ಕೊಹ್ಲಿ, ರೋಹಿತ್ ಶರ್ಮಾ ನಡುವೆ ಶ್ರೇಷ್ಠ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ ಬ್ರಾಡ್ ಹಾಗ್ !

ನಮಸ್ಕಾರ ಸ್ನೇಹಿತರೇ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಆಧಾರಸ್ತಂಭ ಗಳಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಬ್ಬರು ಭಾರತ ಕ್ರಿಕೆಟ್ ತಂಡಕ್ಕೆ ಹಲವಾರು ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ.

ಇವರಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆಯನ್ನು ಹಲವಾರು ಬಾರಿ ಅಭಿಮಾನಿಗಳು ಕೇಳುತ್ತಿರುತ್ತಾರೆ. ವಿರಾಟ್ ಕೊಹ್ಲಿ ರವರ ಅಭಿಮಾನಿಗಳು ಕೊಹ್ಲಿ ಶ್ರೇಷ್ಠ ಎಂದರೇ, ಅದೇ ರೀತಿ ರೋಹಿತ್ ಅಭಿಮಾನಿಗಳು ರೋಹಿತ್ ಶ್ರೇಷ್ಠ ಎನ್ನುತ್ತಾರೆ. ಇದೇ ರೀತಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುಟ್ಯೂಬ್ ಚಾನೆಲ್ ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ರೋಹಿತ್ ಹಾಗೂ ವಿರಾಟ್ ಕೊಹ್ಲಿ ರವರಲ್ಲಿ ಯಾರು ಶ್ರೇಷ್ಠ ಬ್ಯಾಟ್ಸಮನ್ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿರುವ ಬ್ರಾಡ್ ಹಾಗ್ ರವರು, ಶ್ರೇಷ್ಠ ಬ್ಯಾಟ್ಸಮನ್ ಆಯ್ಕೆ ಮಾಡಿದರೂ ಕೂಡ ಮತ್ತೊಬ್ಬ ಆಟಗಾರನ ಪ್ರಾಮುಖ್ಯತೆಯನ್ನು ವಿವರಿಸುವುದನ್ನು ಮರೆಯಲಿಲ್ಲ. ಅವರ ಉತ್ತರ ಹೀಗಿತ್ತು. ನನ್ನ ಆಯ್ಕೆ ವಿರಾಟ್ ಕೊಹ್ಲಿ, ಭಾರತ ತಂಡವು ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ಇವರಿಬ್ಬರ ಕ್ರಮಾಂಕಗಳು ಒಂದೇ ಆಗಿಲ್ಲ, ಆದ ಕಾರಣ ನಾವು ಒಬ್ಬರ ಜೊತೆಗೆ ಒಬ್ಬರಿಗೆ ಹೋಲಿಕೆಯ ಮಾಡುವುದು ಕಷ್ಟದ ಕೆಲಸವಾಗಿರುತ್ತದೆ. ಹೊಸ ಬಾಲ್ ಜೊತೆ ಇನ್ನಿಂಗ್ಸ್ ಆರಂಭವಾದಾಗ ಬೌಲರ್ಗಳಿಗೆ ಉತ್ತರ ನೀಡುವುದು ರೋಹಿತ್ ಶರ್ಮಾ ರವರ ಕೆಲಸವಾಗಿರುತ್ತದೆ, ಇವರ ನಂತರ ತಂಡವನ್ನು ಮುನ್ನಡೆಸಿ ಗುರಿ ತಲುಪಿಸುವುದು ಕೊಹ್ಲಿ ಕೆಲಸ ಎಂದಿದ್ದಾರೆ.

Post Author: Ravi Yadav