ಚಪ್ಪಾಳೆ, ಹೂಗಳಿಗೆ ಬದಲಾಗಿ ಕೋರೋನ ವಾರಿಯರ್ಸ್ ಗೆ ವಿಶೇಷ ಗಿಫ್ಟ್ ನೀಡಲು ಮುಂದಾದ ಕೆನಡಾ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ವಿಶ್ವದೆಲ್ಲೆಡೆ ಕೋರೋನ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಪ್ರತಿಯೊಂದು ದೇಶಗಳಲ್ಲಿನ ಜನರು ಕೋರೋನ ವಾರಿಯರ್ಸ್ ಗೆ ಚಪ್ಪಾಳೆಗಳ ಹಾಗೂ ಹೂವುಗಳ ಸುರಿಮಳೆ ಸುರಿಸುತ್ತಿದ್ದಾರೆ.

ಪ್ರತಿಯೊಬ್ಬರಿಗೂ ವಿಶೇಷ ಗೌರವ ನೀಡುತ್ತಾ ಸನ್ಮಾನ ಮಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಕೆನಡಾ ದೇಶ ಮಾತ್ರ ಹೊಸ ಘೋಷಣೆ ಮಾಡಿದೆ. ಇದನ್ನು ಕೆನಡಾ ದೇಶ ಖಚಿತಪಡಿಸಿದ್ದು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನಾವು ಕೋರೋನ ವಾರಿಯರ್ಸ್ ಗಳ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾರ್ಮಿಕರ ಕುರಿತು ವಿಶೇಷ ಕಾಳಜಿ ತೋರಿಸಲು ಸಿದ್ಧವಾಗಿದ್ದೇವೆ. ಇಷ್ಟು ದಿವಸ ವೈದ್ಯರು ಮಾತ್ರ ಉತ್ತಮ ವೇತನ ಪಡೆದು ಕೊಳ್ಳುತ್ತಿದ್ದರು, ಆದರೆ ಕಾರ್ಮಿಕರ ಸ್ಥಿತಿ ಬದಲಾಗಿರಲಿಲ್ಲ.

ಆದ ಕಾರಣದಿಂದ ಕೆನಡಾ ದೇಶದ ಕಾರ್ಮಿಕ ನೀತಿಯ ಪ್ರಕಾರ 1800 ಡಾಲರ್ ಗಳಿಗಿಂತ ಕಡಿಮೆ ವೇತನ ಹೊಂದಿರುವ ಕಾರ್ಮಿಕ ವರ್ಗದ ಕೋರೋನ ವಾರಿಯರ್ಸ್ ಗಳಿಗೆ ವಿಶೇಷ ರೀತಿಯಲ್ಲಿ ವೇತನ ಹೆಚ್ಚು ಮಾಡಲು ನಿರ್ಧಾರ ಮಾಡಲಾಗಿದ್ದು, ಇದಕ್ಕಾಗಿ ಮೂರು ಬಿಲಿಯನ್ ಡಾಲರ್ಗಳನ್ನು ಮೀಸಲು ಇಡುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಇಷ್ಟು ದಿವಸ ವೈದ್ಯರು ಉತ್ತಮ ಸಂಬಳ ಪಡೆಯುತ್ತಿದ್ದರು, ಇವರ ಜೊತೆಗೆ ಕಾರ್ಮಿಕ ವರ್ಗದವರು ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಅದೇ ಕಾರಣಕ್ಕಾಗಿ ಅವರಿಗೆ ಸನ್ಮಾನದ ಜೊತೆ ವೇತನ ಹೆಚ್ಚು ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈ ನಿರ್ಧಾರವನ್ನು ಕಂಡ ನೆಟ್ಟಿಗರು ತಮ್ಮ ದೇಶದಲ್ಲಿಯೂ ಈ ರೀತಿಯ ನಿರ್ಧಾರ ತೆಗೆದು ಕೊಳ್ಳಬೇಕು ಎಂದಿದ್ದಾರೆ. ಇದರ ಕುರಿತು ನಿಮ್ಮ ಅಭಿಪ್ರಾಯ?

Post Author: Ravi Yadav