ಮೋದಿಗೆ ತಲೆಬಾಗಿದ ವಿಶ್ವ !ಭಾರತೀಯರಿಗೆ ಹೆಮ್ಮೆಯ ವಿಷಯ ನೀಡಿದ ಅಮೆರಿಕ ಕಂಪನಿ ಸರ್ವೆ ! ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕಾದ ವಿಷಯ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಎಲ್ಲೆಡೆ ಯಾವ ಪರಿಸ್ಥಿತಿ ಇದೆ ಎಂಬುದು ನಿಮಗೆ ವಿಶ್ಲೇಷಣೆ ನೀಡುವ ಅಗತ್ಯವಿಲ್ಲ ಎಂದು ಅನಿಸುತ್ತದೆ. ಭಾರತದಲ್ಲಿಯೂ ಕೂಡ ಹಲವಾರು ಸವಾಲುಗಳು ಎದುರಾಗಿದ್ದು ಕರೋನ ಬಿಕ್ಕಟ್ಟನ್ನು ಜನರ ಸಮನ್ವಯ ದಿಂದಾಗಿ ಕೇಂದ್ರ ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ.

ಇದೀಗ ಇದರ ಕುರಿತು ವಿಶ್ವದ ಇತರ ದೇಶಗಳ ನಾಯಕರು ಯಾವ ರೀತಿಯಲ್ಲಿ ತಮ್ಮ ದೇಶದಲ್ಲಿ ಕರೋನ ಸೋಂಕು ಹರಡದಂತೆ ಪರಿಣಾಮಕಾರಿಯಾಗಿ ರುವಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂಬುದರ ಕುರಿತು ಅಮೆರಿಕ ದೇಶದ ಖಾಸಗಿ ಸಂಸ್ಥೆ ಸರ್ವೆ ನಡೆಸಿದೆ. ಕರೋನ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ ನಾಯಕರ ಕುರಿತ ಸರ್ವೇಯಲ್ಲಿ ನರೇಂದ್ರ ಮೋದಿರವರು ಅಗ್ರಸ್ಥಾನದಲ್ಲಿದ್ದು ಬರೋಬ್ಬರಿ 68 ಅಂಕಗಳನ್ನು ಪಡೆದು ಕೊಂಡಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷರಾದ ಟ್ರಂಪ್ ರವರಿಗೆ -3 ಅಂಕಗಳು ಸಿಕ್ಕಿದ್ದು, ಅಮೇರಿಕ ದೇಶ ಬಾರಿ ಮುಜುಗರಕ್ಕೆ ಉಂಟಾಗಿದೆ. ಈ ಕುರಿತು ನಿರ್ಮಲಾ ಸೀತಾರಾಮನ್ ರವರು ಟ್ವೀಟ್ ಮಾಡಿದ್ದು ಸಂತಸ ವ್ಯಕ್ತ ಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಇಷ್ಟು ದಿವಸ ಅಭಿವೃದ್ಧಿ ಹೊಂದುತ್ತಿರುವ ಭಾರತ ನಂತಹ ದೇಶಗಳಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಇಲ್ಲ, ಕೇವಲ ಅಮೇರಿಕಾ ದೇಶದಂತಹ ಮುಂದುವರಿದ ದೇಶಗಳಲ್ಲಿ ಮಾತ್ರ ಜೀವ ಅಮೂಲ್ಯ ಎಂದು ಹೇಳಲಾಗುತ್ತಿತ್ತು. ‌ಆದರೆ ಈ ಸರ್ವೇ ಅಸಲಿ ಸತ್ಯವನ್ನು ಹೊರ ಬಿಚ್ಚಿಟ್ಟಿದ್ದು ಅಮೆರಿಕಾ ದೇಶದಲ್ಲಿ ದುಡ್ಡಿಗೆ ಮನ್ನಣೆ ನೀಡಿದ್ದಾರೆ. ಆದರೆ ಭಾರತದಲ್ಲಿ ತನ್ನ ಆರ್ಥಿಕತೆಯ ಕುರಿತು ಆಲೋಚನೆ ಮಾಡದೆ ಜೀವಕ್ಕೆ ಮಣೆ ಹಾಕಲಾಗಿದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ

Post Author: Ravi Yadav