ಭಾರತದ ವೇಗದ ಬೌಲಿಂಗ್ ನಲ್ಲಿ ಕ್ರಾಂತಿ ಸೃಷ್ಟಿ ಮಾಡಿದ್ದು ಈ ಕನ್ನಡಿಗ ಎಂದು ಬೌಲರ್ ಆಯ್ಕೆ ಮಾಡಿದ ವಿವಿಎಸ್ ಲಕ್ಷ್ಮಣ್ !

ಭಾರತದ ವೇಗದ ಬೌಲಿಂಗ್ ನಲ್ಲಿ ಕ್ರಾಂತಿ ಸೃಷ್ಟಿ ಮಾಡಿದ್ದು ಈ ಕನ್ನಡಿಗ ಎಂದು ಬೌಲರ್ ಆಯ್ಕೆ ಮಾಡಿದ ವಿವಿಎಸ್ ಲಕ್ಷ್ಮಣ್ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಭಾರತ ತಂಡವು ವೇಗದ ಬೌಲಿಂಗ್ ನಲ್ಲಿ ವಿಶ್ವದ ಇನ್ನಿತರ ಬಲಿಷ್ಠ ವೇಗದ ಬೌಲಿಂಗ್ ವಿಭಾಗವನ್ನು ಹೊಂದಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳಿಗೆ ಸಮಾನವಾಗಿ ನಿಂತಿದೆ.

ಆದರೆ ಕೆಲವು ವರ್ಷಗಳ ಹಿಂದೆ ಈ ರೀತಿಯ ಪರಿಸ್ಥಿತಿ ಇರಲಿಲ್ಲ, ‌ಇಂದಿನ ದಿನಗಳಲ್ಲಿ ಮೊಹಮ್ಮದ್ ಶಮಿ, ಜಸ್ವಿತ್ ಬುಮ್ರಾ, ಭುವನೇಶ್ವರ ಕುಮಾರ್, ‌ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್ ರವರಂತಹ ಬೌಲರ್ಗಳು ತಂಡದ ಬೌಲಿಂಗ್ ವಿಭಾಗವನ್ನು ಬಲಿಷ್ಠ ಗೊಳಿಸಿದ್ದಾರೆ. ಆದರೆ 90ರ ದಶಕದಲ್ಲಿ ಈ ರೀತಿಯ ಪರಿಸ್ಥಿತಿ ಇರಲಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ.

ಭಾರತ ಕ್ರಿಕೆಟ್ ತಂಡ ಎಂದರೆ ಸ್ಪಿನ್ ಬೌಲಿಂಗ್ ಎಂಬರ್ಥದಲ್ಲಿ ಇತ್ತು ಎಂಬುದು ಹಲವರ ವಾದ. 90ರ ದಶಕದ ತಂಡದಿಂದ ಉತ್ತಮ ಸಾಮರ್ಥ್ಯ ಹೊಂದಿದ್ದ ಕೇವಲ 2-3 ಬೌಲರ್ಗಳ ಹೆಸರು ನಮಗೆ ನೆನಪಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ ಭಾರತದ ಬ್ಯಾಟ್ಸಮನ್ ಸುನಿಲ್ ಗವಾಸ್ಕರ್ ಅವರು ಬೌಲಿಂಗ್ ಮಾಡಲು ಮೊದಲ ಓವರ್ನಲ್ಲಿ ಬಾಲ್ ಕೈಗೆತ್ತಿಕೊಳ್ಳುತ್ತಿದ್ದದ್ದು.

ಈ ರೀತಿ ಕೇವಲ ಸ್ಪಿನ್ನರ್ ಗಳನ್ನು ನೆಚ್ಚಿಕೊಂಡಿದ್ದ ಭಾರತ ತಂಡಕ್ಕೆ ಎಂಬತ್ತರ ದಶಕದ ಉತ್ತರಾರ್ಧದಲ್ಲಿ ಒಬ್ಬ ವೇಗದ ಬೌಲರ್ ಎಂಟ್ರಿಕೊಟ್ಟನು, ಈತನು 1991 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದನು. ಇವರು ಎಂಟ್ರಿ ಕೊಟ್ಟಿದ್ದೇ ತಡ ಭಾರತದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಕ್ರಾಂತಿ ಉಂಟಾಯಿತು ಎಂದು ವಿವಿಎಸ್ ಲಕ್ಷ್ಮಣ್ ರವರು ತಿಳಿಸಿದ್ದಾರೆ, ಆಟಗಾರ ಮತ್ಯಾರು ಅಲ್ಲ ಮೈಸೂರು ಎಕ್ಸ್ಪ್ರೆಸ್ ಎಂದು ಖ್ಯಾತಿ ಪಡೆದು ಕೊಂಡಿರುವ ನಮ್ಮ ಹೆಮ್ಮೆಯ ಕನ್ನಡಿಗರಲ್ಲಿ ಒಬ್ಬರಾಗಿರುವ ಜಾವಗಲ್ ಶ್ರೀನಾಥ್. ಬರೋಬ್ಬರಿ ಅಂದಿನ ಕಾಲದಲ್ಲಿ 150 ಕಿಲೋಮೀಟರ್ ವೇಗದಲ್ಲಿ ಬಹಳ ಸುಲಭವಾಗಿ ಬೌಲ್ ಮಾಡುತ್ತಿದ್ದರು, ಇವರು ವೇಗದ ಬೌಲಿಂಗ್ ನಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದರು. ಅದರಲ್ಲಿಯೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ಮನೋಭಾವನೆಯು ಶ್ರೀನಾಥ್ ಅವರ ಶಕ್ತಿಯಾಗಿತ್ತು ಎಂದು ಲಕ್ಷ್ಮಣ್ ರವರು ತಿಳಿಸಿದ್ದಾರೆ.