ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ! ಇವರಿಗೊಂದು ನಮ್ಮ ಸಲಾಂ.

ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ! ಇವರಿಗೊಂದು ನಮ್ಮ ಸಲಾಂ.

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ಪುಣ್ಯಭೂಮಿ ಅಯೋಧ್ಯೆಯಲ್ಲಿ ಭಾರತೀಯ ಸಂಸ್ಥಾನ ಸಂಸ್ಥೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು. ಭಾರತೀಯ ಸಂಸ್ಥಾನ ಸಂಸ್ಥೆ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿತ್ತು.

ಎಲ್ಲಾ ಅಂದುಕೊಂಡಂತೆ ಆಗಿದ್ದರೇ ಈ ಹೊತ್ತಿಗೆ ಯೋಗಿ ಆದಿತ್ಯನಾಥ್ ರವರು ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅದ್ದೂರಿಯಾಗಿ ಮಾಡಬೇಕಿತ್ತು. ಆದರೆ ಕೋರೋನ ಪ್ರಭಾವದಿಂದ ಪ್ರಶಸ್ತಿ ಘೋಷಣೆ ಮಾಡಿ, ವಿಜೇತರಿಗೆ ಉತ್ತರ ಪ್ರದೇಶ ಸರ್ಕಾರವು ಪ್ರಶಸ್ತಿ ಫಲಕ, ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಕಳುಹಿಸಿದೆ. ಈ ಸ್ಪರ್ಧೆಯಲ್ಲಿ ನಮ್ಮ ಕನ್ನಡದ ಯುವಕ ಚಂದ್ರಶೇಖರ್ ರವರು 2020-21 ರ ಸಾಲಿನ ಸ್ವದೇಶಿ ಶ್ರೇಷ್ಠ ಕಲಾ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ.

ಈ ಹಿಂದೆಯೂ ಹಲವಾರು ಬಾರಿ ಹಲವಾರು ವಿವಿಧ ಪ್ರಶಸ್ತಿಗಳನ್ನು ಗೆದ್ದಿರುವ ಚಂದ್ರಶೇಖರ್ ರವರು 22 ನೇ ವಯಸ್ಸಿನಲ್ಲಿಯೇ ಮೈಸೂರು ದಸರಾ ಅವಾರ್ಡ್ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ಕಿರಿಯ ಕಲಾವಿದ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಈ ಬಾರಿ ವಿಶೇಷವಾಗಿ ಅಯೋಧ್ಯೆಯಂತಹ ಪುಣ್ಯಭೂಮಿಯಲ್ಲಿ ಪ್ರಶಸ್ತಿ ಗೆದ್ದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ವಿಪರ್ಯಾಸವೆಂದರೆ ಈ ಕುರಿತು ಯಾವುದೇ ಮಾಧ್ಯಮಗಳು ಇಲ್ಲಿಯವರೆಗೂ ಸುದ್ದಿಯನ್ನು ಪ್ರಕಟಣೆ ಮಾಡಿಲ್ಲ. ಇವರ ಕಿರು ಪರಿಚಯ ಈ ಕೆಳಗಿನತಿದೆ.

ಚಂದ್ರಶೇಖರ್ ರವರು ಕರ್ನಾಟಕದ ಪ್ರಸಿದ್ಧ ಕಲಾ ಶೈಲಿ ಯಾಗಿರುವ ಕಾವಿ ಚಿತ್ರಕಲೆ ಯಲ್ಲಿ ಪರಿಣಿತಿ ಹೊಂದಿದ್ದು ಇಲ್ಲಿಯವರೆಗೂ ಸಾಕಷ್ಟು ಬಾರಿ ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಬಾರಿ ಅಯೋಧ್ಯೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಂದ್ರಶೇಖರ್ ರವರು ವರುಣ ದಂಪತಿ ಎಂಬ ಕಲಾಕೃತಿಯನ್ನು ರಚಿಸಿ ಪ್ರಶಸ್ತಿ ಗೆದ್ದು ಕೊಂಡಿದ್ದಾರೆ. ಮುಂದಿನ ಜುಲೈನಲ್ಲಿ ಅಯೋಧ್ಯೆಯಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯ ನಡೆಯಬೇಕಾಗಿತ್ತು. ಆದರೆ ಕೊರೋನಾ ಪರಿಣಾಮದ ಕಾರಣ ಕಾರ್ಯಕ್ರಮವನ್ನು ರದ್ದು ಮಾಡಿ, ಪ್ರಶಸ್ತಿಗಳನ್ನು ವಿಜೇತರಿಗೆ ಖುದ್ದು ಉತ್ತರಪ್ರದೇಶ ಸರ್ಕಾರ ಕಳುಹಿಸಿಕೊಟ್ಟಿದೆ.