ಭಾರತದ ಚಕ್ರವ್ಯೂಹದಲ್ಲಿ ಸಿಲುಕುತ್ತಿದ್ದಂತೆ ಹೊಸ ನಾಟಕ ಆರಂಭ ಮಾಡಿದ ಚೀನಾ ! ಅಧ್ಯಕ್ಷ ಹೇಳಿದ್ದೇನು ಗೊತ್ತಾ?

ಭಾರತದ ಚಕ್ರವ್ಯೂಹದಲ್ಲಿ ಸಿಲುಕುತ್ತಿದ್ದಂತೆ ಹೊಸ ನಾಟಕ ಆರಂಭ ಮಾಡಿದ ಚೀನಾ ! ಅಧ್ಯಕ್ಷ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರಿಂದ ಆರಂಭವಾದ ವಾದಕ್ಕೆ ಬರೋಬ್ಬರಿ 62 ಹೆಚ್ಚು ದೇಶಗಳು ಬೆಂಬಲ ಸೂಚಿಸಿ ಕೋರೋನ ವೈರಸ್ಸು ವಿಶ್ವದಾದ್ಯಂತ ಇಷ್ಟರ ಮಟ್ಟಿಗೆ ತಾಂಡವ ವಾಡಲು ಚೀನಾ ದೇಶ ಕಾರಣ ಎಂದು ಹೇಳುತ್ತಿವೆ.

ಇದರ ಕುರಿತು ತನಿಖೆ ನಡೆಸ ಬೇಕೆಂದು ವಿಶ್ವದ ಹಲವಾರು ರಾಷ್ಟ್ರಗಳು ಒಕ್ಕೊರಲ ದನಿಯಿಂದ ವಿಶ್ವ ಆರೋಗ್ಯ ಸಂಸ್ಥೆಗೆ ತಾಕೀತು ಮಾಡುತ್ತಿದ್ದಾರೆ. ಮೊದ ಮೊದಲಿಗೆ ತನಿಖೆ ನಡೆಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದ ಚೀನಾ ದೇಶ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಇದೀಗ ಭಾರತದ ಚಕ್ರವ್ಯೂಹದಲ್ಲಿ ಸಿಲುಕಿ ಹಾಕಿಕೊಂಡಿವೆ. ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷವೇ ನಿರ್ಧಾರವಾದಂತೆ ಈ ವರ್ಷ ಭಾರತ ದೇಶವು ವಿಶ್ವ ಆರೋಗ್ಯ ಸಂಸ್ಥೆ ಯಲ್ಲಿ ಕಾರ್ಯಕಾರಣಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. (ಗಮನದಲ್ಲಿಡಿ ಸ್ನೇಹಿತರೇ ಕೆಲವರು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಸ್ಥಾನ ಎಂದು ಹೇಳುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೂ ಹಾಗೂ ಕಾರ್ಯಕಾರಣಿ ದೇಶಗಳ ಅಧ್ಯಕ್ಷ ಸ್ಥಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ).

ಇದರಿಂದ ಚೀನಾ ದೇಶದ ಮೇಲೆ ತನಿಖೆ ನಡೆಸುವುದು ಬೇಡವೋ ಎಂದು ಭಾರತ ನಿರ್ಧಾರ ಮಾಡುತ್ತದೆ. ಇದನ್ನು ಅರಿತುಕೊಂಡಿರುವ ಚೀನಾ ದೇಶವು ಇದೀಗ ಹೊಸ ನಾಟಕ ಆರಂಭ ಮಾಡಿದೆ ಎಂದರೆ ತಪ್ಪಾಗಲಾರದು, ಹೌದು ಸ್ನೇಹಿತರೇ, ಇದೀಗ ಇದರ ಕುರಿತು ಮಾತನಾಡಿರುವ ಚೀನಾ ದೇಶದ ಅಧ್ಯಕ್ಷ ಯಾವುದೇ ತನಿಖೆಗೆ ಬೇಕಾದರೂ ಚೀನಾ ಸಕಲ ನೆರವನ್ನು ನೀಡಲಿದೆ. ಅಷ್ಟೇ ಅಲ್ಲದೆ ವಿಶ್ವದ ಆರ್ಥಿಕತೆ ಕುಸಿದಿರುವ ಕಾರಣ ಇತರ ದೇಶಗಳಿಗೆ ಸಹಾಯ ಮಾಡಲು ಎರಡು ಬಿಲಿಯನ್ ಡಾಲರ್ ಮೀಸಲಿಡುತ್ತಿದ್ದೇವೆ, ವಿಶ್ವದ ಹಿತಾದೃಷ್ಟಿಯಿಂದ ಲಸಿಕೆ ಕಂಡು ಹಿಡಿಯುವ ಹಾದಿಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಈ ಮೀಸಲು ಹಣ ಬಡ ರಾಷ್ಟ್ರಗಳನ್ನು ತಲುಪಲಿದೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.