ಚೀನಾ-ನೇಪಾಳಕ್ಕೆ ಭಾರಿ ಮುಖಭಂಗ ! ಭಾರತದ ನೆಲದಲ್ಲಿ ತನ್ನ ಧ್ವಜ ಹಾರಿಸಲು ಬಂದವರಿಗೆ ನೇಪಾಳಿ ಜನತೆ ಮಾಡಿದ್ದೇನು ಗೊತ್ತಾ?

ಚೀನಾ-ನೇಪಾಳಕ್ಕೆ ಭಾರಿ ಮುಖಭಂಗ ! ಭಾರತದ ನೆಲದಲ್ಲಿ ತನ್ನ ಧ್ವಜ ಹಾರಿಸಲು ಬಂದವರಿಗೆ ನೇಪಾಳಿ ಜನತೆ ಮಾಡಿದ್ದೇನು ಗೊತ್ತಾ?v

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ನೇಪಾಳದ ಕಮ್ಮುನಿಸ್ಟ್ ಸರ್ಕಾರವು ಚೀನಾ ದೇಶದ ಜೊತೆ ಕೈಜೋಡಿಸಿದೆ. ಇಷ್ಟು ದಿವಸ ಭಾರತದ ಜೊತೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದ ನೇಪಾಳ, ಇದ್ದಕ್ಕಿದ್ದ ಹಾಗೆ ಚೀನಾ ಪರವಾಗಿ ಕೆಲಸ ಮಾಡಲು ಆರಂಭಿಸಿದೆ.

ಹೌದು, ಭಾರತ ಹಾಗೂ ನೇಪಾಳ ದೇಶಗಳು ಮೊದಲಿನಿಂದಲೂ ಸಾಂಸ್ಕೃತಿಕ ಬಾಂಧವ್ಯವನ್ನು ಹಂಚಿಕೊಂಡಿವೆ, ಹಾಗೂ ಚೀನಾ ದೇಶದ ಜೊತೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಷ್ಟೇ ಅಲ್ಲದೆ ಎರಡು ದೇಶಗಳ ನಡುವೆ ಈ ರೀತಿಯ ಕಹಿ ಘಟನೆಗಳು ನಡೆದು ಒಂದು ವೇಳೆ ಭಾರತ ತನ್ನ ಗಡಿಯನ್ನು ನೇಪಾಳಿಗರಿಗೆ ಶಾಶ್ವತವಾಗಿ ಮುಚ್ಚಲು ನಿರ್ಧಾರ ಮಾಡಿದರೇ ಲಕ್ಷಾಂತರ ಕಾರ್ಮಿಕರು ಭಾರತದಲ್ಲಿ ಉದ್ಯೋಗವನ್ನು ಕಳೆದು ಕೊಳ್ಳುತ್ತಾರೆ. ಇನ್ನು ಭಾರತ ಇಷ್ಟು ದಿವಸ ನೇಪಾಳಕ್ಕೆ ಚಿಕ್ಕ ರಾಷ್ಟ್ರವಾದರೂ ಕೂಡ ಬಹಳ ಗೌರವದಿಂದ ಕಂಡು, ಪ್ರತಿಯೊಂದು ಸಮಯದಲ್ಲಿಯೂ ನೇಪಾಳದ ಕೈಹಿಡಿದಿದೆ.

ಆದರೆ ಇದೀಗ ನೇಪಾಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಚೀನಾ ದೇಶದ ಜೊತೆ ತನ್ನನ್ನು ತಾನು ಮಾರಾಟ ಮಾಡಿಕೊಂಡಂತೆ ಕಾಣುತ್ತಿದೆ,ಸುಖಾಸುಮ್ಮನೆ ಗಡಿಯಲ್ಲಿ ಖ್ಯಾತೆ ತೆಗೆಯುತ್ತಿದೆ. ಆದರೆ ಅಲ್ಲಿನ ನಾಗರಿಕರು ಮಾತ್ರ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಮುಂದುವರಿಸಲು ಇಚ್ಛಿಸುತ್ತಿದ್ದಾರೆ ಎಂಬುದು ಈ ಘಟನೆಯ ಮೂಲಕ ತಿಳಿದುಬಂದಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತವು ಇತ್ತೀಚೆಗೆ ಧಾರ್ಚೂಲಾ – ಲಿಪೂಲೇಖ್ ರಸ್ತೆಯನ್ನು ಉದ್ಘಾಟನೆ ಮಾಡಿದೆ. ಇದರಿಂದ ಭಾರತೀಯ ಸೇನೆ ವೇಗವಾಗಿ ಗಡಿ ತಲುಪಲು ಸಹಾಯ ವಾಗುತ್ತದೆ. ಇದರ ಮೇಲೆ ಚೀನಾ ಕಣ್ಣು ಬಿದ್ದಿದ್ದು ಸುಖಾಸುಮ್ಮನೆ ಗಡಿ ಖ್ಯಾತೆ ತೆಗೆಯಲು ನೇಪಾಳದಲ್ಲಿನ ಸರ್ಕಾರವನ್ನು ಬಳಸಿಕೊಳ್ಳುತ್ತಿದೆ.

ಇದೇ ಕಾರಣಕ್ಕಾಗಿ ಕಳೆದ 4 ದಿನಗಳ ಹಿಂದೆ ನೇಪಾಳದ ಕಮ್ಮುನಿಸ್ಟ್ ಸರ್ಕಾರ ಭಾರತದ ವಿರುದ್ಧ ಸುಖಾಸುಮ್ಮನೆ ಖ್ಯಾತೆ ತೆಗೆದಿತ್ತು. ಇಷ್ಟು ಸಾಲದು ಎಂಬಂತೆ ನೇಪಾಳದ 8 ಕಮ್ಯುನಿಸ್ಟ್ ನಾಯಕರು ಭಾರತದ ನೆಲದಲ್ಲಿ ತನ್ನ ಧ್ವಜ ಹಾರಿಸಲು ಬಾರಿ ಪ್ರಚಾರದೊಂದಿಗೆ ಬರೋಬ್ಬರಿ ನಾವು 110 ಕಿಲೋಮೀಟರ್ ಪಾದಯಾತ್ರೆ ನಡೆಸಿ, ಧ್ವಜ ಹಾರಿಸುತ್ತೇವೆ ಎಂದೆಲ್ಲಾ ತಯಾರಿ ನಡೆಸಿದ್ದರು.

ಆದರೆ ಮೂರು ದಿನಗಳಲ್ಲಿ 60 ಕಿಲೋಮೀಟರ್ ದೂರವನ್ನು ತಲುಪಿದ ಬಳಿಕ ಅವರು ನೇಪಾಳದ ಡಂಲಿಂಗ್ ಎಂಬ ಗ್ರಾಮಕ್ಕೆ ಬರುತ್ತಾರೆ. ಇಲ್ಲಿನ ಜನರು ನೇಪಾಳದ ಕಮ್ಮಿನಿಸ್ಟರು, ಭಾರತ ಹಾಗೂ ನೇಪಾಳದ ನಡುವೆ ಇರುವ ದ್ವಿಪಕ್ಷೀಯ ಸಂಬಂಧವನ್ನು ಶಾಶ್ವತವಾಗಿ ಅಪಾಯಕ್ಕೆ ತರುತ್ತಾರೆ ಎಂಬುದನ್ನು ಅರಿತು ಯಾವುದೇ ಕಾರಣಕ್ಕೂ ಮುಂದೆ ಹೋಗಲು ಬಿಡುವುದಿಲ್ಲ ಎಂದು ಪ್ರತಿರೋಧ ತೋರಿಸಿದ್ದಾರೆ. ಸ್ಥಳೀಯರು ಮತ್ತು ಎಂಟು ಯುವಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಗ್ರಾಮಸ್ಥರು ರೊಚ್ಚಿಗೆದ್ದು ಸರಿಯಾಗಿ ಕೈ ಹಾಗೂ ದೊಣ್ಣೆಗಳ ಮೂಲಕವೇ ಉತ್ತರ ನೀಡಿದ್ದಾರೆ. ಕೊನೆಗೆ ಪೊಲೀಸರು ಬಂದು ಸರ್ಕಾರ ಪರವಾದ ನಾಯಕರಾಗಿರುವ ಕಾರಣ ಲಾಕ್ಡೌನ್ ಉಲ್ಲಂಘನೆ ಎಂಬ ಚಿಕ್ಕ ಆರೋಪ ಮಾಡಿ 8 ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.