4 ವರ್ಷದ ಮಗುವಿಗೆ ಹಾಲು ತಲುಪಿಸಲು ಕಾನ್ಸ್ಟೇಬಲ್ ಮಾಡಿದ ಸಾಹಸಕ್ಕೆ ದೇಶದಲ್ಲೆಡೆ ಪ್ರಶಂಸೆಗಳ ಸುರಿಮಳೆ ! ರೈಲ್ವೆ ಸಚಿವರಿಂದ ಭರ್ಜರಿ ಗಿಫ್ಟ್ !

4 ವರ್ಷದ ಮಗುವಿಗೆ ಹಾಲು ತಲುಪಿಸಲು ಕಾನ್ಸ್ಟೇಬಲ್ ಮಾಡಿದ ಸಾಹಸಕ್ಕೆ ದೇಶದಲ್ಲೆಡೆ ಪ್ರಶಂಸೆಗಳ ಸುರಿಮಳೆ ! ರೈಲ್ವೆ ಸಚಿವರಿಂದ ಭರ್ಜರಿ ಗಿಫ್ಟ್ !

ನಮಸ್ಕಾರ ಸ್ನೇಹಿತರೇ, 4 ತಿಂಗಳ ಮಗುವಿಗೆ ಹಾಲು ತಲುಪಿಸಲು ಕಾನ್ಸ್ಟೇಬಲ್ ಮಾಡಿದ ಸಾಹಸಕ್ಕೆ ಇದೀಗ ದೇಶದ ಎಲ್ಲೆಡೆ ಪ್ರಶಂಸೆಗಳ ಸುರಿಮಳೆ ಸುರಿಸಿದೆ. ರೈಲ್ವೆ ಸಚಿವರು ಕೂಡ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇದರ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಳೆದ ಮೇ 31ರಂದು ಶರೀಫ್ ಹಶ್ಮಿ ಮತ್ತು ಹಸೀನ ಅಸ್ಮಿ ರವರ ನಾಲ್ಕು ತಿಂಗಳ ಮಗು ಗೋರಕ್ ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಗು ಹಸಿವಿನಿಂದ ಅಳಲು ಆರಂಭಿಸುತ್ತದೆ. ಪೋಷಕರು ಇಬ್ಬರೂ ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ನಿಲ್ದಾಣಗಳಲ್ಲಿ ಅವರಿಗೆ ಹಾಲು ಪಡೆಯಲು ಸಾಧ್ಯವಾಗಲಿಲ್ಲ. ಇನ್ನೂ ರೈಲು ಭೋಪಾಲ್ ರೈಲ್ವೆ ನಿಲ್ದಾಣವನ್ನು ತಲುಪಿದಾಗ ನಿಲ್ದಾಣದಲ್ಲಿ ಕಾರ್ಯ ನಿರತವಾಗಿದ್ದ ಕಾನ್ಸ್ಟೇಬಲ್ ಇಂದರ್ ಸಿಂಗ್ ಯಾದವ್ ರವರಿಗೆ ಈ ವಿಷಯವನ್ನು ಪೋಷಕರು ತಿಳಿಸುತ್ತಾರೆ. ವಿಷಯ ತಿಳಿದ ಕೂಡಲೇ ಕಾನ್ಸ್ಟೇಬಲ್ ರೈಲ್ವೆ ನಿಲ್ದಾಣದಿಂದ ಹೊರಗಿರುವ ಅಂಗಡಿಗೆ ಹಾಲು ತರಲು ಹೋಗುತ್ತಾರೆ.

ಆದರೆ ಅಷ್ಟರಲ್ಲಿ ರೈಲು ಹೊರಡಲು ಆರಂಭಿಸುತ್ತದೆ, ಹಾಲಿನ ಪ್ಯಾಕೆಟ್ ತರುತ್ತಿರುವ ಸಂದರ್ಭದಲ್ಲಿ ರೈಲು ಹೊರಡುತ್ತಿರುವುದನ್ನು ಕಂಡ ಕಾನ್ಸ್ಟೇಬಲ್ ರವರು ಒಂದು ಕೈಯಲ್ಲಿ ರೈ-ಫಲ್ ಮತ್ತೊಂದು ಕೈಯಲ್ಲಿ ಹಾಲು ಪ್ಯಾಕೆಟ್ ಹಿಡಿದುಕೊಂಡು ರೈಲಿನ ಹಿಂದೆ ಓಡಿ ಪೋಷಕರಿಗೆ ಹಾಲಿನ ಪ್ಯಾಕೆಟ್ ತಲುಪಿಸಿದ್ದಾರೆ. ಈ ದೃಶ್ಯಗಳು ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿರುವ ಸಿಸಿ-ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೇಶದಲ್ಲೆಡೆ ಪ್ರಶಂಸೆಗಳ ಸುರಿಮಳೆ ಸುರಿಸಿದೆ. ಇದನ್ನು ಕಂಡ ಪಿಯೂಷ್ ಘೋಯಲ್ ರವರು ಟ್ವೀಟ್ ಮಾಡಿ, ಒಂದು ಕೈಯಲ್ಲಿ ರೈಫಲ್ ಮತ್ತೊಂದು ಕೈಯಲ್ಲಿ ಹಾಲು- ಭಾರತೀಯ ರೈಲ್ವೆ ಹೇಗೆ ಉಸೇನ್ ಬೋಲ್ಟ್ ರವರನ್ನು ಹಿಂದೆ ಬಿಟ್ಟಿದೆ ಎಂದು ಬರೆದುಕೊಂಡು ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಮೇಲುಗಡೆ ಟ್ವೀಟ್ ನಲ್ಲಿ ವಿಡಿಯೋ ಇದೆ, ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.