ಸಾಲು ಸಾಲು ಸೆಲೆಬ್ರೆಟಿಗಳು ಭೇಟಿ ನೀಡುವ ಮುಂಬೈ ಸಿದ್ದಿ ವಿನಾಯಕನ ವಿಶೇಷತೆ ತಿಳಿಯಿರಿ.

ಸಾಲು ಸಾಲು ಸೆಲೆಬ್ರೆಟಿಗಳು ಭೇಟಿ ನೀಡುವ ಮುಂಬೈ ಸಿದ್ದಿ ವಿನಾಯಕನ ವಿಶೇಷತೆ ತಿಳಿಯಿರಿ.

ನಮಸ್ಕಾರ ಸ್ನೇಹಿತರೇ, ಮುಂಬೈ ನಗರದಲ್ಲಿರುವ ಸಿದ್ದಿ ವಿನಾಯಕನ ದೇವಸ್ಥಾನಕ್ಕೆ ಐಶ್ವರ್ಯ ರೈ, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಕರೀನಾ ಕಪೂರ್, ಕತ್ರಿನಾ ಕೈಫ್ ಹೀಗೆ ಸಾಲು ಸಾಲು ಸೆಲೆಬ್ರೆಟಿಗಳು ಭೇಟಿ ನೀಡಿ ಗಣೇಶನ ಆಶೀರ್ವಾದ ಪಡೆಯುತ್ತಾರೆ. ಇಂದು ನಾವು ಈ ಸಿದ್ದಿ ವಿನಾಯಕ ದೇವಸ್ಥಾನ ವಿಶೇಷತೆ, ವಿನ್ಯಾಸ, ನಿರ್ಮಾಣದ ಹಿಂದಿನ ಕಥೆಯ ಬಗ್ಗೆ ತಿಳಿದು ಕೊಳ್ಳೋಣ.

ಈ ದೇವಸ್ಥಾನ ಮುಂಬೈ ನಗರದ ಪ್ರಸಿದ್ದ್ದ ಹಿಂದೂ ದೇವಾಲಯಗಲ್ಲಿ ಒಂದಾಗಿದೆ, ಸಿದ್ದಿ ಗಣಪತಿಯನ್ನು ನೋಡಲು ಸಾವಿರಾರು ಜನರು ಆಗಮಿಸುತ್ತಾರೆ. ಇಲ್ಲಿ ಮನಸಿನಲ್ಲಿ ಬೇಡಿಕೊಂಡ ಎಲ್ಲ ಬೇಡಿಕೆಗಳು ನೆರವೇರುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ. ನೂರಾರು ಸೆಲೆಬ್ರೆಟಿಗಳು ದೇಣಿಗೆ ನೀಡಿ, ದೇಶದ ಶ್ರೀಮಂತ ದೇವಾಲಯಗಳ ಸಾಲಿನಲ್ಲಿ ಕಂಡು ಬರುತ್ತದೆ.

ಈ ದೇವಾಲಯವನ್ನು ಸಿದ್ದಿ ವಿನಾಯಕ ಎಂದು ಯಾಕೆ ಕರೆಯುತ್ತಾರೆ?

ಗಣೇಶನನ್ನು ಹಲವಾರು ಕಡೆ ಸಿದ್ದಿ ವಿನಾಯಕನ ರೂಪದಲ್ಲಿ ಪೂಜಿಸಲಾಗುತ್ತದೆ. ವಿಶೇಷವೆನೆಂದರೆ, ಇಲ್ಲಿನ ಗಣೇಶನ ಕಾಂಡ/ಸೊಂಡಿಲನ್ನು ಬಲಕ್ಕೆ ತಿರುಗಿಸಲಾಗಿರುತ್ತದೆ. ಮಾಹಿತಿಯ ಪ್ರಕಾರ ಈ ರೀತಿಯ ದೇವಾಲಯಗಳನ್ನು ಸಿದ್ಧಪೀಠ ಎನ್ನುತ್ತಾರೆ. ಇಲ್ಲಿರುವ ಗಣೇಶನಿಗೆ ವಿಶೇಷವಾಗಿ ಮೂರನೇ ಕಣ್ಣು ಕೂಡ ಇದೆ. ಮೂರ್ತಿ ಎರಡೂವರೆ ಅಡಿ ಎತ್ತರವಿದ್ದು, ಎರಡು ಅಡಿ ಅಗಲವಿದೆ. ದೇವಾಲಯದ ಮರದ ಬಾಗಿಲುಗಳು ಅಷ್ಟವಿನಾಯಕ್ ಅನ್ನು ಪ್ರತಿಬಿಂಬಿಸುತ್ತವೆ. ದೇವಾಲಯದ ಒಳಗಿನ ಛಾವಣಿಗಳನ್ನು ಚಿನ್ನದ ಲೇಪನದಿಂದ ನಿರ್ಮಿಸಲಾಗಿದೆ. ಒಳಗಡೆ ಹನುಮಾನ್ ದೇವಾಲಯ ಕೂಡ ಇದೆ.

ದೇವಾಲಯದ ನಿರ್ಮಾಣದ ಹಿಂದಿನ ಕಥೆ ಏನು?

ಇಲ್ಲಿ ಕೇಳಿ ಬರುವ ಮಾಹಿತಿಯ ಪ್ರಕಾರ 1801 ರ ನವೆಂಬರ್ 19 ರಂದು ಈ ದೇವಾಲಯದ ನಿರ್ಮಾಣವಾಯಿತು. ಒಬ್ಬರು ರೈತ ಮಹಿಳೆಗೆ ಮಕ್ಕಳು ಇರಲಿಲ್ಲ, ಅದಕ್ಕಾಗಿಯೇ ಆ ರೈತ ಮಹಿಳೆ ದೇವಾಲಯಕ್ಕೆ ಬರುವ ಮಹಿಳೆಯರು ದೇವರ ಆಶೀರ್ವಾದದಿಂದ ಬಂಜೆತನದಿಂದ ಹೊರಗಡೆ ಬರಬೇಕು ಎಂದು ರೈತ ಮಹಿಳೆ ಆಶಿಸಿ ದೇವಾಲಯ ಕಟ್ಟಲು ಹಣ ನೀಡಿದರು ಎಂದು ತಿಳಿದುಬಂದಿದೆ.

ದೇವಾಲಯ ವಿನ್ಯಾಸವೇಗಿದೆ ಹಾಗೂ ಎಲ್ಲಿದೆ?

ಈ ದೇವಾಲಯವು 5 ಅಂತಸ್ತಿನ ದೇವಾಲಯವಾಗಿದೆ. ಮುಂಬೈ ನಗರದ ಪ್ರಭಾದೇವಿ ಪ್ರದೇಶದಲ್ಲಿ ಇದೆ. 5 ಅಂತಸ್ತಿನಲ್ಲಿ ಗಣೇಶ ಮ್ಯೂಸಿಯಂ, ಗಣೇಶ ವಿದ್ಯಾಪೀಠ ಮತ್ತು ಬಡವರಿಗೆ ಉಚಿತ ಆಸ್ಪತ್ರೆ, ಅಡುಗೆ ಮನೆ ಇವೆ. ಕಪ್ಪು ಕಲ್ಲಿನಿಂದ ಮೂರ್ತಿಯನ್ನು ಕೆತ್ತಲಾಗಿದೆ.