ಭಾರತೀಯ ಭವಿಷ್ಯದ ಕ್ರಿಕೆಟ್ ತಾರೆಯನ್ನು ಆಯ್ಕೆಮಾಡಿದ ರೋಹಿತ್ ಶರ್ಮ ! ಆಯ್ಕೆಯಾದ ಯುವ ಆಟಗಾರ ಯಾರು ಗೊತ್ತಾ?

ಭಾರತೀಯ ಭವಿಷ್ಯದ ಕ್ರಿಕೆಟ್ ತಾರೆಯನ್ನು ಆಯ್ಕೆಮಾಡಿದ ರೋಹಿತ್ ಶರ್ಮ ! ಆಯ್ಕೆಯಾದ ಯುವ ಆಟಗಾರ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಕುರಿತು ಆರಂಭಿಕ ಆಟಗಾರ ರೋಹಿತ್ ಶರ್ಮಾ ರವರು ಮಾತನಾಡಿದ್ದಾರೆ. ಹರ್ಭಜನ್ ಸಿಂಗ್ ರವರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿರುವ ರೋಹಿತ್ ಶರ್ಮಾ ರವರು ಭರವಸೆಯ ಆಟಗಾರ ಯಾರು ಹಾಗೂ ಭಾರತದ ಮಧ್ಯಮ ಕ್ರಮಾಂಕದ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಮೊದಲಿಗೆ ಭಾರತದ ಮಧ್ಯಮ ಕ್ರಮಾಂಕದ ಕುರಿತು ಮಾತನಾಡುವಾಗ ರೋಹಿತ್ ಶರ್ಮಾ ರವರು
ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ರವರು ಹಲವಾರು ಅವಕಾಶಗಳನ್ನು ಮೊದಮೊದಲಿಗೆ ಕೈಚೆಲ್ಲಿದರು, ಆದರೆ ಇದೀಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ, ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ ಎಂದು ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಕುರಿತು ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇನ್ನು ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಯಾರು ಎಂದು ಪ್ರಶ್ನೆ ಮಾಡಿದಾಗ, ನನ್ನ ಅಂದಾಜಿನ ಪ್ರಕಾರ ಈಗಾಗಲೇ ದೇಶಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿರುವ ಶುಭಮ್ ಗಿಲ್ ರವರು ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ತಾರೆಯಾಗಲಿದ್ದಾರೆ. 20 ವರ್ಷವಿದ್ದಾಗಲೇ ಶುಭಮ್ ಗಿಲ್ ಅವರನ್ನು ಅಂತರಾಷ್ಟ್ರೀಯ ಟೂರ್ನಿಯಲ್ಲಿ ಆಟವಾಡಲು ಆಯ್ಕೆ ಮಾಡಲಾಗಿದೆ, ಅವಕಾಶ ಸಿಕ್ಕಾಗ ಖಂಡಿತ ಶುಭಮ್ ಗಿಲ್ ರವರು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತಾರೆ. ಇವರ ಕುರಿತು ನನಗೆ ಸಂಪೂರ್ಣ ಆತ್ಮ ವಿಶ್ವಾಸ ಇದೆ, ಖಂಡಿತ ಅವರು ಮುಂದೊಂದು ದಿನ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಿಂಚಲಿದ್ದಾರೆ ಎಂದು ಆತ್ಮ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.