ಸೈನಿಕರಿಂದ ಬಂದ ವಿಶೇಷ ಮಾತುಗಳಿಗೆ ಉತ್ತರ ನೀಡಿ ಮತ್ತೊಮ್ಮೆ ಮನಗೆದ್ದ ಸೋನು ಸೂದ್ ! ಇಬ್ಬರನ್ನು ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ಸೈನಿಕರಿಂದ ಬಂದ ವಿಶೇಷ ಮಾತುಗಳಿಗೆ ಉತ್ತರ ನೀಡಿ ಮತ್ತೊಮ್ಮೆ ಮನಗೆದ್ದ ಸೋನು ಸೂದ್ ! ಇಬ್ಬರನ್ನು ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಊರುಗಳಿಗೆ ಹೋಗಲು ಕಷ್ಟಪಡುತ್ತಿದ್ದ ವಲಸೆ ಕಾರ್ಮಿಕರನ್ನು ಕಂಡ ಸೋನು ಸೂದ್ ಅವರು ಸಾವಿರಾರು ಜನರನ್ನು ತಮ್ಮ ಮನೆಗಳಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಲಾಕ್ ಡೌನ್ ಮುಗಿದಿದ್ದರೂ ಕೂಡ ವಲಸೆ ಕಾರ್ಮಿಕರ ಪರವಾಗಿ ನಿಂತಿರುವ ಸೋನು ಸೂದ್ ರವರು ಇನ್ನೂ ತಮ್ಮ ಅದ್ಭುತ ಕಾರ್ಯವನ್ನು ಮುಂದುವರಿಸಿದ್ದಾರೆ. ಇದನ್ನು ಕಂಡ ಕೆಲವು ಗಡಿ ಕಾಯುತ್ತಿರುವ ಸೈನಿಕರು ಟ್ವಿಟರ್ನಲ್ಲಿ ಸೆಲ್ಫಿ ತೆಗೆದುಕೊಂಡು ಸೋನು ಸೂದ್ ರವರನ್ನು ಟ್ಯಾಗ್ ಮಾಡಿ ಉತ್ತಮ ಕೆಲಸ ಸರ್, ಸೈನಿಕರ ಪರವಾಗಿ ನಾವು ನಿಮಗೆ ಧನ್ಯವಾದ ತಿಳಿಸುತ್ತಿದ್ದೇವೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ಸೂದ್ ರವರು ಸೆಲ್ಯೂಟ್, ನನ್ನ ಎಲ್ಲಾ ಮಿಲಿಟರಿ ಸಹೋದರರಿಗೆ. ನೀವು ನಮ್ಮ ದೇಶದ ಹೆಮ್ಮೆ, ನಿಮ್ಮ ಕೊಡುಗೆಗಳ ಮುಂದೆ ನನ್ನ ಕೊಡುಗೆ ಏನು ಇಲ್ಲ ಜೈಹಿಂದ್ ಎಂದು ರಿಪ್ಲೈ ಕೂಡ ಮಾಡಿದ್ದಾರೆ. ಇದೀಗ ಈ ಎರಡು ಟ್ವೀಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದ್ದು, ದೇಶದ ಒಳಗಡೆ ವಲಸಿಗರನ್ನು ರಕ್ಷಿಸುತ್ತಿರುವ ಸೋನು ಸೂದ್ ಹಾಗೂ ಗಡಿಯಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವ ಸೈನಿಕರು ಒಬ್ಬರಿಗೊಬ್ಬರು ಧನ್ಯವಾದ ಹೇಳುತ್ತಿದ್ದಾರೆ. ಇವರಿಬ್ಬರಿಗೆ ನಾವು ಒಟ್ಟಾಗಿ ಸೇರಿ ಹೇಳೋಣವೇ? ಎಂದು ಹಲವಾರು ಜನ ಟ್ರೆಂಡ್ ಸೃಷ್ಟಿಸಿದ್ದಾರೆ.