ಆಫ್ರಿಕಾದಲ್ಲೂ ಚೀನಾಗೆ ಅಡ್ಡಗಾಲು, ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಘರ್ಜಿಸಲು ಸಿದ್ಧವಾದ ಭಾರತ ಮಾಡಲು ಹೊರಟಿರುವುದು ಏನು ಗೊತ್ತಾ?

ಆಫ್ರಿಕಾದಲ್ಲೂ ಚೀನಾಗೆ ಅಡ್ಡಗಾಲು, ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಘರ್ಜಿಸಲು ಸಿದ್ಧವಾದ ಭಾರತ ಮಾಡಲು ಹೊರಟಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆ ಈಗಾಗಲೇ ತಿಳಿದಿರುವಂತೆ ಚೀನಾ ದೇಶವು ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಪ್ರಭಾವವನ್ನು ಹೆಚ್ಚಿಸಿ ಕೊಳ್ಳುತ್ತಿದೆ. ಹಲವಾರು ದೇಶಗಳಲ್ಲಿ ಹೂಡಿಕೆ ಮಾಡಿ ಹಾಗೂ ಮತ್ತಷ್ಟು ಹೂಡಿಕೆಯ ಆಸೆ ತೋರಿಸಿ ಹಲವಾರು ವರ್ಷಗಳಿಂದ ಪ್ರಭಾವ ಸ್ಥಾಪಿಸಿದೆ.

ಈ ಪ್ರಭಾವ ಎಷ್ಟಿದೇ ಎಂದರೆ ಕಳೆದ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಯಲ್ಲಿ ತನ್ನ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕೇವಲ ಒಂದೇ ಒಂದು ಕರೆಯ ಮೂಲಕ ಇಡೀ ಆಫ್ರಿಕಾದ ದೇಶಗಳ ಅಭ್ಯರ್ಥಿಗಳನ್ನು ನಾಮಪತ್ರ ವಾಪಸ್ ಪಡೆದು ಕೊಳ್ಳುವಂತೆ ಮಾಡಿತ್ತು . ಇಷ್ಟೆಲ್ಲಾ ಪ್ರಭಾವ ಬೀರಿದ ಬಳಿಕ ಇದೀಗ ಕೊರೊನ ಪರಿಸ್ಥಿತಿಯನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿರುವ ಚೀನಾ ದೇಶವು ಕಳಪೆ ಗುಣಮಟ್ಟದ ವೈದ್ಯಕೀಯ ಉಪಕರಣಗಳು ಸೇರಿದಂತೆ ಮಾತ್ರೆ ಗಳನ್ನು ಸರಬರಾಜು ಮಾಡವುತ್ತಿದೆ, ಬೇರೆ ವಿಧಿಯಿಲ್ಲದೆ ಆಫ್ರಿಕಾದ ಬಡ ರಾಷ್ಟ್ರಗಳು ಚೀನಾ ದೇಶದಿಂದ ಆಮದು ಮಾಡಿ ಕೊಳ್ಳುತ್ತಿವೆ.

ಆದರೆ ಇದೀಗ ಭಾರತ ವಿಶ್ವದ ಹಲವಾರು ರಾಷ್ಟ್ರಗಳಿಗೆ ಮಾತ್ರೆಗಳನ್ನು ಸರಬರಾಜು ಮಾಡಿದ ಬಳಿಕ ಇದೀಗ ಆಫ್ರಿಕಾಕ್ಕೂ ಕಾಲಿಟ್ಟಿದ್ದು, ಚೀನಾ ದೇಶಕ್ಕೆ ಆಫ್ರಿಕಾದಲ್ಲಿ ಎಲ್ಲಾ ರೀತಿಯಲ್ಲೂ ಅಡ್ಡಗಾಲು ಹಾಕಲು ನಿರ್ಧಾರ ಮಾಡಿದಂತೆ ಕಾಣುತ್ತದೆ. ಸುಮಾರು 50 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಇತರ ಏಷ್ಯಾ ಹಾಗೂ ಯುರೋಪ್ ರಾಷ್ಟ್ರಗಳಿಗೆ ತಲುಪಿಸಿದಂತೆ ಅಗತ್ಯವಾದ ಮಾತ್ರೆಗಳನ್ನು ತಲುಪಿಸಲು ನಿರ್ಧಾರ ಮಾಡಿದ್ದು, ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಮಾಸ್ಕ್ ಗಳು ಸೇರಿದಂತೆ ಪಿಪಿಇ ಕಿಟ್ಗಳನ್ನು ಕೂಡ ಆಫ್ರಿಕಾದ ದೇಶಗಳು ಮತ್ತು ಮಾಡಲು ನಿರ್ಧಾರ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.