ಚೀನಾಗೆ ಮತ್ತೊಂದು ಶಾಕ್ ನೀಡಿದ ಯೋಗಿ ಆದಿತ್ಯನಾಥ್ ! ನಮ್ಮ ಸರ್ಕಾರವು ಹೀಗೆ ಮಾಡಬಾರದ್ಯಾಕೆ?

ಚೀನಾಗೆ ಮತ್ತೊಂದು ಶಾಕ್ ನೀಡಿದ ಯೋಗಿ ಆದಿತ್ಯನಾಥ್ ! ನಮ್ಮ ಸರ್ಕಾರವು ಹೀಗೆ ಮಾಡಬಾರದ್ಯಾಕೆ?

ನಮಸ್ಕಾರ ಸ್ನೇಹಿತರೇ, ನಾವು ಈ ಮೊದಲು ಹೇಳಿದ್ದೇವೆ ಈಗಲೂ ಹೇಳುತ್ತಿದ್ದೇವೆ. ಇದೀಗ ಗೆಲ್ಲ ಬೇಕಾಗಿರುವುದು ಯಾವುದೇ ರಾಜಕೀಯ ನಾಯಕನಲ್ಲ, ಯಾವುದೇ ಪಕ್ಷವಲ್ಲ, ಯಾವುದೇ ವಿಪಕ್ಷನಾಯಕನಲ್ಲ ಬದಲಾಗಿ ದೇಶ. ಹೌದು ಸ್ವದೇಶಿ ಭಾರತವೇ ಪ್ರತಿಯೊಬ್ಬರ ಗುರಿಯಾಗಿರಬೇಕು.

ಇಂತಹ ಸಂದರ್ಭದಲ್ಲಿ ಇದೀಗ ದೇಶದ ಎಲ್ಲೆಡೆ ಸಾಧ್ಯವಾದಷ್ಟು ಸ್ವದೇಶಿ ವಸ್ತುಗಳನ್ನು ಬಳಸಲು ಉತ್ತೇಜನ ನೀಡಲಾಗುತ್ತಿದೆ. ಹೀಗಿರುವಾಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಭಾರತದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಲಿವೆ. ಹೌದು, ಪ್ರಮುಖ ಹಬ್ಬಗಳಾದ ಗೌರಿ-ಗಣೇಶ, ದಸರಾ ಹಾಗೂ ದೀಪಾವಳಿ ಗಳಂತಹ ಹಲವಾರು ಹಬ್ಬಗಳು ಸಾಲುಸಾಲಾಗಿ ಬರಲಿವೆ.

ನಿಮಗೆ ತಿಳಿದಿರುವಂತೆ ಈ ಹಬ್ಬಗಳು ಬಂತು ಎಂದರೇ ಪ್ರತಿಯೊಬ್ಬರ ಮನೆಯಲ್ಲಿ ಇನ್ನಿಲದ ಉತ್ಸಾಹ, ಸಂತೋಷ ಮನೆ ಮಾಡುತ್ತದೆ. ಆದರೆ ನಿಮಗೆ ತಿಳಿದಿದೆಯೋ ಇಲ್ಲವೋ ತಿಳಿದಿಲ್ಲ, ಪಕ್ಕದ ಚೀನಾ ದೇಶದಲ್ಲಿ ಕೂಡ ಈ ಹಬ್ಬಗಳು ಬಂತೆಂದರೆ ಸಂಭ್ರಮ ಕಾಣುತ್ತದೆ. ಯಾಕೆಂದರೆ ನೂರಾರು ಕೋಟಿ ಬೆಲೆ ಬಾಳುವ ವಸ್ತುಗಳು ಚೀನಾ ದೇಶದಿಂದ ಆಮದಾಗುತ್ತವೆ. ಪೂಜೆ ಮಾಡುವ ಗೌರಿ-ಗಣೇಶ, ದಸರಾ ಬೊಂಬೆಗಳಿಂದ ಹಿಡಿದು ಬೆಳಗುವ ದೀಪಗಳ ವರೆಗೂ ಚೀನಾ ದೇಶದಿಂದಲೇ ಬಹುಪಾಲು ಆಮದಾಗುತ್ತದೆ.

ಇದನ್ನು ಗಮನಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇದೇ ಸಂದರ್ಭವನ್ನು ಬಳಸಿಕೊಂಡು ಸ್ವದೇಶಿ ನಿರ್ಮಿತ ವಸ್ತುಗಳನ್ನು ಮಾರಾಟ ಮಾಡಲು ಹೊಸದೊಂದು ಯೋಜನೆ ರೂಪಿಸಿದ್ದಾರೆ. ದೇಶದ ಪ್ರತಿಯೊಂದು ರಾಜ್ಯಗಳಲ್ಲಿಯೂ ಈ ರೀತಿಯ ಯೋಜನೆಗಳನ್ನು ರೂಪಿಸಿದರೆ ಚೀನಾ ದೇಶಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಏನದು ಯೋಜನೆ ಇದರಿಂದ ನಮಗೇನು ಲಾಭ?

ಸ್ನೇಹಿತರೇ, ಇದೀಗ ಯೋಗಿ ಆದಿತ್ಯನಾಥ್ ರವರು ರಾಜ್ಯಮಟ್ಟದಲ್ಲಿ ಆನ್ಲೈನ್ ಮತ್ತು ವರ್ಚುಯಲ್ ಕಾರ್ಯಗಾರವನ್ನು ರೂಪಿಸಿ, ಶಿಲ್ಪಿ ಮತ್ತು ಶಿಲ್ಪಕಲೆ ತಜ್ಞರಿಂದ ಸ್ಥಳೀಯರಿಗೆ ಮೂರ್ತಿ ತಯಾರಿಸುವುದು, ದೀಪಗಳನ್ನು ಸಿದ್ಧಪಡಿಸುವುದು ಕುರಿತು ತರಬೇತಿ ನೀಡಲು ಮುಂದಾಗಿದ್ದಾರೆ. ಇಷ್ಟೇ ಅಲ್ಲದೇ ಚೀನಾ ದೇಶದಿಂದ ಬರುವ ವಿಗ್ರಹಗಳು ಹಾಗೂ ದೀಪಗಳನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆನ್ಲೈನ್ನಲ್ಲಿ ತಯಾರಿ ಮಾಡುವ ವಿಧಾನ, ಪ್ಯಾಕಿಂಗ್, ಬೇಕಾದ ವಸ್ತುಗಳ ಸಂಪೂರ್ಣ ಮಾಹಿತಿ ನೀಡಲಾಗುವುದು. ಅಷ್ಟೇ ಅಲ್ಲದೇ ಸ್ಥಳೀಯರಿಗೆ ಬಂಡವಾಳವನ್ನು ಸಾಲವನ್ನಾಗಿ ನೀಡುವುದು ಹಾಗೂ ಅದಕ್ಕೆ ಅಗತ್ಯವಾದ ವಸ್ತುಗಳ ಪೂರೈಕೆಯ ಜವಾಬ್ದಾರಿಯನ್ನು ಕೂಡ ರಾಜ್ಯ ಸರ್ಕಾರವೇ ಹೊತ್ತುಕೊಂಡಿದೆ. ನೇರವಾಗಿ ಇದರಿಂದ 10 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಹೀಗಿರುವ ನಮ್ಮ ರಾಜ್ಯದಲ್ಲಿಯೂ ಹೀಗೆ ಮಾಡಬಾರದೇಕೆ ಎಂಬುದು ನಮ್ಮ ಅಭಿಪ್ರಾಯ ! ನಿಮ್ಮ ಅಭಿಪ್ರಾಯವೇನು?