ಒಂದೇ ಸಮಯದಲ್ಲಿ ಟೆಸ್ಟ್, ಟಿ-20 ಗಳನ್ನಾಡಲು 2 ವಿಭಿನ್ನ ತಂಡಗಳನ್ನು ರಚಿಸಿದ ಅಗರ್ಕರ್ ! ಪ್ರತ್ಯೇಕವಾಗಿ ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ?

ಒಂದೇ ಸಮಯದಲ್ಲಿ ಟೆಸ್ಟ್, ಟಿ-20 ಗಳನ್ನಾಡಲು 2 ವಿಭಿನ್ನ ತಂಡಗಳನ್ನು ರಚಿಸಿದ ಅಗರ್ಕರ್ ! ಪ್ರತ್ಯೇಕವಾಗಿ ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಎಲ್ಲೆಡೆ ಕೋರೋನ ಪ್ರಭಾವದಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ನಿಂತು ಹೋಗಿವೆ. ಹೀಗಿರುವಾಗ ಭಾರತ ದೇಶವು ಕೋರೋನ ಪರಿಸ್ಥಿತಿ ಮುಗಿದ ಕೂಡಲೇ ಎರಡು ದೇಶಗಳಲ್ಲಿ ಒಮ್ಮೆಲೇ ಟಿ-20 ಹಾಗೂ ಟೆಸ್ಟ್ ಪಂದ್ಯಗಳನ್ನು ಆಯೋಜಿಸುವ ಆಲೋಚನೆ ನಡೆಸುತ್ತಿದೆ‌.

ಇದರ ಕುರಿತು ಮಾತನಾಡಿರುವ ಅಜಿತ್ ಅಗರ್ಕರ್ ರವರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಎರಡು ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಿ, ಒಂದೇ ಸಮಯದಲ್ಲಿ ಎರಡು ದೇಶಗಳಲ್ಲಿ ಸರಣಿಯಾಡಲು ಬಯಸಿದರೇ ಈ ರೀತಿಯ ತಂಡವನ್ನು ಕಟ್ಟಬಹುದು ಎಂದಿದ್ದಾರೆ.

ಅಜಿತ್ ಅಗರ್ಕರ್ ರವರ ಟಿ-20 ತಂಡ ಇಂತಿದೆ: ಕೆ ಲ್ ರಾಹುಲ್(WK), ರೋಹಿತ್ ಶರ್ಮ(ಸಿ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್,ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಬುಮ್ರಾ, ಶಾರ್ದುಲ್ ಠಾಕೂರ್(12th).

ಅಜಿತ್ ಅಗರ್ಕರ್ ರವರ ಟೆಸ್ಟ್ ತಂಡ ಇಂತಿದೆ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(C), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್(WK), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಶುಬ್ಮನ್ ಗಿಲ್(12th).