ಬಿಗ್ ಬ್ರೇಕಿಂಗ್: ಭಾರತ-ರಷ್ಯಾ ಜುಗಲ್ಬಂದಿ, ಚೀನಾ ಮಹಾ ಯೋಜನೆಗೆ ಅಡ್ಡಗಾಲು ಹಾಕಲು ನಿರ್ಧಾರ ! ಒಂದಾಗಿ ಮಾಡುತ್ತಿರುವುದು ಏನು ಗೊತ್ತಾ?

ಬಿಗ್ ಬ್ರೇಕಿಂಗ್: ಭಾರತ-ರಷ್ಯಾ ಜುಗಲ್ಬಂದಿ, ಚೀನಾ ಮಹಾ ಯೋಜನೆಗೆ ಅಡ್ಡಗಾಲು ಹಾಕಲು ನಿರ್ಧಾರ ! ಒಂದಾಗಿ ಮಾಡುತ್ತಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾ ದೇಶದ ಜೊತೆ ಹಲವಾರು ಕಾರಣಗಳಿಂದ ವ್ಯಾಪಾರ ಹಾಗೂ ವ್ಯವಹಾರಿಕ ಸಂಬಂಧಗಳನ್ನು ಕಳೆದು ಕೊಳ್ಳುವ ಹಾದಿಯಲ್ಲಿ ಹೆಜ್ಜೆಗಳನ್ನು ಇಡುತ್ತಿವೆ.

ಇದರ ಸಂಪೂರ್ಣ ಲಾಭವನ್ನು ಭಾರತ ಹಾಗೂ ಇತರ ದೇಶಗಳು ಪಡೆದುಕೊಳ್ಳುವ ಸಾಲಿನಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿವೆ. ಇತರ ಚಿಕ್ಕ ದೇಶಗಳಂತೆ ಭಾರತ ಕೇವಲ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಚೀನಾ ತನ್ನ ಸಾಮ್ರಾಜ್ಯ ಸ್ಥಾಪಿಸಿರುವ ಹಲವಾರು ವಲಯಗಳಿಗೆ ಎಂಟ್ರಿ ಕೊಡಲು ಸಿದ್ಧವಾಗುತ್ತಿದೆ. ಅದರಲ್ಲಿಯೂ ಇದೀಗ ಭಾರತ ದೇಶ ಇಟ್ಟಿರುವ ಹೆಜ್ಜೆ ಬಹಳ ಮಹತ್ವವೆನಿಸಿದ್ದು, ಈ ಮಹಾನ್ ಯೋಜನೆಯಲ್ಲಿ ಭಾರತ ದೇಶಕ್ಕೆ ರಷ್ಯಾ ದೇಶ ಬೆಂಬಲವನ್ನು ಸೂಚಿಸಿದೆ.

ಅಷ್ಟಕ್ಕೂ ಈ ಯೋಜನೆಯ ಮೂಲವೇನು? ನಾವು ಯಾವುದರ ಕುರಿತು ಮಾತನಾಡುತ್ತಿದ್ದೇವೆ?

ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶವು ಹಲವಾರು ವರ್ಷಗಳ ಹಿಂದೆಯೇ ಟ್ರಾನ್ಸ್-ಕಾಂಟಿನೆಂಟಲ್ ಇನ್ಫ್ರಾಸ್ಟ್ರಕ್ಚರ್ ಪ್ರೋಗ್ರಾಮ್ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಎಂಬ ಯೋಜನೆಯ ಮೂಲಕ ವಿಶ್ವದ ಇತರ ದೇಶಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಹಾಗೂ ವ್ಯಾಪಾರವನ್ನು ಮಾಡಲು ಲಕ್ಷಾಂತರ ಕೋಟಿಗಳನ್ನು ಹೂಡಿಕೆ ಮಾಡಿ ರೈಲಿನ ಯೋಜನೆಗಳು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಾರ್ಯಗತಗೊಳಿಸಿ ಹಣ ಸಂಪಾದನೆ ಮಾಡಿ ಕೋಟ್ಯಂತರ ರೂಗಳು ಆದಾಯ ಗಳಿಸಿ ವಿಶ್ವದ ಇತರ ಆರ್ಥಿಕತೆ ಗಳ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸುತ್ತಾ ಬಂದಿದೆ.

ಅದರಲ್ಲಿಯೂ ಚೀನಾ ದೇಶವು ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಭಾರಿ ಪ್ರಭಾವ ಬೀರಿದೆ, ಅಷ್ಟೇ ಅಲ್ಲದೇ ಏಷ್ಯಾದ ಇತರ ದೇಶಗಳೂ ಹಾಗೂ ಮಾಲ್ಡಿವ್ಸ್ ಮತ್ತು ಇಂಡೋನೇಷಿಯಾ ದೇಶಗಳಲ್ಲಿ ಕೂಡ ಚೀನಾ ದೇಶವೂ ತನ್ನ ಯೋಜನೆಗಳನ್ನು ಜಾರಿಗೊಳಿಸಿ ಬಹಳ ವೇಗವಾಗಿ ಬೆಳೆಯುತ್ತಿದೆ. ಇದೀಗ ಇದಕ್ಕೆ ಅಡ್ಡಗಾಲು ಹಾಕಲು ನಿರ್ಧಾರ ಮಾಡಿರುವ ಭಾರತ ದೇಶವು ರಷ್ಯಾ ದೇಶದ ಜೊತೆ ಹೊಸ ಒಪ್ಪಂದ ಮಾಡಿಕೊಂಡಿದೆ.

ಇದೀಗ ಈ ದೇಶಗಳು ಚೀನಾ ದೇಶದ ಜೊತೆ ವ್ಯಾಪಾರ ಹಾಗೂ ಇನ್ನಿತರ ವ್ಯವಹಾರಿಕ ಸಂಬಂಧಗಳನ್ನು ಕಡಿತಗೊಳಿಸುವ ಆಲೋಚನೆ ಮಾಡುತ್ತಿರುವ ಕಾರಣ ಇದನ್ನೇ ಲಾಭವವನ್ನಾಗಿ ಮಾಡಿಕೊಳ್ಳಲು ಭಾರತ ದೇಶ ರಷ್ಯಾ ದೇಶದ ಜೊತೆ ಒಪ್ಪಂದ ಮಾಡಿಕೊಂಡಿದೆ.

ಭಾರತೀಯ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಮಿನಿರತ್ನ ಪಿಎಸ್ಯು ಭಾರತದ ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ಹಾಗೂ ರಷ್ಯಾ ದೇಶದ ಸರ್ಕಾರಿ ಸ್ವಾಮ್ಯದ ಕಂಪನಿಯ ಅಂಗ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ರೈಲ್ವೆ ಮತ್ತು ಇತರ ಮೂಲಸೌಕರ್ಯಗಳ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ಅವಕಾಶಗಳನ್ನು ಅನ್ವೇಷಿಸಿ, ಹೂಡಿಕೆ ಮಾಡಿ ಲಾಭ ಪಡೆಯುವ ಕೆಲಸದಲ್ಲಿ ತೊಡಗಿ ಕೊಳ್ಳಲಿವೆ. ಈಗಾಗಲೇ ಚೀನಾ ದೇಶದ ಜೊತೆ ಸಂಬಂಧ ಕಡಿತಗೊಳಿಸಲು ಉದ್ದೇಶಿಸಿರುವ ದೇಶಗಳು ಭಾರತದ ಜೊತೆ ಒಪ್ಪಂದ ಮಾಡಿಕೊಳ್ಳಲಿವೆ. ಈ ಮೂಲಕ ಇದೀಗ ಕೇವಲ ದೇಶದಲ್ಲಿ ಮಾತ್ರವಲ್ಲದೆ ಆಫ್ರಿಕಾ ಲ್ಯಾಟಿನ್ ಅಮೆರಿಕ ಹಾಗೂ ಇನ್ನಿತರ ದೇಶಗಳಲ್ಲಿ ಭಾರತ ತನ್ನ ರೆಕ್ಕೆ ಚಾಚಲು ಆರಂಭಿಸಿದೆ.