ನೇಪಾಳದ ಗಡಿ ಖ್ಯಾತೆ ನಂತರವೂ ಕೊಟ್ಟ ಮಾತು ತಪ್ಪುವುದಿಲ್ಲ ಎಂದ ಭಾರತ ! ಇದು ಭವ್ಯ ಭಾರತದ ಸಂಸ್ಕೃತಿ ! ಏನಂತೀರಾ?

ನೇಪಾಳದ ಗಡಿ ಖ್ಯಾತೆ ನಂತರವೂ ಕೊಟ್ಟ ಮಾತು ತಪ್ಪುವುದಿಲ್ಲ ಎಂದ ಭಾರತ ! ಇದು ಭವ್ಯ ಭಾರತದ ಸಂಸ್ಕೃತಿ ! ಏನಂತೀರಾ?

ನಮಸ್ಕಾರ ಸ್ನೇಹಿತರೇ, ಭಾರತ ಹಾಗೂ ನೇಪಾಳ ರಾಷ್ಟ್ರಗಳು ಹಲವಾರು ವರ್ಷಗಳಿಂದ ಅದ್ವಿತೀಯ ಸಂಬಂಧವನ್ನು ಹೊಂದಿದ್ದವು. ಆದರೆ ಇತ್ತೀಚೆಗೆ ಅಲ್ಲಿನ ಕಮ್ಯೂನಿಸ್ಟ್ ಸರ್ಕಾರದ ಚೀನಾ ದೇಶದ ಕಮ್ಯೂನಿಸ್ಟ್ ಸರ್ಕಾರದ ಜೊತೆ ಸೇರಿಕೊಂಡು ಸುಖಾ ಸುಮ್ಮನೆ ಭಾರತದ ಜೊತೆ ಗಡಿ ಖ್ಯಾತೆ ತೆಗೆದಿದೆ.

ಭಾರತದ ಕೆಲವು ಪ್ರದೇಶಗಳನ್ನು ತನ್ನ ಪ್ರದೇಶ ಎಂದು ನಕ್ಷೆ ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದ್ದ ನೇಪಾಳದ ಪ್ರಧಾನಿ, ತದ ನಂತರ ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಮೊದಲ ಬಾರಿಗೆ ವಿಫಲವಾಗಿ, ಎರಡನೇ ಬಾರಿಗೆ ಯಶಸ್ವಿಯಾಗಿದ್ದರು‌‌. ಆದರೆ ಭಾರತ ದೇಶವು ಯಾವುದೇ ಕಾರಣಕ್ಕೂ ಒಂದು ಅಡಿ ಜಾಗವನ್ನು ಕೂಡ ಬಿಟ್ಟು ಕೊಡಲು ಸಾಧ್ಯವಿಲ್ಲ ಅವೆಲ್ಲವೂ ಭಾರತದ ಭೂಪ್ರದೇಶಗಳು ಎಂದು ಸ್ಪಷ್ಟಪಡಿಸಿ ಆದೇಶ ಹೊರಡಿಸಿತ್ತು. ಈಗಲೂ ಕೂಡ ಆ ಪ್ರದೇಶಗಳು ನಮ್ಮದು ಎಂದು ನೇಪಾಳ ಸರ್ಕಾರ ವಾದ ಮಾಡುತ್ತಿದೆ, ಆದರೆ ಭಾರತ ದೇಶ ಮಾತ್ರ ಯಾಕೆ ತಾನು ಇತರ ದೇಶಗಳಿಗಿಂತ ಭಿನ್ನ ಎಂಬುದನ್ನು ಮತ್ತೊಮ್ಮೆ ಈ ನಡೆಯ ಮೂಲಕ ಸಾಬೀತುಪಡಿಸಿದೆ. ಇದು ಭಾರತದ ಭವ್ಯ ಪರಂಪರೆಯ ಸಂಸ್ಕೃತಿ ಎಂದು ನಾವು ಹೆಮ್ಮೆ ಯಿಂದ ಹೇಳುತ್ತೇವೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನೇಪಾಳ ದೇಶದಲ್ಲಿ 2015 ರಲ್ಲಿ ಪ್ರಬಲ ಭೂಕಂಪ ಆಗಿತ್ತು, ಭೂಕಂಪವಾದಾಗ ಯಾವುದೇ ರಾಷ್ಟ್ರಗಳು ನೇಪಾಳದ ಬೆಂಬಲಕ್ಕೆ ನಿಲ್ಲಲಿಲ್ಲ, ಅಂದು ಭಾರತ ದೇಶವು ಕೂಡಲೇ ನೇಪಾಳಕ್ಕೆ ಸಹಾಯ ಹಸ್ತ ಚಾಚಿ ಪ್ರತಿಯೊಂದು ಹಂತದಲ್ಲಿಯೂ ಜೊತೆಯಲ್ಲಿ ನಿಂತಿತ್ತು. ಅಷ್ಟೇ ಅಲ್ಲದೇ ಭೂಕಂಪದಿಂದ ಕುಸಿದಿರುವ 56 ಶಾಲೆಗಳನ್ನು ಪುನರ್ನಿರ್ಮಾಣ ಮಾಡಿಕೊಡುತ್ತೇವೆ ಎಂದು ಮಾತು ನೀಡಿತ್ತು. ಈ ಮಾತಿಗೆ ಈಗಲೂ ಕೂಡ ಭಾರತ ಸರ್ಕಾರ ಬದ್ಧವಾಗಿದ್ದು, ನೇಪಾಳ ದೇಶದಲ್ಲಿ 56 ಶಾಲೆಗಳನ್ನು ಕಟ್ಟಿಕೊಡುವ ಕಾರ್ಯವನ್ನು ಮುಂದುವರೆಸಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಇದನ್ನು ಇದೀಗ ಭಾರತದ ನೇಪಾಳ ರಾಯಭಾರಿ ಸ್ಪಷ್ಟಪಡಿಸಿದ್ದು ಯಾವುದೇ ಕಾರಣಕ್ಕೂ ಮಾನವೀಯತೆ ದೃಷ್ಟಿಯಿಂದ ಈ ನಿರ್ಧಾರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.