ಸಂತಸದಲ್ಲಿರುವವರಿಗೆ ಮತ್ತಷ್ಟು ಸಂತಸ, ಆದರೆ ದುಃಖಿಸುತ್ತಿರುವವರಿಗೆ ಮತ್ತಷ್ಟು ದುಃಖ ಯಾಕೆ ನೀಡುತ್ತಿರಿ ಎಂದು ಪಾರ್ವತಿ ಕೇಳಿದ ಪ್ರಶ್ನೆ ಗೆ ಶಿವ ಉತ್ತರಿಸಿದ್ದು ಹೇಗೆ ಗೊತ್ತಾ?

ಸಂತಸದಲ್ಲಿರುವವರಿಗೆ ಮತ್ತಷ್ಟು ಸಂತಸ, ಆದರೆ ದುಃಖಿಸುತ್ತಿರುವವರಿಗೆ ಮತ್ತಷ್ಟು ದುಃಖ ಯಾಕೆ ನೀಡುತ್ತಿರಿ ಎಂದು ಪಾರ್ವತಿ ಕೇಳಿದ ಪ್ರಶ್ನೆ ಗೆ ಶಿವ ಉತ್ತರಿಸಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಂದು ನಾವು ತಾಯಿ ಪಾರ್ವತಿ ಹಾಗೂ ಮಹಾ ಶಿವನ ನಡುವೆ ನಡೆದ ಒಂದು ಸಂವಾದದ ಬಗ್ಗೆ ತಿಳಿದು ಕೊಳ್ಳೋಣ. ಬಹುಶಃ ನಿಮಗೆಲ್ಲರಿಗೂ ಒಂದಲ್ಲ ಒಂದು ದಿನ ಯಾಕೆ ದೇವರು ಕಷ್ಟದಲ್ಲಿರುವವರಿಗೆ ಮತ್ತಷ್ಟು ಕಷ್ಟ ನೀಡುತ್ತಾನೆ, ಆದರೆ ಸಂತಸದಲ್ಲಿ ಇರುವವರಿಗೆ ಮತ್ತಷ್ಟು ಸಂತಸ ನೀಡುತ್ತಾನೆ ಎಂಬ ಪ್ರಶ್ನೆ ನಿಮ್ಮ ಮನಸಿನಲ್ಲಿ ಮೂಡಿರುತ್ತದೆ.

ಇದೇ ರೀತಿಯ ಪ್ರಶ್ನೆಯನ್ನು ಒಮ್ಮೆ ಪಾರ್ವತಿ ದೇವಿಯು ಮಹಾ ಶಿವನನ್ನು ಕೇಳುತ್ತಾರೆ. ನಾನು ಹಲವಾರು ವರ್ಷಗಳಿಂದ ನೋಡುತ್ತಿದ್ದೇನೆ, ಭೂಮಿಯಲ್ಲಿ ಮನುಜರಿಗೆ ನೀವು ದುಃಖಿಸುತ್ತಿರುವ ವ್ಯಕ್ತಿಗೆ ಹೆಚ್ಚು ದುಃಖವನ್ನು ನೀಡುತ್ತೀರಿ ಮತ್ತು ಸಂತೋಷದಲ್ಲಿರುವ ಯಾರಿಗಾದರೂ ನೀವು ದುಃಖವನ್ನು ನೀಡುವುದಿಲ್ಲ, ಬದಲಾಗಿ ಮತ್ತಷ್ಟು ಸಂತೋಷ ನೀಡುತ್ತಿರಿ, ಯಾಕೆ ಈ ರೀತಿ ಎಂದು ಪ್ರಶ್ನೆ ಮಾಡುತ್ತಾರೆ.

ಪಾರ್ವತಿ ದೇವಿಯವರ ಈ ಪ್ರಶ್ನೆಗೆ ಉತ್ತರ ನೀಡಿ ವಿವರಣೆ ನೀಡಲು ಮಹಾ ಶಿವನು, ಪಾರ್ವತಿ ದೇವಿಯವರ ಜೊತೆ ಭೂಲೋಕಕ್ಕೆ ತನ್ನ ಜೊತೆ ಬರುವಂತೆ ಕೇಳಿ ಭೂಮಿಯ ಮೇಲೆ ಒಂದು ಗ್ರಾಮಕ್ಕೆ ಕರೆದುಕೊಂಡು ಬರುತ್ತಾನೆ. ಇಬ್ಬರು ಮನುಜ ರೂಪಕ್ಕೆ ಬದಲಾಗಿ ಒಂದು ಹಳ್ಳಿಯನ್ನು ತಲುಪಿ ಅಲ್ಲೇ ತಂಗಲು ನಿರ್ಧಾರ ಮಾಡುತ್ತಾರೆ.

ಸುತ್ತ ಮುತ್ತಲಿನ ಜನರು ಗಮನಿಸುತ್ತಿರುವ ಕಾರಣ ನಾವು ಯಾವುದೇ ದೈವ ಶಕ್ತಿಗಳನ್ನು ಬಳಸುವುದು ಬೇಡ, ಸಾಮಾನ್ಯರಂತೆ ಇಲ್ಲಿ ಕಾಲ ಕಳೆಯೋಣ, ನಾವು ಇಲ್ಲಿ ಊಟ ಮಾಡಲೇ ಬೇಕು, ನಾನು ಹೋಗಿ ಆಹಾರ ಪದಾರ್ಥಗಳನ್ನು ತರುತ್ತೇನೆ, ನೀವು ಅಲ್ಲಿಯವರೆಗೆ ಒಲೆ ಸಿದ್ದಪಡಿಸಿ ಎಂದು ಮಹಾ ಶಿವನು ಪಾರ್ವತಿ ದೇವಿಯವರರಿಗೆ ಹೇಳಿ ಕಾಡಿನ ಕಡೆಗೆ ಹೋಗುತ್ತಾನೆ.

ಪಾರ್ವತಿ ದೇವಿಯು ಅಡುಗೆ ಮಾಡಲು ಒಲೆ ತಯಾರಿಸಲು ಇಟ್ಟಿಗೆಗಳನ್ನು ಹುಡಿಕಿಕೊಂಡು ಹೋಗಿ ಹಳ್ಳಿಯ ಕೆಲವು ಶಿಥಿಲವಾದ ಮನೆಗಳಿಂದ ಇಟ್ಟಿಗೆಗಳನ್ನು ತಂದು ಒಲೆ ತಯಾರಿಸಿದರು, ಒಲೆ ಸಿದ್ಧವಾದ ಕೂಡಲೇ ಶಿವನು ಯಾವುದೇ ಆಹಾರ ಪದಾರ್ಥಗಳನ್ನು ತರದೇ ಪ್ರತ್ಯಕ್ಷನಾದನು. ಪಾರ್ವತಿ ದೇವಿಯು ನೀವು ಹೇಳಿದ ಹಾಗೇ ಸಾಮಾನ್ಯ ಜೀವನ ನಡೆಸಲು ಒಲೆ ತಯಾರು ಮಾಡಿದ್ದೆ, ಆದರೆ ನೀವು ಆಹಾರ ಪದಾರ್ಥಗಳನ್ನು ಯಾಕೆ ತಂದಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ.

ಇದಕ್ಕೆ ಮುಗುಳ್ನಕ್ಕ ಮಹಾ ಶಿವನು ಆಹಾರ ಪದಾರ್ಥಗಳ ವಿಷಯ ಬಿಡಿ, ನೀವು ಈ ಇಟ್ಟಿಗೆಗಳನ್ನು ಎಲ್ಲಿಂದ ತಂದೀರಿ ಎಂದು ಪಾರ್ವತಿ ದೇವಿ ರವರಿಗೆ ಮರು ಪ್ರಶ್ನೆ ಮಾಡುತ್ತಾನೆ. ಆಗ ಪಾರ್ವತಿ ದೇವಿ, ಪ್ರಭು ಈ ಗ್ರಾಮದಲ್ಲಿ ಅನೇಕ ಮನೆಗಳು ಶಿಥಿಲ ಗೊಂಡಿವೆ, ಅದರಲ್ಲಿ ಜನರು ವಾಸಿಸುವುದು ಕಷ್ಟವಾಗಿದೆ. ಆ ಮನೆಗಳಲ್ಲಿನ ಕಳಪೆ ಗೋಡೆಗಳಿಂದ ಇಟ್ಟಿಗೆಗಳನ್ನು ತಂದಿದ್ದೇನೆ ಎಂದು ಉತ್ತರಿಸುತ್ತಾರೆ.

ಆಗ ಮಹಾ ಶಿವನು, ಯಾವ ಮನೆಗಳು ಈಗಾಗಲೇ ಶಿಥಿಲಗೊಂಡಿವೆಯಲ್ಲಾ, ನೀವು ಅದೇ ಮನೆಗಳನ್ನು ಮತ್ತಷ್ಟು ಕೆಟ್ಟದಾಗಿ ಮಾಡಿದ್ದೀರಾ? ಇನ್ನುಳಿದ ಸರಿಯಾಗಿರುವ ಬಲ ಮನೆಗಳ ಗೋಡೆಗಳಿಂದ ನೀವು ಇಟ್ಟಿಗೆಗಳನ್ನು ತರಬಹುದಿತ್ತು? ಅಲ್ಲವೇ ಎಂದು ಪಾರ್ವತಿ ರವರನ್ನು ಮರು ಪ್ರಶ್ನೆ ಮಾಡುತ್ತಾರೆ. ಆಶ್ಚರ್ಯಗೊಂಡ ಪಾರ್ವತಿ ರವರು, ಆ ಮನೆಗಳಲ್ಲಿ ವಾಸಿಸುವ ಜನರು ಅವುಗಳನ್ನು ಸರಿಯಾಗಿ ನಿರ್ವಹಿಸಿದ್ದಾರೆ ಮತ್ತು ಆ ಮನೆಗಳು ಸುಂದರವಾಗಿ ಕಾಣುತ್ತವೆ, ಆದ್ದರಿಂದ ಅವುಗಳ ಸೌಂದರ್ಯವನ್ನು ಹಾಳು ಮಾಡುವುದು ಸೂಕ್ತವಲ್ಲ.

ಇದಕ್ಕೆ ಮುಗುಳ್ನಕ್ಕ ಮಹಾ ಶಿವನು, ನಿಮ್ಮ ಪ್ರಶ್ನೆಗೆ ಇದೇ ಉತ್ತರ, ನಾನು ಪ್ರತಿಯೊಬ್ಬರಿಗೂ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿದ್ದೆ, ಆದರೆ ಕೆಲವರು ಕಾಪಾಡಿಕೊಂಡಿಲ್ಲ, ಕೆಲವರು ಬಹಳ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ, ಅಂದರೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಅವಕಾಶ ನೀಡಿದ್ದೇನೆ, ಸರಿಯಾದ ಕಾರ್ಯಗಳಿಂದ ತಮ್ಮ ಜೀವನ ರೂಪಿಸಿಕೊಳ್ಳಿ ಎಂದು, ಆದರೆ ಕೆಲವರು ಮಾತ್ರ ಸದುಪಯೋಗ ಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲಾ, ಎಲ್ಲರಿಗೂ ಸದಾ ಅವಕಾಶ ಇದ್ದೆ ಇರುತ್ತದೆ, ಆದರೆ ಯಾರೇ ಆಗಲಿ ತಮ್ಮ ಕಾರ್ಯಗಳ ಮೂಲಕ ಸಂತೋಷವನ್ನು ಹುಡಿಕಿದರೆ ಕಂಡಿತಾ ಸಂತೋಷ ಕಾಣುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ನೀಡುವಂತಹ ಕಾರ್ಯಗಳನ್ನು ಮಾಡಬೇಕು. ಆಗ ಅಂತಹ ಬಲವಾದ ಮತ್ತು ಸುಂದರವಾದ ಕಟ್ಟಡದಿಂದ ಯಾರೂ ಇಟ್ಟಿಗೆಯನ್ನು ಸಹ ತೆಗೆದು ಹಾಕಲು ಸಾಧ್ಯವಿಲ್ಲ, ಅವರವರ ಕಾರ್ಯವೇ ಅವರ ಜೀವನದ ಸಂತೋಷ, ದುಃಖ ಗಳನ್ನೂ ನಿರ್ಧಾರ ಮಾಡುತ್ತದೆ ಎಂದು ಉತ್ತರ ನೀಡುತ್ತಾನೆ.