ಮೋದಿ 2.0 ವರ್ಷ ತುಂಬಿದ ಬೆನ್ನಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಜಪಾನ್ ಅನ್ನು ಮೀರಿಸಿ ಮತ್ತೊಂದು ಗರಿ ಮುಡಿಗೇರಿಸಿಕೊಂಡ ಭಾರತ. ಏನು ಗೊತ್ತಾ?

ಮೋದಿ 2.0 ವರ್ಷ ತುಂಬಿದ ಬೆನ್ನಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಜಪಾನ್ ಅನ್ನು ಮೀರಿಸಿ ಮತ್ತೊಂದು ಗರಿ ಮುಡಿಗೇರಿಸಿಕೊಂಡ ಭಾರತ. ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನರೇಂದ್ರ ಮೋದಿರವರು ಇದೀಗ ಎರಡನೇ ಬಾರಿ ಅಧಿಕಾರಕ್ಕೆ ಏರಿ ಒಂದು ವರ್ಷ ಕಳೆದಿದೆ. ಇದೇ ಸಮಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಗರಿ ಸಿಕ್ಕಿದೆ.

ಹೌದು ಸ್ನೇಹಿತರೇ, ಇದೀಗ ವಿಶ್ವದ ಎಲ್ಲೆಡೆ ಜಲವಿದ್ಯುತ್ ಯೋಜನೆಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಯಾಕೆಂದರೆ ಲಾಕ್ಡೌನ್ ಪರಿಣಾಮ ಹಲವಾರು ವಿದ್ಯುತ್ ಸ್ಥಾವರಗಳು ಸ್ಥಗಿತಗೊಂಡಿದ್ದರೂ ಕೂಡ ಜಲವಿದ್ಯುತ್ ಯೋಜನೆಗಳು ಮಾತ್ರ ಯಾವುದೇ ಅಡಚಣೆ ಇಲ್ಲದೆ ನಡೆಯುತ್ತಿವೆ. ನಾವು ಈ ರೀತಿಯ ಪರಿಸ್ಥಿತಿ ಗಳಿಗಾಗಿ ಜಲವಿದ್ಯುತ್ ಯೋಜನೆಗಳನ್ನು ಉತ್ತೇಜನ ಮಾಡುತ್ತಿದ್ದೆವು ಎಂದು ತನ್ನ ಬೆನ್ನು ತಟ್ಟಿಕೊಂಡಿರುವ ಗ್ಲೋಬಲ್ ಹೈಡ್ರೋ ಪವರ್ ಸಂಸ್ಥೆ, ಇದೀಗ ಇದರ ಕುರಿತು ಹೊಸ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಈ ಮೂಲಕ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ.

ಇದೀಗ ಲಂಡನ್ ನ ಗ್ಲೋಬಲ್ ಹೈಡ್ರೋ ಪವರ್ ಸಂಸ್ಥೆಯು ದೇಶಗಳ ಜಲವಿದ್ಯುತ್ ಉತ್ಪಾದನೆಯ ಮೇಲೆ ರಾಂಕಿಂಗ್ ಬಿಡುಗಡೆ ಮಾಡಿದ್ದು ಭಾರತ ದೇಶವು ಜಪಾನ್ ದೇಶವನ್ನು ಮೀರಿಸಿ ಐದನೇ ಸ್ಥಾನ ಪಡೆದುಕೊಂಡಿದೆ. ನಮಗಿಂತ ಮುಂದೆ ಕೆನಡಾ, ಅಮೆರಿಕ, ಕ್ರಿಸಿಲ್ ಹಾಗೂ ಚೀನಾ ದೇಶಗಳು ಮೊದಲ 4 ಸ್ಥಾನದಲ್ಲಿವೆ. ಈ ವರದಿಯ ಪ್ರಕಾರ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತ ಇದೇ ರೀತಿ ಜಲವಿದ್ಯುತ್ ಉತ್ಪಾದನೆ ಮುಂದುವರಿಸಿದ್ದಲ್ಲಿ ಮೊದಲ ಸ್ಥಾನಕ್ಕೆ ಏರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎನರ್ಜಿ ಟೈಮ್ಸ್ ವರದಿ ಮಾಡಿದೆ.