ಮಾದರಿಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರ ಪತ್ನಿ ! ಲಾಕ್ಡೌನ್ ಸಮಯದಲ್ಲಿ ಮಾಡುತ್ತಿರುವ ಕೆಲಸವಾದರೂ ಏನು ಗೊತ್ತಾ?

ಮಾದರಿಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರ ಪತ್ನಿ ! ಲಾಕ್ಡೌನ್ ಸಮಯದಲ್ಲಿ ಮಾಡುತ್ತಿರುವ ಕೆಲಸವಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತದಂತಹ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ರಾಷ್ಟ್ರಪತಿಗಳಿಗೆ ಯಾವ ರೀತಿಯ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸುತ್ತದೆ ಎಂಬುದನ್ನು ನಿಮಗೆ ತಿಳಿಸುವ ಅವಶ್ಯಕತೆ ಇಲ್ಲ.

ಈ ಸೌಕರ್ಯಗಳು ರಾಷ್ಟ್ರಪತಿಗಳಿಗೆ ಅಷ್ಟೇ ಅಲ್ಲದೆ ಅವರ ಕುಟುಂಬದವರಿಗೂ ಅನ್ವಯಿಸುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಕೂಡ ಸರ್ಕಾರದ ಕಡೆಯಿಂದ ಸಕಲ ಸೌಲಭ್ಯಗಳು ಇವೆ. ಇದೀಗ ದೇಶದ ಎಲ್ಲೆಡೆ ಆರೋಗ್ಯ ಬಿಕ್ಕಟ್ಟಿನಿಂದ ಕೂಡಿರುವ ಸಂದರ್ಭದಲ್ಲಿ ರಾಜಕಾರಣಿಗಳ ಕುಟುಂಬಸ್ಥರು ಕೂಡ ಲಾಕ್ಡೌನ್ ನಲ್ಲಿ ಇದ್ದಾರೆ‌. ಆದರೆ ಇಲ್ಲೊಬ್ಬರು ಲಾಕ್ಡೌನ್ ಸಮಯವನ್ನು ಸರಿಯಾದ ಕಾರಣಕ್ಕಾಗಿ ಬಳಸಿಕೊಂಡು ಬಿಡುವಿನ ಸಮಯದಲ್ಲಿ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಅಷ್ಟೆಲ್ಲಾ ಸೌಲಭ್ಯಗಳು ಇದ್ದರೂ ವಿರಮಿಸದೇ ಕಷ್ಟಪಡುತ್ತಿದ್ದಾರೆ.

ಹೌದು ಅವರೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರ ಪತ್ನಿ ಸವಿತಾ ಕೋವಿಂದ್, ಇವರು ರಾಷ್ಟ್ರ ರಾಜಧಾನಿಯ ರಾಷ್ಟ್ರಪತಿಗಳ ಎಸ್ಟೇಟ್ ನಲ್ಲಿ ಲಾಕ್ ಆಗಿದ್ದು, ದೆಹಲಿಯಲ್ಲಿರುವ ಆಶ್ರಯ ಸುಧಾರಣಾ ಮಂಡಳಿ ನೇತೃತ್ವದಲ್ಲಿ ನಡೆಯುತ್ತಿರುವ ವಿವಿಧ ಆಶ್ರಯ ಮನೆಗಳಿಗೆ ಮಾಸ್ಕ್ ಕೊರತೆಯಿದೆ ಎಂದು ತಿಳಿದ ಕ್ಷಣದಿಂದಲೂ ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಈ ತಯಾರಿಸಿದ ಮಾಸ್ಕ್ ಗಳನ್ನು ಆಶ್ರಯ ಮನೆಗಳಿಗೆ ವಿತರಿಸಿ, ಮಾಸ್ಕ್ ಬಳಸುವಂತೆ ಹಾಗೂ ಇತರ ಕ್ರಮಗಳನ್ನು ಅನುಸರಿಸಲು ತಿಳಿ ಹೇಳಲಾಗುತ್ತದೆ. ಇವರು ಇದೀಗ ಮಾಸ್ಕ್ ತಯಾರಿಸುವ ಫೋಟೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.