ತಾನು ಆಟವಾಡಿದ ತಂಡಗಳಿಂದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಘೋಷಣೆ ಮಾಡಿದ ದಿನೇಶ್ ಕಾರ್ತಿಕ್ ! ಆಯ್ಕೆಯಾದ ಆಟಗಾರರು ಯಾರು ಗೊತ್ತಾ?

ತಾನು ಆಟವಾಡಿದ ತಂಡಗಳಿಂದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಘೋಷಣೆ ಮಾಡಿದ ದಿನೇಶ್ ಕಾರ್ತಿಕ್ ! ಆಯ್ಕೆಯಾದ ಆಟಗಾರರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ಕ್ರಿಕೆಟ್ ಆಟಗಾರ ಹಾಗೂ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ರವರು ತಾವು ಐಪಿಎಲ್ ಟೂರ್ನಿಯಲ್ಲಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ತಂಡಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ 6 ಫ್ರಾಂಚೈಸಿ ತಂಡಗಳಲ್ಲಿ ಆಟವಾಡಿರುವ ದಿನೇಶ್ ಕಾರ್ತಿಕ್ ರವರು ಆರಂಭಿಕರಾಗಿ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇವರ ಜೊತೆ ಡೆಲ್ಲಿ ತಂಡದಲ್ಲಿ ಕಾರ್ತಿಕ್ ರವರು ಆಟವಾಡಿದ್ದರು ಹಾಗೂ ಅದೇ ತಂಡದಿಂದ ಗ್ಲೆನ್ ಮೆಕ್‌ಗ್ರಾತ್ ರವರನ್ನು ಆಯ್ಕೆ ಮಾಡಿದರು.

ಇನ್ನು 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿರುವ ದಿನೇಶ್ ಕಾರ್ತಿಕ್ ರವರು ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್ ಹಾಗೂ ಯುಜ್ವೆಂದ್ರ ಚಹಲ್ ರವರನ್ನು ಬೆಂಗಳೂರು ತಂಡದಿಂದ ಆಯ್ಕೆ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ವರ್ಷಗಳ ಕಾಲ ಬ್ಯಾಟಿಂಗ್ ಮಾಡಿರುವ ದಿನೇಶ್ ಕಾರ್ತಿಕ್ ರವರು ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ರವರನ್ನು ಸಾರ್ವಕಾಲಿಕ ಶ್ರೇಷ್ಠ ತಂಡಕ್ಕೆ ಆಯ್ಕೆ ಮಾಡಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಆಂಡ್ರೆ ರಸೆಲ್ ಹಾಗೂ ಸುನಿಲ್ ನರೇನ್ ಅವರನ್ನು ಆಯ್ಕೆ ಮಾಡುವ ಮೂಲಕ ತಮ್ಮ ತಂಡದ ಆಯ್ಕೆಯನ್ನು ಮುಗಿಸಿದ್ದಾರೆ. ಸಂಪೂರ್ಣವಾಗಿ ತಂಡ ಈ ಕೆಳಗಿನಂತೆ ಇದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಗ್ಲೆನ್ ಮೆಕ್ಗ್ರಾತ್, ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್, ಯುಜ್ವೇಂದ್ರ ಚಹಲ್