ಇಂದು ಶುಕ್ರನ ಸ್ಥಾನ ಪಲ್ಲಟದಿಂದ ಜೂನ್ 25 ರವರೆಗಿನ ನಿಮ್ಮ ರಾಶಿ ಫಲ ಗಳನ್ನು ತಿಳಿಯಿರಿ ! ಯಾವ್ಯಾವ ರಾಶಿಗಳಿಗೆ ಶುಕ್ರ ದೆಸೆ ಗೊತ್ತಾ?

ಇಂದು ಶುಕ್ರನ ಸ್ಥಾನ ಪಲ್ಲಟದಿಂದ ಜೂನ್ 25 ರವರೆಗಿನ ನಿಮ್ಮ ರಾಶಿ ಫಲ ಗಳನ್ನು ತಿಳಿಯಿರಿ ! ಯಾವ್ಯಾವ ರಾಶಿಗಳಿಗೆ ಶುಕ್ರ ದೆಸೆ ಗೊತ್ತಾ?

0

ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಪಲ್ಲಟವು ಪ್ರತಿಯೊಬ್ಬರ ರಾಶಿ ಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಇದೀಗ ಶುಕ್ರನು ಸ್ಥಾನ ಸ್ಥಾನ ಪಲ್ಲಟವನ್ನು ಮಾಡುತ್ತಿದ್ದು ಜೂನ್ 25 ರವರೆಗೆ ವಿವಿಧ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಪ್ರತಿಯೊಂದು ರಾಶಿಗಳ ಫಲಾಫಲ ಕೆಳಗಿನಂತಿದೆ.

ಮೇಷ: 09-June-2020 to 25-June-2020

ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿ ಶುಕ್ರ ಇರುತ್ತಾರೆ, 9ನೇ ತಾರೀಕಿನಂದು ನಿಮ್ಮ ರಾಶಿಯನ್ನು ಪ್ರವೇಶಿಸಲಿದ್ದು, ನಿಮಗೆ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ, ಈ ಸಮಯದಲ್ಲಿ ಹೊಸ ವ್ಯವಹಾರಕ್ಕಾಗಿ ಪ್ರಸ್ತಾಪಗಳು ನಿಮ್ಮ ಬಳಿ ಬರಲಿವೆ. ನಿಮ್ಮ ರಾಶಿ ಫಲದ ಪ್ರಕಾರ ಹೂಡಿಕೆ ಮಾಡಲು ಇದು ಸೂಕ್ತ ಸಮಯ, ಆದರೆ ಖರ್ಚು ವೆಚ್ಚಗಳ ಕುರಿತು ಗಮನ ಹರಿಸಬೇಕು.

ವೃಷಭ: 09-June-2020 to 25-June-2020

ನಿಮ್ಮ ಮೊದಲನೇ ಮನೆಯಲ್ಲಿ ಶುಕ್ರ ಇರುತ್ತಾರೆ, ಇದರಿಂದ ನಿಮಗೆ ಪ್ರತಿಯೊಂದು ವಿಷಯದಲ್ಲೂ ಕುಟುಂಬ ಸದಸ್ಯರ ಬೆಂಬಲ ಸಿಗುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಪರಿಹಾರ ಪಡೆಯುವ ಸಾಧ್ಯತೆಗಳಿವೆ. ಆದರೆ ದಯವಿಟ್ಟು ಜೂನ್ 25 ರವರೆಗೆ ಯಾವುದೇ ರೀತಿಯ ವಾದ-ವಿವಾದಗಳಲ್ಲಿ ತೊಡಗಿ ಕೊಳ್ಳಬೇಡಿ, ಇಲ್ಲವಾದಲ್ಲಿ ನ್ಯಾಯಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಮಿಥುನ: 09-June-2020 to 25-June-2020

ನಿಮ್ಮ ರಾಶಿ ಚಕ್ರದ 12ನೇ ಮನೆಯಲ್ಲಿ ಶುಕ್ರ ಹಿಮ್ಮೆಟ್ಟುತ್ತದೆ. ಇದು ನಿಮ್ಮ ವೃತ್ತಿ ಜೀವನದ ಯಶಸ್ಸಿನ ಅಂಶಗಳಾಗಿ ಪರಿಣಮಿಸುತ್ತದೆ. ಸಮಾಜದಲ್ಲಿ ಸಿಗುತ್ತಿರುವ ಗೌರವ ಹೆಚ್ಚಾಗುತ್ತದೆ‌. ಒಂದು ಮಾತಿನಲ್ಲಿ ಹೇಳುವುದಾದರೆ ಜೂನ್ 25 ರವರೆಗೆ ನಿಮ್ಮ ಸಮಯ ಅತ್ಯಂತ ಶುಭವಾಗಿದೆ.

ಕರ್ಕಾಟಕ: 09-June-2020 to 25-June-2020

ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಿ ಶುಕ್ರ ಇರಲಿದ್ದು, ಜೂನ್ 25ರವರೆಗೆ ದಯವಿಟ್ಟು ಹಿರಿಯರ ಮಾರ್ಗ ಸೂಚಿಗಳನ್ನು ಪಾಲಿಸಿ ಹಾಗೂ ಯಾವುದೇ ಕೆಲಸಕ್ಕೆ ಮುನ್ನ ಹಿರಿಯರ ಸಲಹೆ ಪಡೆದು ಕೊಳ್ಳುವುದು ಉತ್ತಮ. ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ.

ಸಿಂಹ: 09-June-2020 to 25-June-2020

ನಿಮ್ಮ ಹತ್ತನೇ ಮನೆಯಲ್ಲಿ ಶುಕ್ರ ಇರುತ್ತಾರೆ, ಜೂನ್ 25 ರವರೆಗೆ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ದಯವಿಟ್ಟು ಅದರ ಕುರಿತು ಗಮನ ಹರಿಸಿ ಇಲ್ಲವಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಯಾವುದೇ ಕೆಲಸ ಆರಂಭಿಸಿದರೆ ದಯವಿಟ್ಟು ಪೂರ್ಣಗೊಳಿಸುವವರೆಗೆ ಗಂಭೀರತೆಯಿಂದ ಕೆಲಸ ಮಾಡಿ, ಸೋಂಬೇರಿತನ ಒಳ್ಳೆಯದಲ್ಲ.

ಕನ್ಯಾ: 09-June-2020 to 25-June-2020

ನಿಮ್ಮ ರಾಶಿ ಚಕ್ರದ ಒಂಬತ್ತನೇ ಮನೆಯಲ್ಲಿ ಶುಕ್ರ ಇರಲಿದ್ದು, ಮಕ್ಕಳಿಂದ ಸಂತೋಷದ ವಿಷಯಗಳು ಕೇಳಿ ಬರಲಿದ್ದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರೀತಿಯ ವಿಷಯಗಳಲ್ಲಿ ನೀವು ಸಕಾರಾತ್ಮಕ ಉತ್ತರಗಳನ್ನು ಪಡೆಯುವ ಸಾಧ್ಯತೆಗಳಿವೆ.

ತುಲಾ: 09-June-2020 to 25-June-2020

ನಿಮಗೆ ಎಂಟನೇ ಮನೆಯಲ್ಲಿ ಶುಕ್ರ ಹಿಮ್ಮೆಟ್ಟಿಸುತ್ತಿರುವ ಕಾರಣ ಶುಕ್ರ ಸಕ್ರಿಯ ಯಾಗುವವರೆಗೂ ನೀವು ಹಣ ಸಂಪಾದಿಸಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಏರಿಳಿತಗಳು ಇರುತ್ತವೆ, ಕಷ್ಟಪಟ್ಟು ಕೆಲಸ ಮಾಡಿ.

ವೃಶ್ಚಿಕ: 09-June-2020 to 25-June-2020

ನಿಮಗೆ ಏಳನೇ ಮನೆಯಲ್ಲಿ ಶುಕ್ರ ಇರುವ ಕಾರಣ ನೀವು ಹಣವನ್ನು ಕಳೆದು ಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಜೂನ್ 25ನೇ ತಾರೀಖು ಮುಗಿಯುವ ವರೆಗೆ ಯಾವುದೇ ಕ್ಷೇತ್ರಗಳಲ್ಲಿಯೂ ಹೂಡಿಕೆ ಮಾಡದೇ ಇರುವುದು ಉತ್ತಮವಾಗಿದೆ.

ಧನಸ್ಸು: 09-June-2020 to 25-June-2020

ನಿಮಗೆ ಆರನೇ ಮನೆಯಲ್ಲಿ ಶುಕ್ರ ಇರಲಿದ್ದು ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಸಮಯವು ನಿಮಗೆ ಬಹಳ ಚೆನ್ನಾಗಿದ್ದು, ವೃತ್ತಿ ಜೀವನವನ್ನು ಆಯ್ಕೆ ಮಾಡಲು ಸೂಕ್ತ ಸಮಯ.

ಮಕರ: 09-June-2020 to 25-June-2020

ನಿಮಗೆ ಐದನೇ ಮನೆಯಲ್ಲಿ ಶುಕ್ರ ಇರಲಿದ್ದು, ಹೆಚ್ಚು ಖರ್ಚಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಕೆಲವು ಕಹಿ ಸುದ್ದಿಗಳನ್ನು ಕೇಳಬಹುದು. ನೀವು ಉದ್ಯೋಗ ಮಾಡುತ್ತಿರುವ ಕಚೇರಿಯಲ್ಲಿ ಪ್ರಶಂಸೆಯ ಮಾತುಗಳು ಕೇಳಿ ಬರಲಿದ್ದು ನಿಮ್ಮ ಕೆಲಸಕ್ಕೆ ತಕ್ಕಂತೆ ಪ್ರಶಂಸೆಗಳು ಸಿಗಲಿವೆ.

ಕುಂಭ: 09-June-2020 to 25-June-2020

ನಿಮ್ಮ ರಾಶಿ ಚಕ್ರದ ನಾಲ್ಕನೇ ಮನೆಯಲ್ಲಿ ಶುಕ್ರ ಇರಲಿದ್ದು, ಈ ಸಮಯದಲ್ಲಿ ನೀವು ಹಣ ಹೆಚ್ಚಾಗಿ ಖರ್ಚು ಮಾಡುವ ಸಾಧ್ಯತೆಗಳಿವೆ. ಜೂನ್ 25ರವರೆಗೆ ದಯವಿಟ್ಟು ಯಾವುದೇ ಸಾಲವನ್ನು ನೀಡದಿರಲು ಪ್ರಯತ್ನಪಡಿ ಅಥವಾ ಯಾರಿಂದಲಾದರೂ ಸಾಲ ತೆಗೆದುಕೊಳ್ಳಲೇ ಬೇಡಿ. ಇದರಿಂದ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುವುದು.

ಮೀನ: 09-June-2020 to 25-June-2020

ಮೂರನೇ ಮನೆಯಲ್ಲಿ ನಿಮಗೆ ಶುಕ್ರ ಇರಲಿದ್ದು, ಉದ್ಯೋಗ ಕ್ಷೇತ್ರಗಳಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಮೇಲೆ ಪ್ರಾಬಲ್ಯ ಸ್ಥಾಪಿಸುತ್ತಾರೆ. ನಕಾರಾತ್ಮಕ ವಿಷಯಗಳಿಂದ ದೂರವಿದ್ದು, ನಿಮ್ಮ ಕೆಲಸಗಳಲ್ಲಿ ನೀವು ತೊಡಗಿಕೊಂಡರೆ ಖಂಡಿತ ಉತ್ತಮ ಫಲಿತಾಂಶವನ್ನು ಕಾಣಬಹುದು.