ಇಂದಿನ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಹಾಗೂ ಬೌಲರ್ ಗಳನ್ನು ಆಯ್ಕೆಮಾಡಿದ ಸಂಗಕ್ಕರ ! ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಶ್ರೀಲಂಕಾ ಕ್ರಿಕೆಟ್ ನ ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿರುವ ಕುಮಾರ ಸಂಗಕ್ಕಾರ ರವರು ಯಾವ ರೀತಿಯಲ್ಲಿ ಕ್ರಿಕೆಟ್ ಲೋಕದಲ್ಲಿ ಅದ್ವಿತೀಯ ಉತ್ತಮ ಪ್ರದರ್ಶನ ನೀಡಿದ್ದರು ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.

ಈ ರೀತಿಯ ಆಟಗಾರನಿಂದ ಪ್ರಶಂಸೆಗೆ ಒಳಪಡುವುದು ಎಂದರೇ ಮತ್ತೊಬ್ಬ ಕ್ರಿಕೆಟ್ ಆಟಗಾರರಿಗೆ ಬಹಳ ಹೆಮ್ಮೆಯ ಸಂಗತಿಯೇ ಸರಿ. ಇದೀಗ ಮಾತನಾಡಿರುವ ಕುಮಾರ ಸಂಗಕ್ಕಾರ ರವರು ಆಧುನಿಕ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಹಾಗೂ ಶ್ರೇಷ್ಠ ಬೌಲರ್ ಗಳನ್ನು ಆಯ್ಕೆ ಮಾಡಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಇತರ ಆಟಗಾರರಿಗೆ ಹೋಲಿಸಿದರೆ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿ ಹೊರ ಹೊಮ್ಮಿರುವುದು ಮತ್ಯಾರು ಅಲ್ಲ ಭಾರತದ ಕಿಂಗ್ ಕೊಹ್ಲಿ. ಶ್ರೇಷ್ಠ ಬ್ಯಾಟ್ಸ್ಮನ್ ಗಳನ್ನು ಆಯ್ಕೆ ಮಾಡಿ ಎಂದ ತಕ್ಷಣ ಕುಮಾರ ಸಂಗಕ್ಕಾರ ರವರು ಕೇವಲ ಒಂದೇ ಒಂದು ಹೆಸರನ್ನು ತೆಗೆದುಕೊಂಡರು, ಮತ್ತೊಬ್ಬರ ಬಗ್ಗೆ ಆಲೋಚನೆ ಕೂಡ ಮಾಡಲಿಲ್ಲ.

ಇನ್ನು ವೇಗದ ಹಾಗೂ ಸ್ಪಿನ್ ಬೌಲರ್ ಗಳ ಕುರಿತು ಮಾತನಾಡಿ ಎಂದಾಗ ಕುಮಾರ ಸಂಗಕ್ಕಾರ ರವರು ವೇಗದ ಪಿಚ್ ಗಳಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವ ಸ್ಪಿನ್ನರ್ ನಾಥನ್ ಲಿಯಾನ್ ರವರು ಉತ್ತಮ ಎಂದು ಅನಿಸುತ್ತದೆ. ಇನ್ನೂ ವೇಗದ ಬೌಲರ್ ಗಳನ್ನು ಗಮನಿಸಿದರೇ ಮೂರು ಆಟಗಾರರ ಹೆಸರು ನೆನಪಾಗುತ್ತದೆ. ಜೇಮ್ಸ್ ಆಂಡರ್ಸನ್ ರವರು ಇಂಗ್ಲೆಂಡ್ ಪಿಚ್ ಗಳಲ್ಲಿ ಉತ್ತಮ ಬೌಲರ್ ಆಗಿದ್ದಾರೆ, ಆದರೆ ಭಾರತೀಯ ಬೌಲರ್ ಜಸ್ಟೀಸ್ ಬುಮ್ರಾ ಹಾಗೂ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ರವರು ಎಲ್ಲಾ ರೀತಿಯ ಪಿಚ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Facebook Comments

Post Author: Ravi Yadav