ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟಿಸಿದ ಪಾಂಡ್ಯ ! ಬಲಿಷ್ಠ ತಂಡ ಎಂದ ನೆಟ್ಟಿಗರು ! ಆಯ್ಕೆಯಾದವರು ಯಾರ್ಯಾರು ಗೊತ್ತಾ?

ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟಿಸಿದ ಪಾಂಡ್ಯ ! ಬಲಿಷ್ಠ ತಂಡ ಎಂದ ನೆಟ್ಟಿಗರು ! ಆಯ್ಕೆಯಾದವರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ವರ್ಷಗಳ ಹಿಂದೆ ಅಂದರೆ 2015ರಲ್ಲಿ ಒಬ್ಬ ಯುವಕ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಐಪಿಎಲ್ನಲ್ಲಿ ಭಾಗಿಯಾಗುತ್ತಾನೆ. ಪಾದಾರ್ಪಣೆ ಮಾಡಿದ ಮುಂದಿನ ವರ್ಷವೇ ಅಂತರಾಷ್ಟ್ರೀಯ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುತ್ತಾನೆ.

ತದನಂತರ ದೇಶದ ಅತ್ಯುತ್ತಮ ಆಲ್-ರೌಂಡರ್ ಗಳ ಸ್ಥಾನದಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಆಟಗಾರನಾಗಿ ಬೆಳೆದು ಇಂದು ವಿಶ್ವದಲ್ಲಿಯೇ ಉತ್ತಮ ಆಲ್-ರೌಂಡರ್ ಗಳ ಸಾಲಿನಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಮತ್ತ್ಯಾರು ಅಲ್ಲ ಹಾರ್ದಿಕ್ ಪಾಂಡ್ಯ. ಹಲವಾರು ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಟವಾಡುತ್ತಿರುವ ಹಾರ್ದಿಕ್ ಪಾಂಡ್ಯ ರವರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಘೋಷಣೆ ಮಾಡಿದ್ದಾರೆ.

ಈ ತಂಡ ಕೇಳಿದ ಹಲವಾರು ನೆಟ್ಟಿಗರು ಬಲಿಷ್ಠ ತಂಡ ಎಂದು ಹಾಡಿ ಹೊಗಳಿದ್ದಾರೆ, ಇನ್ನು ಕೆಲವರು ತಮ್ಮ ಅಭಿಪ್ರಾಯಗಳು ಮೂಲಕ ಈ ಆಟಗಾರನ ಬದಲು ಬೇರೆ ಆಟಗಾರರು ಇರಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಂಡ ಈ ಕೆಳಗಿನಂತಿದ್ದು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ. ಹಾರ್ದಿಕ್ ಪಾಂಡ್ಯ ಅವರ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಇಲೆವೆನ್: ಕ್ರಿಸ್ ಗೇಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಎಂಎಸ್ ಧೋನಿ (C,WK), ಹಾರ್ದಿಕ್ ಪಾಂಡ್ಯ, ಸುನಿಲ್ ನರೈನ್, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ.