ಭಾರತೀಯ ಕ್ರಿಕೆಟ್ ಕುರಿತು ಮಹತ್ವದ ನಿರ್ಣಯ ತೆಗೆದುಕೊಂಡ ಸೌರವ್ ! ನಿರಾಸೆ ಮೂಡಿಸಿದರೂ ಉತ್ತಮ ನಿರ್ಧಾರದಿಂದ ನೆಟ್ಟಿಗರು !

ಭಾರತೀಯ ಕ್ರಿಕೆಟ್ ಕುರಿತು ಮಹತ್ವದ ನಿರ್ಣಯ ತೆಗೆದುಕೊಂಡ ಸೌರವ್ ! ನಿರಾಸೆ ಮೂಡಿಸಿದರೂ ಉತ್ತಮ ನಿರ್ಧಾರದಿಂದ ನೆಟ್ಟಿಗರು !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮನರಂಜನೆ ನೀಡುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ ಅನಿರ್ದಿಷ್ಟಾವಧಿ ಕಾಲ ಮುಂದೂಡಲ್ಪಟ್ಟಿದೆ.

ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಪಂದ್ಯಗಳು ನಡೆಯುವುದು ಕೂಡ ಅನುಮಾನವಾಗಿದೆ, ಇದರ ನಡುವೆ ಇದರಿಂದ ಸಾವಿರಾರು ಕೋಟಿ ನಷ್ಟ ಅನುಭವಿಸಿರುವ ಬಿಸಿಸಿಐ ಸಂಸ್ಥೆಯು ಮುಚ್ಚಿದ ಕ್ರೀಡಾಂಗಣದಲ್ಲಿ ಸರಣಿ ನಡೆಸುವ ಸಾಧ್ಯತೆಗಳಿವೆ, ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ ವಿರುದ್ಧ ಈಗಾಗಲೇ ನಿಗದಿ ಗೊಂಡಿರುವ ಟೆಸ್ಟ್ ಸರಣಿಯ ಪಂದ್ಯಗಳನ್ನು ಹೆಚ್ಚಿಸಿ ಬಿಸಿಸಿಐ ಸಂಸ್ಥೆ ದುಡ್ಡು ಮಾಡಿಕೊಳ್ಳಲು ಪ್ರಯತ್ನ ಪಡುತ್ತದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ ಬಿಸಿಸಿಐ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿರಲಿಲ್ಲ. ಆದರೆ ಈ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ ರವರು ಮಹತ್ವದ ನಿರ್ಣಯ ತೆಗೆದುಕೊಂಡಿದ್ದಾರೆ.

ಇದೀಗ ಇದರ ಕುರಿತು ಮಾತನಾಡಿರುವ ಸೌರವ್ ಗಂಗೂಲಿ ರವರು ಯಾವುದೇ ಕಾರಣಕ್ಕೂ ಆಸ್ಟ್ರೇಲಿಯ ದೇಶದ ಜೊತೆಗೆ ಅಷ್ಟೇ ಅಲ್ಲ ಬೇರೆ ಯಾವುದೇ ದೇಶದ ಜೊತೆಗೂ ಕ್ರಿಕೆಟ್ ಚಟುವಟಿಕೆ ನಡೆಸುವ ಸಾಧ್ಯತೆಯೇ ಇಲ್ಲ, ಎಷ್ಟೇ ಸಾವಿರ ಕೋಟಿಗಳು ನಷ್ಟವಾದರೂ ಸರಿ ಮನುಷ್ಯನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಬೇಕಾಗಿರುವ ಸಂದರ್ಭದಲ್ಲಿ ಕ್ರೀಡೆ ಬಗ್ಗೆ ಆಲೋಚನೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕರೋನ ವೈರಸ್ ಪರಿಸ್ಥಿತಿ ಸಂಪೂರ್ಣ ಕಡಿಮೆಯಾಗುವವರೆಗೂ ಯಾವುದೇ ಕಾರಣಕ್ಕೂ ಚಿಕ್ಕ ಕ್ರಿಕೆಟ್ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.