ಮಮತಾಗೆ ಬಿಗ್ ಶಾಕ್ ನೀಡಿದ ಟೈಮ್ಸ್ ನೌ ಸರ್ವೇ ! ಶಾ ಮೋದಿ ಜೋಡಿ ಗೆ ಭರ್ಜರಿ ಸಿಹಿ ಸುದ್ದಿ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದಲ್ಲಿ ಕಳೆದ 9 ವರ್ಷಗಳಿಂದ ಮಮತಾ ಬ್ಯಾನರ್ಜಿ ರವರು ಅಧಿಕಾರ ನಡೆಸುತ್ತಿದ್ದಾರೆ. ಕಳೆದ ಬಾರಿಯ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ದೇಶದ ಎಲ್ಲೆಡೆ ಮೋದಿ ರವರ ಅಲೆಯ ಹೊರತಾಗಿಯೂ, ಮಮತಾ ಬ್ಯಾನರ್ಜಿ ರವರು ಎರಡನೇ ಬಾರಿಗೆ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ TMC ಪಕ್ಷಕ್ಕಿಂತ ಕಡಿಮೆ ಸೀಟು ಗಳಿಸಿದರೂ ಕೂಡ ತನ್ನ ಗೆಲುವಿನ ಸಂಖ್ಯೆಯನ್ನು 2 ರಿಂದ 16 ಕ್ಕೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಪಶ್ಚಿಮ ಬಂಗಾಳದ ರಾಜಕೀಯ ಪಂಡಿತರು ಹಾಗೂ ಕೆಲವು ಟಿಎಂಸಿ ನಾಯಕರು ಮೋದಿ ಮುಖ ನೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಮತ ನೀಡಿರಬಹುದು. ಆದರೆ ವಿಧಾನಸಭೆಯಲ್ಲಿ ಬಿಜೆಪಿ ಈ ಬಾರಿ ಎರಡಂಕಿ ಕೂಡ ದಾಟುವುದಿಲ್ಲ ಎನ್ನುತ್ತಿದ್ದರು.(ಕಳೆದ ಬಾರಿ ಕೇವಲ 16 ರಲ್ಲಿ ಬಿಜೆಪಿ ಗೆದ್ದಿತ್ತು).

ಅದರಲ್ಲಿಯೂ ಕೋಲ್ಕತ್ತಾ ಎಂದರೆ ಮಮತಾ ಬ್ಯಾನರ್ಜಿ ರವರ ಭದ್ರಕೋಟೆಯಾಗಿತ್ತು. ಆದರೆ ಇದೀಗ ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಛಿದ್ರವಾಗುವಂತೆ ಕಾಣುತ್ತಿದೆ, ಯಾಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಪಶ್ಚಿಮ ಬಂಗಾಳ ರಾಜ್ಯದ ಪಶ್ಚಿಮ ಹಾಗೂ ಉತ್ತರ ಭಾಗಗಳಲ್ಲಿ ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡಿತ್ತು, ಆದರೆ ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಎನಿಸಿಕೊಂಡಿರುವ ಮಧ್ಯ
ಹಾಗೂ ದಕ್ಷಿಣದಲ್ಲಿ ಟಿಎಂಸಿ ಭರ್ಜರಿ ಗೆಲುವನ್ನು ಕಾಣುವ ಮೂಲಕ ಬಿಜೆಪಿ ಪಕ್ಷಕ್ಕಿಂತ ಹೆಚ್ಚು ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಕೊಲ್ಕತಾದ ಎಲ್ಲಾ 8 ಸ್ಥಾನಗಳು ಸೇರಿವೆ.

ಹೀಗಿರುವಾಗ ಕೋಲ್ಕತಾ ನಗರದಲ್ಲಿ ಮಮತಾ ಬ್ಯಾನರ್ಜಿ ರವರನ್ನು ಸೋಲಿಸುವುದು ಅಸಾಧ್ಯ ಎಂದು ನಂಬಲಾಗಿತ್ತು. ಆದರೆ ಇದೀಗ ಮಮತಾ ಬ್ಯಾನರ್ಜಿ ರವರ ಕೊರೊನ ನಿರ್ವಹಣೆಯ ಕುರಿತು ಕೋಲ್ಕತಾ ಜನರು ಬೇಸರಗೊಂಡಿದ್ದಾರೆ ಎಂಬ ಮಾಹಿತಿಯನ್ನು ಟೈಮ್ಸ್ ನೌ ಬೋರಾಕ್ಸ್ ಮೀಡಿಯಾ ಸಮೀಕ್ಷೆ ತೋರಿದೆ. ಹೌದು ಸ್ನೇಹಿತರೇ, ಮಮತಾ ಬ್ಯಾನರ್ಜಿ ರವರು ಕೋರೋನ ಪರಿಸ್ಥಿತಿಯನ್ನು ನಿವಾರಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ. ಯಾಕೆಂದರೆ ಟೈಮ್ಸ್ ನೌ ನಡೆಸಿದ ಈ ಸಮೀಕ್ಷೆಯಲ್ಲಿ ಕೇವಲ ಶೇಕಡಾ ಆರರಷ್ಟು ಜನ ಮಾತ್ರ ಮಮತಾ ಬ್ಯಾನರ್ಜಿ ಅವರ ಪರವಾಗಿ ಮತ ನೀಡಿದ್ದಾರೆ, ಉಳಿದ ಶೇಕಡಾ 94 ರಷ್ಟು ಜನ ನಿರ್ವಹಣೆಯನ್ನು ಒಪ್ಪಿಕೊಂಡಿಲ್ಲ.

ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ರವರ ಭದ್ರಕೋಟೆಯ ಜನರ ಅಭಿಪ್ರಾಯ ಮಮತಾ ಬ್ಯಾನರ್ಜಿ ರವರ ನಿದ್ದೆಗೆಡಿಸಿದೆ. ಕಳೆದ ಒಂದು ವರ್ಷದಿಂದ ವಿಧಾನಸಭಾ ಚುನಾವಣೆಗಾಗಿ ಇನ್ನಿಲ್ಲದ ತಯಾರಿ ನಡೆಸುತ್ತಿರುವ ಬ್ಯಾನರ್ಜಿ ರವರು ಈ ಬಾರಿ ಪ್ರಶಾಂತ್ ಕಿಶೋರ್ ಅವರನ್ನು ಇನ್ನು ವಿಧಾನಸಭೆಗೆ ಒಂದು ವರ್ಷ ಇದ್ದಾಗಲೇ ಅಖಾಡಕ್ಕಿಳಿದು ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ. ಹೀಗಿರುವಾಗ ಒಂದೆಡೆ ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಬಿಜೆಪಿ ಪಕ್ಷ ಈಗಾಗಲೇ ಪಾರುಪತ್ಯ ಸ್ಥಾಪಿಸಿದ್ದು, ಇದೀಗ ಕೋಲ್ಕತ್ತಾ ನಗರವು ಈ ರೀತಿ ಆದರೆ ಮಮತಾ ಬ್ಯಾನರ್ಜಿ ರವರ ಟಿಎಂಸಿ ಪಕ್ಷ ಅಧಿಕಾರ ಕಳೆದು ಕೊಳ್ಳುವುದು ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ, ಇದು ಪ್ರಶಾಂತ್ ಕಿಶೋರ್ ಅವರಿಗೂ ಕೂಡ ಅವರ ಸವಾಲಾಗಿ ಪರಿಣಮಿಸಿದೆ.

Post Author: Ravi Yadav