ಸರ್ಕಾರದ ಮುಂದೆ ಹೊಸ ಬೇಡಿಕೆಯಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ ! ಒತ್ತಾಯಿಸಿ ಹೇಳಿದ್ದೇನು ಗೊತ್ತಾ?

ಸರ್ಕಾರದ ಮುಂದೆ ಹೊಸ ಬೇಡಿಕೆಯಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ ! ಒತ್ತಾಯಿಸಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಕರ್ನಾಟಕ ರಾಜ್ಯದಲ್ಲಿ ಕೊರೋನ ವೈರಸ್ ಪರಿಣಾಮ ಲಾಕ್ಡೌನ್ ಮುಂದುವರೆಯುತ್ತಿದೆ. ಲಾಕ್ಡೌನ್ ರಾಜ್ಯದಲ್ಲಿ ಜಾರಿಗೆ ಬಂದು ಬರೊಬ್ಬರಿ 40 ದಿನಗಳಾಗಿವೆ. ಅವರು ಇವರು ಅಂತ ಇಲ್ಲ, ಪ್ರತಿಯೊಬ್ಬರು ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಮೇ 3ರ ಬಳಿಕ ಲಾಕ್ಡೌನ್ ಮುಂದುವರೆಯುತ್ತದೆಯೋ ಅಥವಾ ಮುಂದುವರಿಯುವುದಿಲ್ಲವೋ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ದೊರೆತಿಲ್ಲ. ಕೆಲವು ಕಡೆಯ ಲಾಕ್ಡೌನ್ ಸಡಿಲಿಕೆ ನಡೆದಿದ್ದರೂ ಕೂಡ ಜನ ಜೀವನ ಸಾಮಾನ್ಯ ಪರಿಸ್ಥಿತಿಗೆ ಮರಳಲು ಹಲವಾರು ದಿನಗಳು ಬೇಕಾಗುತ್ತವೆ. ಇಂತಹ ಸಂದರ್ಭದಲ್ಲಿ ಲಾಕ್ಡೌನ್ ನಿಂದ ರೈತ ಸಮುದಾಯವು ನಿಮಗೆಲ್ಲರಿಗೂ ತಿಳಿದಿರುವಂತೆ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಇದೀಗ ಇದರ ಕುರಿತು ಮಾತನಾಡಿರುವ ಮಾಜಿ ಮುಖ್ಯ ಮಂತ್ರಿಗಳಾಗಿರುವ ಸಿದ್ದರಾಮಯ್ಯರವರು ಈ ಕೂಡಲೇ ರಾಜ್ಯ ಸರ್ಕಾರ ರಾಜ್ಯದ ರೈತರಿಂದ ನೇರವಾಗಿ ಬೆಳೆದ ಬೆಳೆಗಳನ್ನು ಖರೀದಿಸಬೇಕು, ಮಾರುಕಟ್ಟೆಗೆ ತಕ್ಕಂತೆ ಬೆಲೆ ನೀಡಿ ಖರೀದಿ ಮಾಡಿರುವ ಹಣ್ಣು-ತರಕಾರಿ ಗಳನ್ನು ಉಚಿತವಾಗಿ ಬಡವರಿಗೆ ಸರ್ಕಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ರಾಜ್ಯರ ನೆರವಿಗೆ ರಾಜ್ಯ ಸರ್ಕಾರ ನಿಂತುಕೊಳ್ಳಬೇಕು ಎಂದು ರೈತ ಮುಖಂಡರ ಜೊತೆ ನಡೆದ ಸಭೆಯ ನಂತರ ಹೇಳಿಕೆ ನೀಡಿದ್ದಾರೆ.