ಜನತೆ ಆಯಿತು, ಸ್ವ ಪಕ್ಷದವರು ಆಯಿತು ಇದೀಗ ನೇಪಾಳದ ಸೇನಾ ಅಧ್ಯಕ್ಷ ನೇಪಾಳದ ಪ್ರಧಾನಿಗೆ ಉತ್ತರ ನೀಡಿದ್ದು ಹೇಗೆ ಗೊತ್ತಾ?

ಜನತೆ ಆಯಿತು, ಸ್ವ ಪಕ್ಷದವರು ಆಯಿತು ಇದೀಗ ನೇಪಾಳದ ಸೇನಾ ಅಧ್ಯಕ್ಷ ನೇಪಾಳದ ಪ್ರಧಾನಿಗೆ ಉತ್ತರ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಇಷ್ಟು ದಿವಸ ಸಹೋದರ ಬಾಂಧವ್ಯವನ್ನು ಹೊಂದಿದ್ದ ನೇಪಾಳ ಹಾಗೂ ಭಾರತದ ನಡುವೆ ಅಲ್ಲಿನ ಪ್ರಧಾನಿ ತೆಗೆದುಕೊಂಡ ಒಂದು ನಿರ್ಧಾರ ಎರಡು ದೇಶಗಳ ನಡುವಿನ ಸಂಬಂಧಕ್ಕೆ ಕೊನೆ ಹಾಡುವಂತೆ ಕಾಣುತ್ತಿದೆ.

ಒಂದೆಡೆ ಭಾರತೀಯ ಸೇನೆ ಹಾಗೂ ಭಾರತೀಯ ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ನೇಪಾಳ ಸರ್ಕಾರದ ನಕ್ಷೆಯಲ್ಲಿರುವ ಭಾರತದ ಪ್ರದೇಶಗಳನ್ನು ನೇಪಾಳಕ್ಕೆ ಬಿಟ್ಟು ಕೊಡಲು ಸಾಧ್ಯವೇ ಇಲ್ಲ, ಇದೊಂದು ಅಸಂಬದ್ಧ ನಕ್ಷೆ ಯಾಗಿದೆ ಎಂದು ಖಡಕ್ ಆಗಿಯೇ ಉತ್ತರ ನೀಡಿದೆ. ಇನ್ನು ಭಾರತೀಯ ಸೇನೆಯ ಜನರಲ್ ನೇಪಾಳದ ಮತ್ತೊಬ್ಬರ ಮಾತು ಕೇಳಿ ಈ ಕೆಲಸ ಮಾಡಿದೆ ಎಂದು ಉತ್ತರ ನೀಡಿದ್ದರು. ಈ ವಿಚಾರದಲ್ಲಿ ನೇಪಾಳದ ಪ್ರಧಾನಿಗೆ ಪ್ರತಿಯೊಂದು ಹಂತದಲ್ಲಿಯೂ ಸರಿಯಾದ ಉತ್ತರವೇ ಸಿಗುತ್ತಿದೆ.

ಮೊದಲಿಗೆ ಭಾರತದ ಪ್ರದೇಶಗಳಲ್ಲಿ ತಮ್ಮ ಧ್ವಜ ನೀಡುವ ಮೂಲಕ ವಿವಾದವನ್ನು ದೊಡ್ಡದು ಮಾಡಲು ಹೊರಟ ಅಲ್ಲಿನ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರನ್ನು ನೇಪಾಳದ ಜನೆತೆ ತಡೆದು 2 ಬಿಟ್ಟು ಕಳುಹಿಸಿದ ಘಟನೆ ನಡೆಯಿತು.

ಇಷ್ಟು ಸಾಲದು ಎಂಬಂತೆ ಹೊಸ ನಕ್ಷೆಯನ್ನು ಸಾಂವಿಧಾನಿಕವಾಗಿ ಅಂಗೀಕಾರ ಮಾಡಲು ಹೋದಾಗ ಸ್ವಪಕ್ಷ ನಾಯಕರು ಹಾಗೂ ವಿಪಕ್ಷ ನಾಯಕರು ಒಂದಾಗಿ ನೇಪಾಳದ ಪ್ರಧಾನಿ ರವರ ಪ್ರಸ್ತಾಪವನ್ನು ತಿರಸ್ಕರಿಸ ಮಾಡಿದರು.

ಇಷ್ಟಾದರೂ ಸುಮ್ಮನೆ ಆಗದ ನೇಪಾಳದ ಪ್ರಧಾನಿ, ಭಾರತೀಯ ಸೇನೆಯು ನೀಡಿದ ಮಾತಿನ ಉತ್ತರಕ್ಕೆ ಪ್ರತ್ಯುತ್ತರ ನೀಡುವಂತೆ ನೇಪಾಳದ ಸೇನೆಯನ್ನು ಕೇಳಿಕೊಂಡಿದ್ದರು. ಆದರೆ ನೇಪಾಳದ ಸೇನೆಯು ಕೂಡ ಪ್ರಧಾನಿ ಪ್ರಸ್ತಾಪವನ್ನು ತಿರಸ್ಕಾರ ಮಾಡಿ ಈ ರೀತಿ ಹೇಳಿಕೊಂಡಿದೆ,

ನೇಪಾಳ ಸೇನೆಯು ಸಂವಿಧಾನದ ಆಧಾರದ ಮೇಲೆ ಕೆಲಸ ಮಾಡುತ್ತದೆ, ಸದಾ ಶಿಸ್ತು, ಸಂಯಮ, ಹೊಣೆಗಾರಿಕೆ ಮತ್ತು ಗೌರವದ ಅದ್ಭುತ ಸಂಪ್ರದಾಯವನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದೆ. ನಾವು ಅನಗತ್ಯ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ, ದೇಶದ ಅತ್ಯುನ್ನತ ಕಾರ್ಯನಿರ್ವಾಹಕ ಕಚೇರಿ ಯಾಗಿರುವ ಸಂಸತ್ ಬಗ್ಗೆ ನಮಗೆ ಗೌರವವಿದೆ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಯಾವುದೇ ರಾಜಕೀಯ ಹೇಳಿಕೆಗಳನ್ನು ನಾವು ಗಣನೆಗೆ ತೆಗೆದುಕೊಂಡು ಉತ್ತರ ನೀಡಲು ಸಾಧ್ಯವಿಲ್ಲ. ನಿಮ್ಮ ಮನವಿ ತಿರಸ್ಕರಿಸುತ್ತಿದ್ದೇವೆ ಎಂದು ನೇಪಾಳದ ಸೇನಾ ನಾಯಕ ಪಿಸಿ ಥಾಪ ಅವರು ಉತ್ತರ ನೀಡಿದ್ದಾರ