ಚೀ-ನಾಗೆ ಬಿಗ್ ಶಾಕ್ ! ಭಾರತಕ್ಕೆ ಕೇಳರಿಯದ ರೀತಿಯಲ್ಲಿ ಭರ್ಜರಿ ಗುಡ್ ನ್ಯೂಸ್ ನೀಡಲು ಸಿದ್ಧವಾದ ಅಮೇರಿಕಾ ! ಏನು ಗೊತ್ತಾ??

ಚೀ-ನಾಗೆ ಬಿಗ್ ಶಾಕ್ ! ಭಾರತಕ್ಕೆ ಕೇಳರಿಯದ ರೀತಿಯಲ್ಲಿ ಭರ್ಜರಿ ಗುಡ್ ನ್ಯೂಸ್ ನೀಡಲು ಸಿದ್ಧವಾದ ಅಮೇರಿಕಾ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಮೇರಿಕಾ ದೇಶದ ಅಧ್ಯಕ್ಷರಾಗಿರುವ ಟ್ರಂಪ್ ರವರು ಮೊದಲಿನಿಂದಲೂ ಕೊರೋನ ಪರಿಸ್ಥಿತಿ ಅಮೇರಿಕ ದೇಶದಲ್ಲಿ ಕಡಿಮೆಯಾದ ತಕ್ಷಣವೇ ಚೀನಾ ದೇಶಕ್ಕೆ ತಕ್ಕ ಬುದ್ಧಿ ಕಲಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.

ಅಷ್ಟೇ ಅಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳು ಕೂಡ ಕೊರೋನ ಪರಿಸ್ಥಿತಿಗೆ ಚೀನಾ ದೇಶದ ಕಡೆಗೆ ಬೆರಳು ಮಾಡುತ್ತಿದ್ದು ಕೊರೋನ ವೈರಸ್ನಿಂದ ಇಂದು ವಿಶ್ವವೇ ತಲ್ಲಣಗೊಳ್ಳಲು ಚೀನಾ ದೇಶ ಕಾರಣ ಎಂದು ಹೇಳಿಕೆ ನೀಡುತ್ತಿವೆ‌. ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ ದೇಶಕ್ಕೆ ದಿನೇ ದಿನೇ ಈ ಹಲವಾರು ದೇಶಗಳು ಹೊಸ ಹೊಸ ರೀತಿಯ ಆದೇಶಗಳನ್ನು ಹೊರಡಿಸುತ್ತಿದ್ದು, ವಿಶ್ವದ ಆರ್ಥಿಕತೆಯಲ್ಲಿ ಪ್ರಭಾವ ಬೀರಲು ತನ್ನದೇ ಆದ ಪ್ರಯತ್ನ ನಡೆಸುತ್ತಿದ್ದ ಚೀನಾ ದೇಶಕ್ಕೆ ದಿನಕ್ಕೊಂದು ಶಾಕಿಂಗ್ ನ್ಯೂಸ್ಗಳು ಎದುರಾಗುತ್ತಿವೆ.

ಇತ್ತೀಚೆಗಷ್ಟೇ ನಿಮಗೆಲ್ಲರಿಗೂ ತಿಳಿದಿರುವಂತೆ ಜಪಾನ್ ಹಾಗೂ ಸೌತ್ ಕೊರಿಯಾ ದೇಶಗಳ ರಾಯಭಾರಿಗಳು ಚೀನಾ ದೇಶದಲ್ಲಿ ನೆಲೆಸಿರುವ ತಮ್ಮ ದೇಶದ ಕಂಪನಿಗಳಿಗೆ ಉತ್ಪಾದನಾ ಘಟಕಗಳನ್ನು ಇತರ ದೇಶಗಳಿಗೆ ಬದಲಾಯಿಸುವಂತೆ ಮನವಿ ಮಾಡಿದ್ದವು. ಜಪಾನ್ ದೇಶ ಆರ್ಥಿಕವಾಗಿ ನಾವು ನೆರವು ನೀಡುತ್ತೇವೆ ಚೀನಾ ದೇಶದಿಂದ ದಯವಿಟ್ಟು ಉತ್ಪಾದನಾ ಘಟಕಗಳನ್ನು ವಾಪಸ್ ತೆಗೆದುಕೊಳ್ಳಿ ಎಂಬ ಘೋಷಣೆ ಹೊರಹಾಕಿತ್ತು. ಇಷ್ಟೇ ಅಲ್ಲದೇ ನೂರಾರು ಕಂಪನಿಗಳು ಈಗಾಗಲೇ ಮಾತುಕತೆ ನಡೆಸಿದ್ದು ಭಾರತಕ್ಕೆ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸಲು ಮನಸ್ಸು ಮಾಡಿವೆ ಎನ್ನಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಭಾರತದ ಪ್ರತಿಷ್ಠಿತ ಮಾಧ್ಯಮಗಳ ಸಂಸ್ಥೆಯಾದ ಎಕನಾಮಿಕ್ ಟೈಮ್ಸ್ ಅಮೇರಿಕಾ ದೇಶದ ಹಿರಿಯ ಅಧಿಕಾರಿಗಳು ಹಾಗೂ ಭಾರತದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಮೇರಿಕಾ ದೇಶದ ಕಂಪನಿಗಳ ಪ್ರತಿನಿಧಿಗಳ ಜೊತೆ ಸಭೆಯೊಂದು ನಡೆದಿದೆ ಎಂದು ವರದಿ ಮಾಡಿದೆ.

ಈ ಸಭೆಯನ್ನು ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜನೆ ಮಾಡಿದ್ದು, ಇಡೀ ಸಭೆಯಲ್ಲಿ ಒಕ್ಕೊರಲ ಧ್ವನಿಯಾಗಿ ಭಾರತದಲ್ಲಿ ಹೊಸ ಹೂಡಿಕೆಗೆ ಪ್ರಯತ್ನ ಪಡಲಾಗುತ್ತಿದ್ದು, ಭಾರತವನ್ನು ಹೊಸ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ. ಇನ್ನು ಮುಂದೆ ಅಮೇರಿಕಾ ದೇಶದ ಸರ್ಕಾರಿ ಇಲಾಖೆಯ ಎಲ್ಲಾ ವ್ಯವಹಾರಗಳು ಭಾರತದಲ್ಲಿ ಕೆಲಸ ನಿರ್ವಹಿಸಲು ಆದೇಶ ಸೂಚಿಸುತ್ತವೆ, ಯಾಕೆಂದರೆ ಭಾರತ ಒಂದು ಉತ್ತಮ ಆಯ್ಕೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇನ್ನು ಬಿಸಿನೆಸ್ ಟುಡೇ ಈಗಾಗಲೇ ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು ಸಾವಿರಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಉತ್ಸಾಹ ತೋರಿದ್ದು, ಈಗಾಗಲೇ 300 ಕಂಪನಿಗಳು ಚೀನಾ ದೇಶದಿಂದ ತಮ್ಮ ಉತ್ಪಾದನಾ ಘಟಕಗಳನ್ನು ಹೊರ ತಂದು ಭಾರತದಲ್ಲಿ ಸಕ್ರಿಯವಾಗಿ ಕೆಲಸ ಆರಂಭಿಸಲು ನಿರ್ಧಾರ ಮಾಡಿ ಮಾತುಕತೆ ಆರಂಭಿಸಿವೆ ಎಂದು ವರದಿ ಮಾಡಿದೆ.

ಇದೀಗ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ಪ್ರೋತ್ಸಾಹ ಧನ ಹಾಗೂ ಸಹಕಾರದ ಮೂಲಕ ವಿದೇಶಿ ಕಂಪನಿಗಳನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಘಟಕಗಳನ್ನು ಆರಂಭಿಸಲು ಉತ್ತೇಜನ ನೀಡಬೇಕು ಎಂಬುದು ಎಲ್ಲರ ಲೆಕ್ಕಾಚಾರ ವಾಗಿದೆ. ಇದೇ ಮಾತನ್ನು ನರೇಂದ್ರ ಮೋದಿ ರವರು ಕೂಡ ಹೇಳಿದ್ದು ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಸಿದ್ಧವಾಗಿವೆ, ತಯಾರು ಮಾಡಿಕೊಳ್ಳಿ ಎಂದು ಎರಡು ದಿನಗಳ ಹೇಳಿದ್ದನು ನಾವು ಇಲ್ಲಿ ಸ್ಮರಿಸಬಹುದು.