ನರೇಂದ್ರ ಮೋದಿ ಅವರಿಗೆ ಖುದ್ದು ಪತ್ರವನ್ನು ಬರೆದ ಬಿಲ್ ಗೇಟ್ಸ್ ! ಸಂಚಲನ ಸೃಷ್ಟಿಸಿದ ಪತ್ರದಲ್ಲಿ ಏನಿದೆ ಗೊತ್ತಾ?

ನರೇಂದ್ರ ಮೋದಿ ಅವರಿಗೆ ಖುದ್ದು ಪತ್ರವನ್ನು ಬರೆದ ಬಿಲ್ ಗೇಟ್ಸ್ ! ಸಂಚಲನ ಸೃಷ್ಟಿಸಿದ ಪತ್ರದಲ್ಲಿ ಏನಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಹಾಗೂ ಗೇಟ್ ಫೌಂಡೇಶನ್ ಮೂಲಕ ವಿಶ್ವದ ಮೂಲೆ ಮೂಲೆಯ ಬಡ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿರುವ ಬಿಲ್ ಗೇಟ್ಸ್ ರವರು ನರೇಂದ್ರ ಮೋದಿ ರವರಿಗೆ ಪತ್ರ ಬರೆದಿದ್ದಾರೆ.

ಕೋರೋನ ಪರಿಸ್ಥಿತಿಯನ್ನು ನಿಭಾಯಿಸಲು ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿರುವ ಬಿಲ್ ಗೇಟ್ಸ್ ಅವರು ಇತ್ತೀಚೆಗೆ ಔಷಧಿ ಕಂಡು ಹಿಡಿಯುವ ಕಂಪನಿಗಳಿಗೆ ಕೂಡ ದೇಣಿಗೆಯನ್ನು ನೀಡಿ ಸಾವಿರಾರು ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಇವರ ಗಮನ ಭಾರತದ ಕಡೆ ನೆಟ್ಟಿದ್ದು ಭಾರತ ದೇಶವು ಕೋರೋನ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಗೆ ಫಿದಾ ಆಗಿದ್ದಾರೆ. ಹೌದು ಇವರ ಪತ್ರದ ಟೈಟಲ್ ನಲ್ಲಿ ನಿಮ್ಮ ನಾಯಕತ್ವವನ್ನು ಶ್ಲಾಘಿಸಿ ಎಂದು ಹೇಳಿ ಈ ರೀತಿ ಬರೆದು ಕಳುಹಿಸಿದ್ದಾರೆ.

ನಿಮ್ಮ ನಾಯಕತ್ವವನ್ನು ನಾವು ಶ್ಲಾಘಿಸುತ್ತೇವೆ, ಭಾರತ ದೇಶದಲ್ಲಿನ ಕೋರೋನ ಸೋಂಕಿತರ ರೇಖೆಯನ್ನು ಸಮತಟ್ಟಾಗಿಸಲು ನೀವು ಹಾಗೂ ನಿಮ್ಮ ಸರ್ಕಾರ ತೆಗೆದು ಕೊಂಡಿರುವ ಮುಂದಾಲೋಚನೆಯ ಕ್ರಮಗಳು, ಉದಾಹರಣೆಗೆ ಲಾಕ್ ಡೌನ್, ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸಗಳು, ಟೆಸ್ಟಿಂಗ್ ನಡೆಸುವ ಸ್ಪೀಡ್, ಕ್ವಾರಂಟೈನ್ ಮಾಡುವ ವಿಧಾನ, ವೇಗವಾಗಿ ಹಬ್ಬುತ್ತಿರುವ ಹಾಟ್ಸ್ಪಾಟ್ ಗಳನ್ನು ಗುರುತಿಸಿ ಸೋಂಕು ಹರಡುವುದನ್ನು ತಡೆಯುವುದು, ಅಷ್ಟೇ ಅಲ್ಲದೆ ಡಿಜಿಟಲ್ ಯುಗವನ್ನು ಬಳಸಿಕೊಂಡು ಆರೋಗ್ಯ ಸೇತು ಅಪ್ಲಿಕೇಶನನ್ನು ಅಭಿವೃದ್ಧಿಪಡಿಸಿ ಜನರಿಗೆ ಲೈವ್ ಟ್ರ್ಯಾಕಿಂಗ್ ನ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಕಾರ್ಯ ನೋಡಿ ಬಹಳ ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಸಮರ್ಪಕ ಸಾಮಾಜಿಕ ರಕ್ಷಣೆ ನೀಡುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಜಾರಿಗೊಳಿಸಿ ನೀವು ಪ್ರಯತ್ನ ಪಡುತ್ತಿರುವ ರೀತಿ ನೋಡಿ ನಾನು ಕೃತಜ್ಞನಾಗಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ANI ನ್ಯೂಸ್ ವರದಿ ಮಾಡಿದೆ.