ಚೀನಾಗೆ 2 ತಿಂಗಳಲ್ಲಿ ಸೆಡ್ಡು ! ಉತ್ಪಾದನಾ ಘಟಕ, ವ್ಯಾಪಾರ ಮಾಡಲು ಕಾದು ಕುಳಿತಿರುವ ರಾಷ್ಟ್ರಗಳಿಗೆ ತಾಕತ್ತು ಸಾರಿದ ಭಾರತ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಬಹುತೇಕ ರಾಷ್ಟ್ರಗಳು ವಿವಿಧ ರೀತಿಯಲ್ಲಿ ಚೀನಾ ದೇಶದ ಮೇಲೆ ಅವಲಂಬಿತವಾಗಿವೆ. ಅದರಲ್ಲಿಯೂ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವ ಅತಿ ದೊಡ್ಡ ದೇಶವೇ ಚೀನಾ.

ಭಾರತವು ಗಣನೀಯ ಪ್ರಮಾಣದಲ್ಲಿ ಮಾತ್ರೆಗಳು ತಯಾರು ಮಾಡುತ್ತಿದ್ದರೂ ಕೂಡ ವೈದ್ಯಕೀಯ ಉಪಕರಣಗಳನ್ನು ತಯಾರು ಮಾಡುತ್ತಿರಲಿಲ್ಲ, ಚೀನಾ ದೇಶದಿಂದಲೇ ಆಮದು ಮಾಡಿಕೊಳ್ಳುತಿತ್ತು. ಆದರೆ ಕೋರೋನ ಪರಿಸ್ಥಿತಿಯಲ್ಲೂ ಕೂಡ ತನ್ನ ಕಳಪೆ ಬುದ್ಧಿ ಬಿಡದ ದೇಶ, ವಿದೇಶಗಳಿಗೆ ಕಳಪೆ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ರಪ್ತು ಮಾಡುವ ಮೂಲಕ ತನ್ನ ಬುದ್ಧಿ ಪ್ರದರ್ಶಿಸಿತು. ಹಲವಾರು ದೇಶಗಳು ಬೇರೆ ವಿಧಿ ಇಲ್ಲದೆ ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದವು. ಭಾರತ ದೇಶ ಕೂಡ ಮೊದ ಮೊದಲಿಗೆ ಆಮದು ಮಾಡಿಕೊಂಡು ತದನಂತರ ತನ್ನಲ್ಲಿಯೇ ಉತ್ಪಾದನೆ ಆರಂಭಿಸಿತು, ಇದೀಗ ಈ ಉತ್ಪಾದನೆ ಕೇವಲ ಉತ್ಪಾದನೆಯಾಗಿ ಉಳಿದಿಲ್ಲ ಬದಲಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾರಿ ಸದ್ದು ಮಾಡಿದೆ.

ಕಳೆದ ಎರಡು ತಿಂಗಳುಗಳ ಹಿಂದೆ ದಿನಕ್ಕೆ ಒಂದೇ ಒಂದು ಪಿಪಿಇ ಕಿಟ್ ತಯಾರಿ ಮಾಡದ ಭಾರತ, ಇಂದು ಗಣನೀಯ ಪ್ರಮಾಣದಲ್ಲಿ ದಿನೇ ದಿನೇ ಏರಿಕೆ ಕಂಡು ವಿಶ್ವದ ಎರಡನೇ ಅತಿದೊಡ್ಡ ಪಿಪಿಇ ಕಿಟ್ ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದಲ್ಲದೆ ಪಿಪಿಎ ಕಿಟ್ ಗಳ ಗುಣಮಟ್ಟ ಅತ್ಯುತ್ತಮವಾಗಿದ್ದು, ಪ್ರತಿಯೊಂದು ಪಿಪಿಇ ಕಿಟ್ ಕೂಡ ಗುಣಮಟ್ಟದ ಶ್ರೇಯಾಂಕ ತಲುಪಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಸೊನ್ನೆಯಿಂದ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದನಾ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಭಾರತಕ್ಕೆ ತಗುಲಿದ ಸಮಯ ಕೇವಲ ಎರಡರಿಂದ ಮೂರು ತಿಂಗಳು ಎಂದರೇ ನೀವು ನಂಬಲೇಬೇಕು. ಈ ಮೂಲಕ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಶ್ವಕ್ಕೆ ಸಾರಿದ್ದು ಇದೀಗ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುತ್ತಿದೆ. ಇದೇ ಸಮಯದಲ್ಲಿ ಚೀನಾ ದೇಶದಿಂದ 17 ರೂ ಗೆ ಆಮದು ಮಾಡಿಕೊಳ್ಳುತ್ತಿದ್ದ ಸ್ವಾಬ್ ಅನ್ನು ಭಾರತದಲ್ಲಿಯೇ ಎರಡು ರೂಪಾಯಿಗೆ ತಯಾರಿ ಮಾಡಿ ಕೋಟ್ಯಂತರ ರೂ ಉಳಿಸಿ ಉದ್ಯೋಗ ಸೃಷ್ಟಿ ಮಾಡಿರುವ ಘಟನೆಯನ್ನು ಸ್ಮರಿಸಬಹುದು.

Post Author: Ravi Yadav