ಮತ್ತೆ ಬರುವ ಮುನ್ಸೂಚನೆ ನೀಡಿದರೇ ರಮ್ಯಾ ! ಅಕ್ಕ ಬರ್ತಾರೆ ಬರ್ತಾರೆ ಅಂತ ಫುಲ್ ಹವಾ ಸೃಷ್ಟಿಸಿದ ಬಿಜೆಪಿ ಫ್ಯಾನ್ಸ್ ! ! ಅಷ್ಟಕ್ಕೂ ನಡೆದದ್ದೇನು ಗೊತ್ತಾ?

ಮತ್ತೆ ಬರುವ ಮುನ್ಸೂಚನೆ ನೀಡಿದರೇ ರಮ್ಯಾ ! ಅಕ್ಕ ಬರ್ತಾರೆ ಬರ್ತಾರೆ ಅಂತ ಫುಲ್ ಹವಾ ಸೃಷ್ಟಿಸಿದ ಬಿಜೆಪಿ ಫ್ಯಾನ್ಸ್ ! ! ಅಷ್ಟಕ್ಕೂ ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ ನಂತರ ರಾಜಕೀಯಕ್ಕೆ ಎಂಟ್ರಿಯಾದ ಮೇಲೆ ದಿನೇ ದಿನೇ ರಮ್ಯಾ ರವರ ವರ್ಚಸ್ಸು ಕುಗ್ಗುತ್ತಾ ಸಾಗುತ್ತಿತ್ತು.

ಎಲ್ಲಿ ನೋಡಿದರೂ ರಮ್ಯಾ ರವರ ಕುರಿತು ಟ್ರೋಲ್ಗಳು ಹೆಚ್ಚಾಗುತ್ತಿದ್ದವು, ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಜೆಪಿ ಪಕ್ಷದ ಬೆಂಬಲಿಗರು ಹೆಚ್ಚು ಸಕ್ರಿಯರಾಗಿರುವ ಕಾರಣ ರಮ್ಯಾ ರವರ ಪ್ರತಿಯೊಂದು ಹೇಳಿಕೆಗಳನ್ನು ಟ್ರೊಲ್ ಮಾಡುವ ಮೂಲಕ ವೈರಲ್ ಮಾಡಿ, ಭರ ಪೂರಿತ ಮನರಂಜನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮ್ಯಾರವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಕಂಡ ಬಳಿಕ ಜೂನ್ನಲ್ಲಿ ಕೊನೆಯ ಟ್ವೀಟ್ ಮಾಡಿ ಮಾಯವಾಗಿದ್ದರು.

ಅಂದಿನಿಂದ ಇಲ್ಲಿಯವರೆಗೂ ಹೆಚ್ಚು ಬಹಿರಂಗವಾಗಿಯೂ ಕೂಡ ಎಲ್ಲಿಯೂ ಕಾಣಿಸಿಕೊಂಡಿಲ್ಲ, ಒಂದೆರಡು ಬಾರಿ ಸುದ್ದಿಗಳು ಕೇಳಿ ಬಂದರೂ ಅಧಿಕೃತವಾದ ಸುದ್ದಿ ಮಾತ್ರ ಯಾವುದು ಹೊರ ಬಂದಿಲ್ಲ. ಅವರ ಸಾಮಾಜಿಕ ಜಾಲತಾಣಗಳ ಅಕೌಂಟ್ ಕೂಡ ಹೈಡ್ ಆಗಿದ್ದವು, ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಹೆಚ್ಚು ಕಡಿಮೆ ಒಂದು ವರ್ಷ ಆದ ಬಳಿಕ ರಮ್ಯಾರವರು ಮತ್ತೊಮ್ಮೆ ತಮ್ಮ ಟ್ವಿಟ್ಟರ್ ಖಾತೆಯನ್ನು ರೀ ಆಕ್ಟಿವೇಟ್ ಮಾಡಿಕೊಂಡಿದ್ದಾರೆ. ಯಾವುದೇ ಟ್ವೀಟುಗಳು ಇನ್ನೂ ಹೊರಬಿದ್ದಿಲ್ಲವಾದರೂ ಇಷ್ಟು ದಿವಸ ಹೈಡ್ ಆಗಿದ್ದ ಖಾತೆ ಇದೀಗ ಓಪನ್ ಆಗಿದೆ. ಈ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಎಂದಿನಂತೆ ರಮ್ಯ ಅಕ್ಕ ರವರಿಗೆ ನಾವು ಕಾಯುತ್ತಿದ್ದೇವೆ ಎಂದು ಬಾರಿ ವೈರಲ್ ಮಾಡುತ್ತಿದ್ದಾರೆ.