ರಾತ್ರೋರಾತ್ರಿ ಒಂದು ವದಂತಿಯಿಂದ ನಿದ್ದೆಗೆಟ್ಟ ಪಾಕಿಸ್ತಾನ ! ಭಾರತೀಯ ಸೇನೆಯ ಹವಾ ಎಷ್ಟಿದೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ

ರಾತ್ರೋರಾತ್ರಿ ಒಂದು ವದಂತಿಯಿಂದ ನಿದ್ದೆಗೆಟ್ಟ ಪಾಕಿಸ್ತಾನ ! ಭಾರತೀಯ ಸೇನೆಯ ಹವಾ ಎಷ್ಟಿದೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ

ನಮಸ್ಕಾರ ಸ್ನೇಹಿತರೇ, ಭಾರತೀಯ ಸೇನೆಯು ತನ್ನ ಗಡಿಯಲ್ಲೇ ಅಷ್ಟೇ ಅಲ್ಲಾ ಇದೀಗ ಮುಲಾಜಿಲ್ಲದೆ ಇತರ ದೇಶಗಳಿಗೆ ನುಗ್ಗಿ ತನ್ನ ಟಾರ್ಗೆಟ್ ಗಳನ್ನು ಮುಗಿಸಿ ಗೆಲುವಿನೊಂದಿಗೆ ವಾಪಸ್ಸಾಗುತ್ತಿದೆ. ಇದುವರೆಗೂ ಮೂರು ಬಾರಿ ಭಾರತದ ಗಡಿ ದಾಟಿರುವ ಭಾರತೀಯ ಸೇನೆಯು ಭರ್ಜರಿ ಗೆಲುವಿನೊಂದಿಗೆ ಹಿಂತಿರುಗಿದೆ.

ಮಯನ್ಮಾರ್ ನಲ್ಲಿ ಕೆಲವೇ ಕ್ಷಣದಲ್ಲಿ ಕೆಲಸ ಮುಗಿಸಿ ವಾಪಸ್ಸು ಬಂದಿದ್ದ ಭಾರತೀಯ ಸೇನೆಯು ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನ ಮೂಲಕ ಪಾಕಿಸ್ತಾನಕ್ಕೆ ಭಾರತವನ್ನು ಕೆಣಕಿದರೆ ಯಾವ ಪರಿಸ್ಥಿತಿ ಉಂಟಾಗಲಿದೆ ಎಂಬುದನ್ನು ತೋರಿಸಿಕೊಟ್ಟಿತ್ತು. ಇದೀಗ ಗಡಿಯಲ್ಲಿ ಮತ್ತೊಮ್ಮೆ ಭಾರತೀಯ ಸೇನೆಯು ಭರ್ಜರಿ ಫಾರ್ಮ್ನಲ್ಲಿ ಇದೆ, ಹೀಗಿರುವಾಗ ಕಳೆದ ಬಾರಿಯಂತೆ ಏನೋ ನಡೆಯುತ್ತದೆ ಎಂಬ ವದಂತಿಯಿಂದ ಪಾಕಿಸ್ತಾನವು ಇಡೀ ರಾತ್ರಿ ನಿದ್ದೆಗೆಟ್ಟ ವಿಷಯ ಬೆಳಕಿಗೆ ಬಂದಿದೆ, ಒಮ್ಮೆ ಓದಿ ಜೋರಾಗಿ ನಕ್ಕು ಗರ್ವದಿಂದ ಹೇಳಿ ಇದು ಭಾರತೀಯ ಸೇನೆಯ ತಾಕತ್ತು ಎಂದು.

ಹೌದು ಸ್ನೇಹಿತರೇ, ನಿನ್ನೆ ರಾತ್ರಿ ಕೆಲವು ಜನರು ಕರಾಚಿ ನಗರದ ಮೇಲೆ ಯುದ್ಧ ವಿಮಾನಗಳು ಹಾರಾಡುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ, ಇದನ್ನು ಕಂಡ ಪಾಕಿಸ್ತಾನ ಸೇನೆಯು ತನ್ನ ಯುದ್ಧ ವಿಮಾನಗಳೇ ಎಂದು ಪರೀಕ್ಷಿಸಿದೆ. ಆದರೆ ಯುದ್ಧ ವಿಮಾನಗಳು ಪಾಕಿಸ್ತಾನದ್ದು ಅಲ್ಲ ಎಂದು ತಿಳಿದ ತಕ್ಷಣ ಅಲರ್ಟ್ ಆಗಿ ಭಾರತದ ಯುದ್ಧ ವಿಮಾನಗಳು ಬಂದಿರಬೇಕು ಎಂದು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತನ್ನ ಯುದ್ಧ ವಿಮಾನಗಳನ್ನು ಹಾರಿಸಲು ಆರಂಭಿಸಿದೆ, ಅಷ್ಟೇ ಅಲ್ಲದೇ ಕರಾಚಿ ನಗರದಲ್ಲಿ ಸಂಪೂರ್ಣ ಕರೆಂಟ್ ಬಂದ್ ಮಾಡಿ ಇಡೀ ನಗರವನ್ನು ಕತ್ತಲಿನಲ್ಲಿ ಇರಿಸಿದೆ. ರಾತ್ರಿ ಇಡೀ ಪಾಕಿಸ್ತಾನ ಯುದ್ಧ ವಿಮಾನಗಳು ಭಾರತೀಯ ಯುದ್ಧ ವಿಮಾನಗಳನ್ನು ಹುಡುಕಿ ಹುಡುಕಿ ಸುಸ್ತಾಗಿವೆ.