ಚೀನಾ ಗೆ ಸೆಡ್ಡು ! ಚೀನಾ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ !

ಚೀನಾ ಗೆ ಸೆಡ್ಡು ! ಚೀನಾ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಇಷ್ಟು ದಿವಸ ಗಡಿಯಲ್ಲಿ ಖ್ಯಾತೆ ತೆಗೆಯುತ್ತಿದ್ದ ಚೀನಾ ದೇಶವು ಭಾರತದ ದಿಟ್ಟ ಉತ್ತರ ಕಂಡು ಜಗ್ಗುವುದಿಲ್ಲ ಎಂದು ತಿಳಿದ ಮೇಲೆ ಗಡಿಯಲ್ಲಿ ಎರಡು ಕಿಲೋ ಮೀಟರ್ ಗಳಷ್ಟು ಹಿಂದೆ ಸರಿದಿದೆ ಎಂದು ಮಾಹಿತಿ ಸಿಕ್ಕಿದೆ. ಇದರ ಬೆನ್ನಲ್ಲೇ ಭಾರತ ಕೂಡ ಚೀನಾ ಸೈನಿಕರು ಹಿಂದೆ ಸರಿದ ಮೇಲೆ ಗಾಲ್ವಾನ್ ಕಣಿವೆಯಿಂದ ಹಿಂದೆ ಬಂದಿದೆ. ಇದಾದ ಕೆಲವು ಗಂಟೆಗಳಲ್ಲಿ ಚೀನಾ ದೇಶಕ್ಕೆ ಮತ್ತೊಂದು ಶಾಕ್ ನೀಡಿದೆ.

ಹೌದು ಸ್ನೇಹಿತರೇ, ಭಾರತವು ಕಾಶ್ಮೀರದ ವಾಯುಪಡೆಯು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ 3.5 ಕಿ.ಮೀ ವಾಯುನೆಲೆಯ ನಿರ್ಮಾಣವನ್ನು ಪ್ರಾರಂಭಿಸಿದೆ. ಇದು ಪೂರ್ವ ನಿಯೋಜಿತ ಯೋಜನೆಯಾಗಿದ್ದರೂ ಕೂಡ ಇಷ್ಟು ವೇಗವಾಗಿ ಆರಂಭ ಗೊಳ್ಳುತ್ತಿರಲಿಲ್ಲ, ಆದರೆ ಗಡಿಯಲ್ಲಿನ ಪರಿಸ್ಥಿತಿ ನೋಡಿ ಈ ಕಾಮಗಾರಿಯನ್ನು ಆರಂಭಿಸಿದೆ. ಬೋಫೋರ್ಸ್ ಫಿರಂಗಿದಳದ ನಿಯೋಜನೆಯ ಜೊತೆಗೆ ಭಾರತವು ಲಡಾಖ್ ಬಳಿ ವಾಯುನೆಲೆಯ ನಿರ್ಮಾಣವನ್ನು ಚುರುಕುಗೊಳಿಸಿದೆ. ಯುದ್ಧ ವಿಮಾನಗಳು ಈ ರನ್‌ವೇಯಲ್ಲಿ ಸುಲಭವಾಗಿ ಇಳಿಯಬಹುದು ಮತ್ತು ಹಾರಬಲ್ಲವು. ನಿಯಂತ್ರಣ ರೇಖೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಯನ್ನು ತಲುಪಲು ವಾಯುಪಡೆಯು ಬಹಳ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಏರ್‌ಸ್ಟ್ರಿಪ್ ಅನ್ನು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ -44 ರ ಉದ್ದಕ್ಕೂ ಬಿಜ್ಬಿಹಾರದಲ್ಲಿ ನಿರ್ಮಿಸಲಾಗುತ್ತಿದೆ.

ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಯುದ್ಧ ವಿಮಾನಗಳಿಗೆ ಈ ರನ್ ವೇಯನ್ನು ಬಳಸಲಾಗುತ್ತದೆ. ವಾಯುನೆಲೆಯ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಕಾರ್ಮಿಕರಿಗೆ ಜಿಲ್ಲಾಡಳಿತ ವಿಶೇಷ ಪಾಸ್‌ಗಳನ್ನು ನೀಡಿದೆ. ಈ ವಾಯುನೆಲೆಯ ನಿರ್ಮಾಣ ದೇಶಕ್ಕೆ ಬಹಳ ಮುಖ್ಯ. ಕಾಶ್ಮೀರ ಪಾಕಿಸ್ತಾನದ ಗಡಿಯಾಗಿದೆ. ಇದಲ್ಲದೆ, ಲಡಾಖ್‌ನ ಒಂದು ಭಾಗವು ಚೀನಾದೊಂದಿಗೆ ಮತ್ತು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಹೀಗಿರುವಾಗ ಈ ರನ್ ವೇ ಬಹಳ ಪ್ರಮುಖ ಪಾತ್ರವನ್ನು ವಹಿಸುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗಷ್ಟೇ ಚೀನಾ ದೇಶ ಭಾರತದ ಗಡಿಯಿಂದ ಕೆಲವೇ ಕೆಲವು ಕಿಲೋ ಮೀಟರ್ ಗಳಲ್ಲಿ ವಾಯುನೆಲೆಯನ್ನು ನಿರ್ಮಾಣ ಮಾಡಿತ್ತು.