ಸ್ವಾವಲಂಬಿ ಭಾರತಕ್ಕೆ ಕೈಜೋಡಿಸಿದ ವಾಯುಪಡೆ ! ಎಚ್ಎಎಲ್ ಗೆ ಭರ್ಜರಿ ಸಿಹಿಸುದ್ದಿ

ಸ್ವಾವಲಂಬಿ ಭಾರತಕ್ಕೆ ಕೈಜೋಡಿಸಿದ ವಾಯುಪಡೆ ! ಎಚ್ಎಎಲ್ ಗೆ ಭರ್ಜರಿ ಸಿಹಿಸುದ್ದಿ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ನರೇಂದ್ರ ಮೋದಿರವರು ಕೊರೋನಾ ನಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ಹಾಗೂ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸ್ವಾವಲಂಬಿ ಭಾರತ ಎಂಬ ಘೋಷಣೆಯ ಮೂಲಕ ಧ್ವನಿ ಎತ್ತಿದ್ದರು.

ಕಾಲಕ್ರಮೇಣ ನಾವು ವಿದೇಶಗಳ ವಸ್ತುಗಳ ಮೇಲಿನ ಅವಲಂಬನೆ ಬಿಡಬೇಕು ಎಂಬುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಇದೀಗ ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಭಾರತೀಯ ವಾಯುಪಡೆ ಸ್ವಾವಲಂಬಿ ಭಾರತ ಯೋಜನೆಗೆ ಕೈಜೋಡಿಸಲು ಸಿದ್ಧವಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಹಳೆಯ ಯುದ್ಧ ವಿಮಾನಗಳನ್ನು ಸೇನೆಯಿಂದ ಹೊರಗಿಡಲು ಭಾರತೀಯ ವಾಯುಪಡೆಯು ಇನ್ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಖರೀದಿ ಮಾಡಲು ನಿರ್ಧಾರ ಮಾಡಿತ್ತು. ಇದರಲ್ಲಿ ಈಗಾಗಲೇ ಕೆಲವು ಒಪ್ಪಂದಗಳು ಕೂಡ ನಡೆದಿದ್ದವು, ಉದಾಹರಣೆಗೆ ರಫೇಲ್ ಒಪ್ಪಂದ.

ಇದೇ ಯೋಜನೆಯ ಅಡಿಯಲ್ಲಿ ಬರೋಬ್ಬರಿ 1.15 ಲಕ್ಷ ಕೋಟಿ ಮೊತ್ತದಲ್ಲಿ 114 ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಟೆಂಡರ್ ಕರೆಯಲು ಸಕಲ ಸಿದ್ಧತೆಗಳನ್ನು ಮಾಡಿ, ಹಲವಾರು ಕಂಪನಿಗಳ ಜೊತೆ ಮಾತುಕತೆ ಕೂಡ ನಡೆಸಿತ್ತು. ಆದರೆ ಇದೀಗ ಸ್ವಾವಲಂಬಿ ಭಾರತ ಆಲೋಚನೆಗೆ ಕೈಜೋಡಿಸಲು ವಾಯುಪಡೆಯ ನಿರ್ಧಾರ ಮಾಡಿದ್ದು, ಟೆಂಡರ್ ಕರೆಯದೆ ಇರಲು ನಿರ್ಧಾರ ಮಾಡಿ, ಟೆಂಡರ್ ಅನ್ನು ನೇರವಾಗಿ ಎಚ್ಎಎಲ್ ಕಂಪನಿಗೆ ವರ್ಗಾಯಿಸಲು ಸಿದ್ಧವಾಗಿದೆ. ಹೌದು, ಇತರ ದೇಶಗಳ ಯುದ್ಧ ವಿಮಾನಗಳ ಬದಲಿಗೆ ತೇಜಸ್ ವಿಮಾನಗಳನ್ನು ಭಾರತದಲ್ಲಿಯೇ ತಯಾರು ಮಾಡಿ ಸೇನೆಗೆ ಗಣನೀಯ ಪ್ರಮಾಣದಲ್ಲಿ ಸೇರಿಸಿಕೊಳ್ಳಲು ನಿರ್ಧಾರ ಮಾಡಿ ಆದೇಶ ಹೊರಡಿಸಿದೆ.