ಹಲಾಲ್ ಆಹಾರ ಪ್ರಮಾಣೀಕರಣದ ಕುರಿತು ಹೊಸ ವಾದ ಮಂಡಿಸಲು ಮುಂದಾದ ಸ್ವಾಮಿ ! ಏನು ಗೊತ್ತಾ?

ಹಲಾಲ್ ಆಹಾರ ಪ್ರಮಾಣೀಕರಣದ ಕುರಿತು ಹೊಸ ವಾದ ಮಂಡಿಸಲು ಮುಂದಾದ ಸ್ವಾಮಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೋರೋನ ಬಿಕ್ಕಟ್ಟಿನ ನಡುವೆ ಇದೀಗ ದೇಶದ ಎಲ್ಲೆಡೆ ಹಲಾಲ್ ಪ್ರಮಾಣೀಕರಣ ಹಾಗೂ ಧಾರ್ಮಿಕ ಆಹಾರ ಪ್ರಮಾಣೀಕರಣದ ನಡುವೆ ವಾದ ಆರಂಭವಾಗಿದೆ. ಇದಕ್ಕೆಲ್ಲ ಕಾರಣ ಕಳೆದ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಆ ಒಂದು ಘಟನೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಬೇಕರಿ ತಯಾರಕರೊಬ್ಬರು ನಾವು ಜೈನರು ತಯಾರಿಸಿದ ಧಾರ್ಮಿಕ ಆಹಾರವನ್ನು ಮಾತ್ರ ಮಾರಾಟ ಮಾಡುತ್ತೇವೆ, ಯಾವುದೇ ಮುಸ್ಲಿಂ ಸಿಬ್ಬಂದಿ ನಮ್ಮಲ್ಲಿ ಕೆಲಸ ಮಾಡುವುದಿಲ್ಲ ಎಂದು ಬೋರ್ಡ್ ಹಾಕಿ ವ್ಯಾಪಾರ ಆರಂಭಿಸಿದ್ದರು. ಇದರಿಂದ ದೇಶದ ಐಕ್ಯತೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಬೇಕರಿ ಮುಚ್ಚಿಸಿ ತಯಾರಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಇಡೀ ದೇಶದಲ್ಲಿ ಆಹಾರದ ಪಟ್ಟಣಗಳ ಮೇಲೆ ಹಲಾಲ್ ಪ್ರಮಾಣಿಕರಣ ಇದೆ, ಅದನ್ನು ತೆಗೆಯಬೇಕು ಎಂಬ ವಾದ ಮಂಡನೆಯಾಗಿತ್ತು. ಇದರಿಂದ ಐಕ್ಯತೆಗೆ ತೊಂದರೆ ಇಲ್ಲವೇ ಎಂದು ಹಲವಾರು ಜನ ವಾದ ಮುಂದಿಟ್ಟಿದ್ದರು.

ಈ ವಾದಗಳ ನಡುವೆ ಈ ಪ್ರಕರಣಕ್ಕೆ ಇದೀಗ ಸುಬ್ರಹ್ಮಣ್ಯ ಸ್ವಾಮಿ ರವರು ಎಂಟ್ರಿ ಕೊಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ, ಹೌದು ಸ್ನೇಹಿತರೇ, ಚೆನ್ನೈ ನಗರದ ಬೇಕರಿ ಮಾಲೀಕರ ಮೇಲೆ ಕೇಸ್ ಹಾಕಿಸಿ ಅಂಗಡಿಗೆ ಮೊಹರು ಒತ್ತಿರುವ ಕಾರಣ ಸುಬ್ರಹ್ಮಣ್ಯಂ ಸ್ವಾಮಿರವರು ಈ ವಾದಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಹೌದು, ಇದೀಗ ಸುಬ್ರಮಣ್ಯನ್ ಸ್ವಾಮಿ ರವರು, ಹಲಾಲ್ ಪ್ರಮಾಣೀಕರದಿಂದ ಐಕ್ಯತೆಗೆ ತೊಂದರೆ ಇಲ್ಲಾ ಎಂದರೇ, ಧಾರ್ಮಿಕ್ ಪ್ರಮಾಣೀಕರಣ ನೀಡಿ ಎಂದು ವಾದ ಮಂಡಿಸಲು ಮುಂದಾಗಿದ್ದಾರೆ.

ಈಗಾಗಲೇ ಇದರ ಕುರಿತು ತಮ್ಮ ಬೆಂಬಲಿಗ ಹಾಗೂ ಸುಪ್ರೀಂ ಕೋರ್ಟ್ ವಕೀಲ ಇಷ್ಕಾರನ್ ಸಿಂಗ್ ಭಂಡಾರಿ ರವರು, ಆಹಾರ ಸಚಿವಾಲಯಕ್ಕೆ ಪತ್ರ ಬರೆದಿದ್ದು ಹಲಾಲ್ ಪ್ರಮಾಣೀಕರಣವನ್ನು ಅನುಮತಿಸ ಲಾಗಿರುವುದರಿಂದ, ಸನಾತನ ಧರ್ಮದ ಮಾನದಂಡಗಳಿಂದ ಮಾಡಿದ ಆಹಾರಕ್ಕಾಗಿ ಧಾರ್ಮಿಕ್ ಪ್ರಮಾಣೀಕರ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ವಕೀಲ ಇಷ್ಕಾರನ್ ಸಿಂಗ್ ಭಂಡಾರಿರವರು 15 ನಿಮಿಷಗಳ ವಿಡಿಯೋ ಮಾಡಿದ್ದಾರೆ, ಇದರಲ್ಲಿ ಸರ್ಕಾರವು ಹಲಾಲ್ ಪ್ರಮಾಣೀಕರಣಕ್ಕೆ ಅನುಮತಿ ನೀಡಿರುವುದರಿಂದ, ಧಾರ್ಮಿಕ್ ಪ್ರಮಾಣೀಕೃತ ಆಹಾರವನ್ನು ಸಹ ಅನುಮತಿಸಬೇಕಾಗಿದೆ ಎಂದು ವಾದ ಮಂಡಿಸಿದ್ದಾರೆ. ಇವರ ಈ ನಡೆಯ ಮೂಲಕ ಇದೀಗ ಪ್ರಮಾಣೀಕರಣ ಬಾರಿ ಸದ್ದು ಮಾಡಲು ಆರಂಭಿಸಿದೆ.