ರಾಮಾಯಣ, ಮಹಾಭಾರತ ವಿಷಯದಲ್ಲಿ ಡಿಡಿ ನ್ಯಾಷನಲ್ ಚಾನಲ್ ಹಾದಿ ಹಿಡಿದ ಖಾಸಗಿ ಚಾನೆಲ್ಗಳು !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತದಲ್ಲಿ ಎಲ್ಲಿ ನೋಡಿದರೂ ರಾಮಾಯಣ ಹಾಗೂ ಮಹಾ ಭಾರತದ ಮರು ಪ್ರಸಾರದಲ್ಲಿ ಸೃಷ್ಟಿಯಾದ ದಾಖಲೆಯ ಕುರಿತು ಚರ್ಚೆಗಳು ನಡೆಯುತ್ತಿವೆ.

ಹಲವಾರು ವರ್ಷಗಳ ನಂತರ ಮರು ಪ್ರಸಾರವಾದ ರಾಮಾಯಣ ಇಡೀ ವಿಶ್ವದಲ್ಲಿ ಜಾಗತಿಕವಾಗಿ ಹೆಚ್ಚು ವೀಕ್ಷಣೆ ಯಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಬರೋಬ್ಬರಿ 7.7 ಕೋಟಿ ಜನರು ಒಮ್ಮೆಲೆ ಟಿವಿಯಲ್ಲಿ ವೀಕ್ಷಣೆ ಮಾಡಿದ್ದರು. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಒಂದೇ ಟಿವಿಯಲ್ಲಿ ರಾಮಾಯಣ ನೋಡಿರುತ್ತಾರೆ. ಅಂದರೆ ಅಂದಾಜು ಮಾಡಿಕೊಳ್ಳಿ 7.7 ಕೋಟಿ ಟಿವಿಗಳಲ್ಲಿ ರಾಮಾಯಣ ವೀಕ್ಷಿಸಲ್ಪಟ್ಟದೆ ಎಂದರೇ ಎಷ್ಟು ಜನ ನೋಡಿರಬಹುದು ಎಂದು. ಇದೀಗ ಖಾಸಗಿ ಚಾನೆಲ್ ಗಳು ಕೂಡ ಇದೇ ಟ್ರೆಂಡಿಂಗ್ ಮನೋಭಾವವನ್ನು ಮುಂದುವರೆಸಲು ನಿರ್ಧಾರ ಮಾಡಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಡಿಡಿ ನ್ಯಾಷನಲ್ ಚಾನಲ್ ಮರುಪ್ರಸಾರ ಮಾಡಿದಂತೆ ತಮ್ಮಲ್ಲಿನ ರಾಮಾಯಣ ಹಾಗೂ ಮಹಾಭಾರತ ಪೌರಾಣಿಕ ಕಥೆಗಳನ್ನು ಭಾರತದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಾಗಿರುವ ಸ್ಟಾರ್ ಪ್ಲಸ್ ಹಾಗೂ ಕಲರ್ಸ್ ವಾಹಿನಿಗಳು ಮರುಪ್ರಸಾರ ಮಾಡಲು ನಿರ್ಧಾರ ಮಾಡಿದ್ದು ಮಾರುಕಟ್ಟೆಯಲ್ಲಿನ ಜನರ ಮನೋಭಾವವನ್ನು ಲಾಭ ಪಡೆಯುವ ಗುರಿಯೊಂದಿಗೆ ಈ ನಿರ್ಧಾರ ಮಾಡಿವೆ. ಈ ಚಾನಲ್ಗಳು ವಿಶ್ವದಾದ್ಯಂತ ತನ್ನದೇ ನೋಡುಗರನ್ನು ಹೊಂದಿರುವ ಕಾರಣ ರಾಮಾಯಣ ಹಾಗೂ ಮಹಾಭಾರತ ಪೌರಾಣಿಕ ಕಥೆಗಳು ಮತ್ತಷ್ಟು ಟ್ರೆಂಡ್ ಸೃಷ್ಟಿ ಮಾಡಲಿವೆ ಎಂಬ ಮಾತುಗಳು ಕೇಳಿಬಂದಿವೆ.

Post Author: Ravi Yadav