ಆಂಡ್ರೆ ರಸೆಲ್ ಮೆಚ್ಚಿಕೊಂಡ ಭಾರತೀಯ ಬೌಲರ್ ಯಾರು ಗೊತ್ತಾ? ಈತನೇ ಭವಿಷ್ಯದ ಬೌಲರ್ ಎಂದದ್ದು ಯಾರಿಗೆ?

ನಮಸ್ಕಾರ ಸ್ನೇಹಿತರೇ, ಕೊಲ್ಕತ್ತಾ ನೈಟ್ ರೈಡರ್ಸ್ ಕ್ರಿಕೆಟ್ ತಂಡದ ಪ್ರಮುಖ ಆಲ್-ರೌಂಡರ್ ಆಗಿರುವ ಆಂಡ್ರೆ ರಸೆಲ್ ರವರು ಯಾವ ರೀತಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಹೇಳುವ ಅವಶ್ಯಕತೆಯೇ ನಿಮಗೆ ಇಲ್ಲ ಎನಿಸುತ್ತದೆ.

ಯಾವುದೇ ಸಮಯದಲ್ಲಿ ಬೇಕಾದರೂ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರರಾಗಿರುವ ಆಂಡ್ರೆ ರಸೆಲ್ ರವರು ವೇಗದ ಬ್ಯಾಟಿಂಗ್ ಮಾಡುವಲ್ಲಿ ಪ್ರಸಿದ್ಧರು. ಬಲಾಡ್ಯ ಬೌಲರ್ಗಳು ಕೂಡ ಪಂದ್ಯದ ಕೊನೆಯಲ್ಲಿ
ಆಂಡ್ರೆ ರಸೆಲ್ ರವರಿಗೆ ಬೌಲಿಂಗ್ ಮಾಡುವ ವಿಚಲಿತರಾಗುತ್ತಾರೆ, ಯಾಕೆಂದರೆ ಕೊಂಚ ಯಾಮಾರಿದರೂ ಸಿಕ್ಸರ್ ಖಚಿತ. ಕೊನೆಯಲ್ಲಿ ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕವೇ ಪಂದ್ಯ ಗೆಲ್ಲಿಸಿಕೊಡುವ ಆಂಡ್ರೆ ರಸೆಲ್ ರವರು ಭಾರತೀಯ ಬೌಲರ್ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. (ಸಾಂಧರ್ಭಿಕ ಚಿತ್ರ)

ಹೌದು, ಐಪಿಎಲ್ ನಲ್ಲಿ ಒಮ್ಮೆ ಆರ್ಸಿಬಿ ತಂಡ ಹಾಗೂ ಕೆಕೆಆರ್ ತಂಡಗಳು ಪಂದ್ಯವಾಡುತ್ತಿರುವ ಸಂದರ್ಭದಲ್ಲಿ ಯುವ ಬೌಲರ್ ನವದೀಪ್ ಸೈನಿ ರವರು ಆಂಡ್ರೆ ರಸೆಲ್ ರವರಿಗೆ ಬೌಲಿಂಗ್ ಮಾಡಿದ್ದರು. ಬಹಳ ವೇಗವಾಗಿ ಬೌಲಿಂಗ್ ಮಾಡುವ ಮೂಲಕ ರಸೆಲ್ ಅವರನ್ನು ಅಚ್ಚರಿಗೊಳಿಸಿದ್ದರು. ಈತ ನೋಡಲು ಸಣ್ಣ ಇದ್ದಾನೆ, ಆದರೆ ಬಹಳ ವೇಗವಾಗಿ ಬೌಲಿಂಗ್ ಮಾಡುತ್ತಾನೆ, ಖಂಡಿತಾ ಈತ ಮುಂದೊಂದು ದಿನ ಸ್ಟಾರ್ ಆಗುತ್ತಾನೆ ಎಂದು ಭಾರತೀಯ ಯುವ ಆಟಗಾರ ನವದೀಪ್ ಸೈನಿ ರವರ ಕುರಿತು ಕ್ಯಾಪ್ಟನ್ ವಿರಾಟ್ ಕೊಹ್ಲಿ ರವರ ಬಳಿ ರಸೆಲ್ ಹೇಳಿದ್ದರಂತೆ.

Post Author: Ravi Yadav