಸಬೇಕು. ನಿಮ್ಮ ಕನಸುಗಳಿಗೆ ಹೆಚ್ಚು ಹಣ ಬೇಕೆಂದರೆ ನೀವು ಹಣ ದುಡಿಯುವ ಮಾರ್ಗಗಳನ್ನು ಕಂಡುಕೊಳ್ಳಬೇಕು, ಇಲ್ಲ ಎಂದು ಸಾಲ ಮಾಡಲು ಆರಂಭಿಸಿದರೆ ನೀವು ಸಾಲಗಾರರಾಗಿ ಉಳಿದುಕೊಳ್ಳುತ್ತೀರಾ. ಆದ್ದರಿಂದ ಆದಾಯಕ್ಕಿಂತ ಹೆಚ್ಚು ಹಣವನ್ನು ಯಾವತ್ತಿಗೂ ಖರ್ಚು ಮಾಡಬಾರದು.

ಇನ್ನು ಕೊನೆಯದಾಗಿ ಯಾವುದೇ ಕೆಲಸದಲ್ಲಿ ಯಶಸ್ವಿಯಾಗಬೇಕಾದರೆ ನೀವು ಮೊದಲು ನಿಮ್ಮ ಗುರಿಯನ್ನು ನಿಗದಿಪಡಿಸಬೇಕು. ತದನಂತರ ಗಳಿಸುವ ಅಂದಾಜು ಹಣವನ್ನು ಲೆಕ್ಕ ಹಾಕಿಕೊಂಡು ಗುರಿ ನಿರ್ಧಾರ ಮಾಡಬೇಕು. ನಿಮ್ಮ ಕೆಲಸ ಯಶಸ್ವಿ ಆಗುವವರೆಗೂ ಯಾರೊಂದಿಗೂ ಚರ್ಚಿಸಬೇಡಿ. ತನ್ನ ಕೆಲಸವನ್ನು ಎಚ್ಚರಿಕೆಯಿಂದ ಮಾಡುವ ವ್ಯಕ್ತಿಯು ಯಶಸ್ಸನ್ನು ಪಡೆಯುತ್ತಾರೆ.