ಕೊರೊನ ಇಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಹೊಸ ಆಶಾಭಾವನೆ ನೀಡಿದ ಕೇರಳ ರಾಜ್ಯ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ನಮ್ಮ ಪಕ್ಕದ ರಾಜ್ಯವಾದ ಮಹಾರಾಷ್ಟ್ರ ಪರಿಸ್ಥಿತಿ ಯಾವ ರೀತಿ ಇದೆ ಎಂದು ಹೇಳ ಬೇಕಾದ ಅವಶ್ಯಕತೆ ಇಲ್ಲ ಎನಿಸುತ್ತದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಕೋರೋನ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಈ ಲೇಖನ ಬರೆಯುವ ಹೊತ್ತಿಗೆ ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ.

ಅಕ್ಷರ ಸಹ ಕೊರೋನಗೆ ನಡುಗಿ ಹೋಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಹಲವಾರು ದಿನಗಳಿಂದಲೂ ಡಾಕ್ಟರ್ಗಳು ಹಾಗೂ ನರ್ಸ್ ಗಳ ಕೊರತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತರ ರಾಜ್ಯಗಳಿಂದ ಡಾಕ್ಟರ್ ಗಳನ್ನು ಕರೆಸಿಕೊಂಡರೂ ಕೂಡ ಗುಣಮುಖರಾಗುತ್ತಿರುವ ಸಂಖ್ಯೆ ಅಷ್ಟಕಷ್ಟೇ. ಹೀಗಿರುವಾಗ ನಮ್ಮ ನೆರೆಯ ಮತ್ತೊಂದು ರಾಜ್ಯವಾದ ಕೇರಳ ರಾಜ್ಯ ಮಹಾರಾಷ್ಟ್ರದ ಕೈಹಿಡಿಯಲು ನಿರ್ಧರಿಸಿದೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಕೇರಳ ರಾಜ್ಯದ ವೈದ್ಯರು ಕೊರೋನಾ ವಿರುದ್ಧದ ಹೋರಾಟದಲ್ಲಿ ಉತ್ತಮ ಯಶಸ್ಸುಗಳಿಸಿದ್ದಾರೆ. ಇದೀಗ ಮಹಾರಾಷ್ಟ್ರ ರಾಜ್ಯಕ್ಕೆ ನುರಿತ 100 ವೈದ್ಯರನ್ನು ಕಳುಹಿಸಲು ಕೇರಳ ರಾಜ್ಯ ನಿರ್ಧಾರ ಮಾಡಿದ್ದು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಮಹಾರಾಷ್ಟ್ರ ತಲುಪಲಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಕೈ ಹಿಡಿಯಲು ಹೊರಟಿರುವ ಕೇರಳ ರಾಜ್ಯಕ್ಕೆ ನಮ್ಮ ತಂಡದ ಪರವಾಗಿ ವಂದನೆಗಳು.

Post Author: Ravi Yadav