ತನ್ನ ವೇಗದ 50 ರನ್ ದಾಖಲೆ ಅಳಿಸಲು ಈ 4 ಆಟಗಾರರಿಗೆ ಮಾತ್ರ ಸಾಧ್ಯ ಎಂದ ಯುವಿ ! ಇಬ್ಬರು ಭಾರತೀಯರು ಸೇರಿದಂತೆ ಆಯ್ಕೆಯಾದವರು ಯಾರ್ಯಾರು ಗೊತ್ತಾ?

ತನ್ನ ವೇಗದ 50 ರನ್ ದಾಖಲೆ ಅಳಿಸಲು ಈ 4 ಆಟಗಾರರಿಗೆ ಮಾತ್ರ ಸಾಧ್ಯ ಎಂದ ಯುವಿ ! ಇಬ್ಬರು ಭಾರತೀಯರು ಸೇರಿದಂತೆ ಆಯ್ಕೆಯಾದವರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ವೇಗದಲ್ಲಿ 50 ರನ್ ಗಳಿಸಿದ ದಾಖಲೆ ಭಾರತೀಯ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ರವರ ಹೆಸರಿನಲ್ಲಿ ಕಳೆದ 13 ವರ್ಷಗಳಿಂದ ಇದೆ.

ಇಂಗ್ಲೆಂಡ್ ವಿರುದ್ಧ ನಡೆದ ಮೊಟ್ಟ ಮೊದಲ ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಗಳಿಸುವ ಮೂಲಕ ಮಿಂಚಿದ್ದ ಯುವರಾಜ್ ಸಿಂಗ್ ಅವರು ಅಂದಿನ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 50 ರನ್ ಗಳಿಸಿದ್ದರು, ಇದೀಗ ಇದರ ಕುರಿತು ಪ್ರಶ್ನೆ ಮಾಡಿದಾಗ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಾವ ಬ್ಯಾಟ್ಸ್ಮನ್ ನಿಮ್ಮ ದಾಖಲೆಯನ್ನು ಸರಿಗಟ್ಟುವ ಅಥವಾ ಅಳಿಸಿಹಾಕಬಹುದು, ನೀವೇ ಆಟಗಾರರ ಹೆಸರು ತಿಳಿಸಿ ಎಂದಾಗ ಈ ಕೆಳಕಂಡ ನಾಲ್ಕು ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ಮೊದಲಿಗೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ರವರು ಖಂಡಿತ ನನ್ನ ದಾಖಲೆ ಅಳಿಸುವ ಎಲ್ಲಾ ಸಾಧ್ಯತೆಗಳಿವೆ, ಇವರ ಜೊತೆಗೆ ಈಗಾಗಲೇ ಐಪಿಎಲ್ ನಲ್ಲಿ 14 ಎಸೆತಗಳಲ್ಲಿ ಅರ್ಧ ಶತಕ ಗಳಿಸಿರುವ ರಾಹುಲ್ ಖಂಡಿತ ಈ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಐಪಿಎಲ್ ಗೂ ಅಂತರರಾಷ್ಟ್ರೀಯ ಪಂದ್ಯಗಳಿಗೆ ತುಂಬಾ ವ್ಯತ್ಯಾಸವಿದೆ, ಕೊಂಚ ಶ್ರಮಪಟ್ಟಲ್ಲಿ ಖಂಡಿತಾ ಕೆಎಲ್ ರಾಹುಲ್ ರವರು ಅತಿ ವೇಗದ ಅರ್ಧಶತಕ ದಾಖಲೆ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಾರೆ. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಅತಿ ವೇಗದ ಅರ್ಧಶತಕ ಗಳಿಸಿದರೆ ಯಾವುದೇ ಅಚ್ಚರಿ ಪಡಬೇಕಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.