ಎಂಎಸ್ ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ಭಾರತಕ್ಕೆ ಹೊಸ ಸಲಹೆ ನೀಡಿದ ಇಂಗ್ಲೆಂಡ್ ಮಾಜಿ ನಾಯಕ ! ಇದರ ಕುರಿತು ನಿಮ್ಮ ಅಭಿಪ್ರಾಯ?

ನಮಸ್ಕಾರ ಸ್ನೇಹಿತರೇ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ರವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಹಲವಾರು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿದೆ.

ಇದೀಗ ಎಲ್ಲೇಡೆ ಎಂಎಸ್ ಧೋನಿ ರವರ ನಿವೃತ್ತಿಯ ಮಾತುಗಳು ಕೇಳಿಬರುತ್ತವೆ.
ಕೆಲವರು ಎಂಎಸ್ ಧೋನಿ ರವರು ನಿವೃತ್ತಿ ಪಡೆಯಬಾರದು ಎಂದರೆ, ಈ ಬಾರಿಯ ಐಪಿಎಲ್ ಧೋನಿ ರವರ ಮುಂದಿನ ಕ್ರಿಕೆಟ್ ಭವಿಷ್ಯ ನಿರ್ಧಾರ ಮಾಡಲಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಕೆಲವರು ಯುವಕರಿಗೆ ಆದ್ಯತೆ ನೀಡುವ ಮೂಲಕ ತಂಡವನ್ನು ಮುನ್ನಡೆಸಿದ ಧೋನಿ ರವರು ಇಂದು ಯುವಕರಿಗೆ ಆದ್ಯತೆ ನೀಡದೆ ಇಂದಿಗೂ ತಂಡದಲ್ಲಿ ಇರಬೇಕು ಎಂಬ ಬಯಕೆ ಹೊಂದಿದ್ದಾರೆ ಎಂದು ಟೀಕೆಗಳು ಕೂಡ ಮಾಡುತ್ತಾರೆ. ಈ ಎಲ್ಲಾ ವಾದ-ವಿವಾದಗಳ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ರವರು ಧೋನಿ ರವರ ಕುರಿತು ಈ ಮಾತುಗಳನ್ನು ಆಡಿದ್ದಾರೆ.

ಒಮ್ಮೆ ಧೋನಿ ಕ್ರಿಕೆಟ್ ನಿಂದ ನಿವೃತ್ತಿ ಪಡೆದು ಕೊಂಡರೆ ಮತ್ತೊಮ್ಮೆ ವಾಪಸ್ಸು ಬರಲು ಸಾಧ್ಯವಿಲ್ಲ, ಒಂದು ಪೀಳಿಗೆಯಲ್ಲಿ ಸಿಗುವ ಒಬ್ಬ ಅಪರೂಪದ ಆಟಗಾರ ಧೋನಿ, ಈಗಾಗಲೇ ಭಾರತ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಎಂಎಸ್ ಧೋನಿ ರವರು ಇನ್ನೂ ಕೂಡ ಕೊಂಚ ಕೊಡುಗೆಯನ್ನು ಕೊಡಲಿದ್ದಾರೆ. ಧೋನಿ ರವರ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಕೇಳಿ ಬರುತ್ತಿದ್ದ ಗೌರವಾನ್ವಿತ ಹೆಸರುಗಳಲ್ಲಿ ಒಂದಾಗಿದೆ, ಹೀಗಾಗಿ ಎಂಎಸ್ ಧೋನಿ ರವರನ್ನು ಈಗಲೇ ನಿವೃತ್ತಿ ಕಡೆ ಮುಖ ಮಾಡಿಸುವುದು ನಿಲ್ಲಿಸಿ, ಧೋನಿಯ ಮನಸ್ಥಿತಿಯ ಬಗ್ಗೆ ಅವರಿಗೆ ಮಾತ್ರ ತಿಳಿದಿದೆ ಎಂದು ಧೋನಿ ರವರು ಮತ್ತಷ್ಟು ಕಾಲ ತಂಡದಲ್ಲಿ ಇರಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Post Author: Ravi Yadav