ಮನೋಹರ ದೃಶ್ಯ: ಇದೇ ತಿಂಗಳಲ್ಲಿ ಗುರು ಮತ್ತು ಚಂದ್ರರನ್ನು ಒಟ್ಟಾಗಿ ಬರಿಗಣ್ಣಿನಿಂದ ನೋಡುವ ಸದವಕಾಶ !

ಮನೋಹರ ದೃಶ್ಯ: ಇದೇ ತಿಂಗಳಲ್ಲಿ ಗುರು ಮತ್ತು ಚಂದ್ರರನ್ನು ಒಟ್ಟಾಗಿ ಬರೀ ಕಣ್ಣಿನಿಂದ ನೋಡುವ ಸದವಕಾಶ !

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಲಾಕ್ ಡೌನ್ ನಿಂದ ನಿಮಗೆಲ್ಲರಿಗೂ ತಿಳಿದಿರುವಂತೆ ಅಷ್ಟು ದೂರದಿಂದ ಈ ಪರ್ವತಗಳು ಕಾಣುತ್ತಿವೆ, ಮೊದಲಿಗಿಂತ ಹೆಚ್ಚು ನಕ್ಷತ್ರಗಳು ಬರಿಗಣ್ಣಿಗೆ ಕಾಣಿಸ್ತುತ್ತಿವೆ ಎಂದೆಲ್ಲಾ ಸುದ್ದಿಗಳನ್ನು ನಾವು ನೋಡುತ್ತಿರುತ್ತೇವೆ.

ಆದರೆ ಇದೀಗ ವಾಯುಮಾಲಿನ್ಯಕ್ಕೆ ಹಾಗೂ ಇತರ ಯಾವುದೇ ವಿಷಯಗಳಿಗೂ ಸಂಬಂಧವಿಲ್ಲದ ಒಂದು ಅತ್ಯಾಕರ್ಷಕ ಘಟನೆ ಶೀಘ್ರದಲ್ಲಿ ನಮ್ಮ ಕಣ್ಣಿಗೆ ಕಾಣಿಸಲಿದೆ. ಕಳೆದ ತಿಂಗಳು ನಡೆದ ಒಂದು ಅದ್ಭುತ ಘಟನೆಯಲ್ಲಿ ಗುರು, ಶನಿ, ಮಂಗಳ ಹಾಗೂ ಚಂದ್ರ ಮೂರು ದಿನಗಳ ಕಾಲ ಒಟ್ಟಿಗೆ ಆಕಾಶದಲ್ಲಿ ಕಾಣಿಸಿಕೊಂಡರು. ಇದೀಗ ಚಂದ್ರ ಹಾಗೂ ಗುರು ಗ್ರಹಗಳು ಒಟ್ಟಾಗಿ ಆಕಾಶದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಇಲ್ಲಿನ ವಿಶೇಷತೆ ಏನೆಂದರೆ ಇವುಗಳನ್ನು ಒಟ್ಟಿಗೆ ನೋಡಲು ನೀವು ಯಾವುದೇ ದೂರದರ್ಶಕ ಬಳಸಬೇಕಾಗಿಲ್ಲ.

ಹೌದು, ಮೇ 12ರ ಮುಂಜಾನೆ ಕತ್ತಲಿನಲ್ಲಿ ನೀವು ಚಂದ್ರ ಹಾಗೂ ಗುರು ಗ್ರಹವನ್ನು ಒಟ್ಟಾಗಿ ನೋಡಬಹುದಾಗಿದೆ, ಇವರಿಬ್ಬರೂ ಮಧ್ಯರಾತ್ರಿಯ ನಂತರ ಆರಂಭವಾಗಿ ದಕ್ಷಿಣ ಆಗ್ನೇಯ ಆಕಾಶದಲ್ಲಿ ಮುಂಜಾನೆಯವರೆಗೆ ಹತ್ತಿರದಲ್ಲಿ ಇರಲಿದ್ದಾರೆ. ನೀವು ನಿಮ್ಮ ಮನೆಯ ಟೆರೇಸ್ ಮೇಲೆ ನಿಂತುಕೊಂಡು ಯಾವುದೇ ದೂರದರ್ಶಕದ ಅಗತ್ಯವಿಲ್ಲದೆ ಏಕಕಾಲದಲ್ಲಿ ಇಬ್ಬರು ಮುಖಾಮುಖಿಯಾಗುವ ದೃಶ್ಯಗಳನ್ನು ಕಣ್ತುಂಬಿ ಕೊಳ್ಳಬಹುದು. ಸೌರವ್ಯೂಹದಲ್ಲಿ ಈ ಅಪರೂಪದ ಘಟನೆ ಇದೇ ತಿಂಗಳ 12ನೇ ತಾರೀಖಿನಂದು ನಡೆಯುತ್ತಿದ್ದು ಈ ಅದ್ಭುತ ಘಟನೆಯನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.