ಶಿವನು ನಿರ್ಮಿಸಿದ ಪವಿತ್ರ ಕಾಶಿ ನಗರವನ್ನು ಕೃಷ್ಣ ಯಾಕೆ ಧ್ವಂಸಗೊಳಿಸಿದನು ಗೊತ್ತಾ?

ಶಿವನು ನಿರ್ಮಿಸಿದ ಪವಿತ್ರ ಕಾಶಿ ನಗರವನ್ನು ಕೃಷ್ಣ ಯಾಕೆ ಧ್ವಂಸಗೊಳಿಸಿದನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ಮಹಾ ಶಿವನು ನಿರ್ಮಿಸಿದ್ದಾನೆ ಎಂದು ನಂಬಲಾಗುತ್ತಿರುವ ಪವಿತ್ರ ನಗರವಾದ ಕಾಶಿ ನಗರವನ್ನು ಶ್ರೀ ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಸುಟ್ಟು ಹಾಕಿದನು ಎಂದು ನೀವು ಹಲವಾರು ಕಡೆ ಕೇಳಿರುತ್ತೀರಾ. ಆದರೆ ಶ್ರೀಕೃಷ್ಣನು ಯಾಕೆ, ಯಾವ ಕಾರಣಕ್ಕೆ ಈ ಕೆಲಸ ಮಾಡಿದನೂ ಎಂಬುದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಈ ಕಥೆಯನ್ನು ನಾವು ತಿಳಿದುಕೊಂಡರೆ ಕಾಶಿ ನಗರಕ್ಕೆ ಯಾವ ಕಾರಣಕ್ಕೆ ವಾರಣಾಸಿ ಎನ್ನುತ್ತಾರೆ ಎಂಬುದರ ಉತ್ತರ ಕೂಡ ಸಿಗಲಿದೆ. ಬನ್ನಿ ಹಾಗಿದ್ದರೆ ನಾವು ಇಂದು ಆ ಕಥೆಯ ಬಗ್ಗೆ ತಿಳಿದು ಕೊಳ್ಳೋಣ.

ನಿಮಗೆಲ್ಲರಿಗೂ ತಿಳಿದಿರುವಂತೆ ಸಾಕ್ಷಾತ್ ವಿಷ್ಣುವಿನ ಸಂಪೂರ್ಣ ಅವತಾರವೇ ಶ್ರೀ ಕೃಷ್ಣ. ಶ್ರೀವಿಷ್ಣುವು ಭೂಮಿಯ ಮೇಲೆ ನಡೆಯುತ್ತಿರುವ ರಾಜರ ಹಾಗೂ ರಾಕ್ಷಸರ ಅಟ್ಟಹಾಸವನ್ನು ಅಂತ್ಯಗೊಳಿಸಿ ಧರ್ಮ ಪುನರ್ಸ್ಥಾಪಿಸಲು ಶ್ರೀಕೃಷ್ಣನಾಗಿ ಜನ್ಮಿಸಿದನು ಎಂಬುದು ನಮಗೆಲ್ಲರಿಗೂ ತಿಳಿದಿದೆ.

ಅದು ದ್ವಾಪರಯುಗ, ಮಗಧ ರಾಜ ಜರಾಸಂಧನು ಸರ್ವಾಧಿಕಾರಿಯಾಗಿ ರಾಜ್ಯವಾಳುತ್ತಿದ್ದನು. ಹಣ, ಭೂಮಿ, ಅಧಿಕಾರಕ್ಕಾಗಿ ಯಾವುದೇ ಕೆಲಸ ಮಾಡಲು ಹಿಂಜರಿಯುತ್ತಿರಲಿಲ್ಲ. ಈತನನ್ನು ಕಂಡ ಸುತ್ತಮುತ್ತಲಿನ ಹಲವಾರು ರಾಜರು ಶರಣಾಗಿದ್ದರು. ಇನ್ನು ಕೆಲವರು ಈತನ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಟ ಮಾಡಿ ಇಹಲೋಕ ತ್ಯಜಿಸಿದ್ದರು. ಜರಾಸಂಧನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು, ಆಸ್ತಿ ಮತ್ತು ಪ್ರಸ್ತಿ. ಇಬ್ಬರನ್ನು ಮತ್ತೊಂದು ರಾಜ್ಯದಲ್ಲಿ ಧರ್ಮವನ್ನು ಮರೆತಿದ್ದ ಕಂಸಾ ರಾಜನಿಗೆ ಕೊಟ್ಟು ವಿವಾಹ ಮಾಡಿದನು. ಕಂಸನು ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ಕೃಷ್ಣನ ಮಾವ, ಈತನನ್ನು ಅಂತ್ಯ ಗೊಳಿಸುವುದು ಶ್ರೀಕೃಷ್ಣನ ಅವತಾರದ ಮೊದಲ ಉದ್ದೇಶ.

ಅಂದುಕೊಂಡಂತೆ ಶ್ರೀಕೃಷ್ಣ ಹಲವಾರು ಸವಾಲುಗಳನ್ನು ಗೆದ್ದು ಕಂಸನನ್ನು ಸಂಹಾರ ಮಾಡಿದನು. ಈ ಸುದ್ದಿಯನ್ನು ಕೇಳಿದ ಜರಾಸಂಧನು ಹೇಗಾದರೂ ಮಾಡಿ ಕೃಷ್ಣನನ್ನು ಯುದ್ಧದಲ್ಲಿ ಸೋಲಿಸಬೇಕು ಎಂದು ಪಣ ತೊಟ್ಟು ಕಳಿಂಗ ರಾಜ ಮತ್ತು ಕಾಶಿರಾಜನ ಜೊತೆ ಸೇರಿಕೊಂಡು ಶ್ರೀಕೃಷ್ಣನ ಮೇಲೆ ಯುದ್ಧಕ್ಕೆ ಹೋದರು. ಕೃಷ್ಣನ ಲೀಲೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದ ಇದೆ, ಯುದ್ಧದಲ್ಲಿ ಯಾವುದೇ ಸವಾಲುಗಳಿಲ್ಲದೇ ಇಬ್ಬರನ್ನು ಸಂಹರಿಸಿದ. ಈ ಸುದ್ದಿಯನ್ನು ಕೇಳಿದ ಜರಾಸಂಧ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪರಾರಿಯಾಗಿ ಅವಿತುಕೊಂಡ. ಕಾಶಿ ರಾಜನಿಗೆ ಒಬ್ಬ ಮಗನಿದ್ದನು, ತನ್ನ ತಂದೆಯನ್ನು ಸೋಲಿಸಿದ ಕೃಷ್ಣನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧಾರ ಮಾಡಿದನು, ಆದರೆ ಶ್ರೀಕೃಷ್ಣನನ್ನು ಸೋಲಿಸುವುದು ಸುಲಭದ ಕೆಲಸವಲ್ಲ ಎಂಬುದು ಆತನಿಗೆ ತಿಳಿದಿತ್ತು.

ಆದ್ದರಿಂದ ಮಹಾ ಶಿವನ ಮೊರೆ ಹೋಗಿ ಶಿವನನ್ನು ಮೆಚ್ಚಿಸಲು ತಪಸ್ಸಿಗೆ ಕುಳಿತನು, ಹಲವಾರು ವರ್ಷಗಳ ನಂತರ ಕಾಶಿರಾಜನ ಮಗನ ತಪಸ್ಸಿಗೆ ಮೆಚ್ಚಿದ ಮಹಾಶಿವನು ಪ್ರತ್ಯಕ್ಷನಾಗಿ ವರವನ್ನು ಕೇಳಿಕೋ ಎಂದರು. ತನಗೆ ಯುದ್ಧದಲ್ಲಿ ಗೆಲ್ಲಲು ಮಹಾ ಶಕ್ತಿಯುಳ್ಳ ಆಯುಧವನ್ನು ನೀಡುವಂತೆ ಕೇಳಿ ಕೊಂಡನು. ಮಹಾಶಿವನು ಮಹಾ ಶಕ್ತಿಯುಳ್ಳ ಆಯುಧವನ್ನು ನೀಡಿ, ಈ ಆಯುಧವನ್ನು ಪುರೋಹಿತರನ್ನು ಗೌರವಿಸುವ ವ್ಯಕ್ತಿಯ ಮೇಲೆ ಬಳಸಬಾರದು ಎಂದು ಉಲ್ಲೇಖಿಸಿದ್ದನು.

ಈ ಮಾತಿನ ಮರ್ಮವನ್ನು ತಿಳಿಯದ ಕಾಶಿರಾಜನ ಮಗನು ಒಪ್ಪಿಕೊಂಡು, ಆಯುಧವನ್ನು ತೆಗೆದುಕೊಂಡು ದ್ವಾರಕೆಯ ಮೇಲೆ ಯುದ್ಧ ಘೋಷಣೆ ಮಾಡಿದನು. ಆದರೆ ಶ್ರೀಕೃಷ್ಣನು ಪ್ರತಿಯೊಬ್ಬರನ್ನು ಬಹಳ ಗೌರವದಿಂದ ಕಾಣುತ್ತಿದ್ದನು, ಇನ್ನೂ ಪುರೋಹಿತರನ್ನು ಕೂಡ ಬಹಳ ಗೌರವದಿಂದ ಕಾಣುತ್ತಿದ್ದನು. ಹೀಗಿರುವಾಗ ಯುದ್ಧಭೂಮಿಯಲ್ಲಿ ಕಾಶಿರಾಜನ ಮಗನು ಮಹಾ ಶಿವನಿಂದ ಪಡೆದುಕೊಂಡ ಆಯುಧವನ್ನು ಪ್ರಯೋಗಿಸಿದರೂ ಕೂಡ ಶ್ರೀಕೃಷ್ಣನ ಮೇಲೆ ಕಿಂಚಿತ್ತು ಕೂಡ ಪರಿಣಾಮ ಬೀರಲಿಲ್ಲ.

ಮುಗುಳ್ನಕ್ಕ ಕೃಷ್ಣನು, ಎಲ್ಲರಿಗೂ ಅವಕಾಶ ನೀಡುತ್ತೇನೆ. ಧರ್ಮದ ಹಾದಿಗೆ ಬರದೇ ಹೋದರೆ ಎಲ್ಲರಿಗೂ ಅಂತ್ಯ ಖಚಿತ ಎಂದು ಸುದರ್ಶನ ಚಕ್ರ ದೊಂದಿಗೆ ಕಾಶಿಯ ಮೇಲೆ ದಂಡೆತ್ತಿ ಬಂದನು. ಸುದರ್ಶನ ಚಕ್ರದ ಶಕ್ತಿಗೆ ಇಡೀ ಕಾಶಿನಗರ ಸಂಪೂರ್ಣವಾಗಿ ನಾಶವಾಯಿತು. ಇದಾದ ಹಲವಾರು ವರ್ಷಗಳ ನಂತರ ವರಾ ಮತ್ತು ಆಸಿ ಎಂಬ ಎರಡು ನದಿಗಳು ಈ ಪ್ರದೇಶದಲ್ಲಿ ಹರಿಯುತ್ತಿರುವ ಕಾರಣ ಈ ಪ್ರದೇಶಕ್ಕೆ ವಾರಣಾಸಿ ಎಂಬ ಹೆಸರು ಬಂದು ಮತ್ತೆ ನಗರ ನಿರ್ಮಾಣವಾಯಿತು, ಪುನರ್ಜೀವನ ಪಡೆದುಕೊಂಡಿತು. ಹೀಗಾಗಿ ಈ ಸ್ಥಳಕ್ಕೆ ವಾರಣಾಸಿ ಎಂಬ ಹೆಸರು ಇದೆ.