ತನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್, ಬಾಲ್ಯದ ಕ್ರಿಕೆಟ್ ಹೀರೋಗಳು ಇವರೇ ಎಂದು ಅಭಿಮಾನಿಗಳಿಗೆ ಉತ್ತರ ನೀಡಿದ ಶಿಖರ್ ! ನೀಡಿದ ಉತ್ತರಗಳೇನು ಗೊತ್ತಾ??

ತನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್, ಬಾಲ್ಯದ ಕ್ರಿಕೆಟ್ ಹೀರೋಗಳು ಇವರೇ ಎಂದು ಅಭಿಮಾನಿಗಳಿಗೆ ಉತ್ತರ ನೀಡಿದ ಶಿಖರ್ ! ನೀಡಿದ ಉತ್ತರಗಳೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಚೀನಾ ವೈರಸ್ ನಿಂದ ಇದೀಗ ಇಡೀ ದೇಶದ ಎಲ್ಲಾ ಕ್ರೀಡಾ ಚಟುವಟಿಕೆಗಳು ಬಹುತೇಕ ರದ್ದುಗೊಂಡಿವೆ. ಇನ್ನು ಎಲ್ಲಾ ಆಟಗಾರರು ಮನೆಯಲ್ಲೇ ಇದ್ದು ಅಭಿಮಾನಿಗಳನ್ನು ಮನರಂಜಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ಇದೀಗ ಶಿಖರ್ ಧವನ್ ರವರು ಕೂಡ ಅಭಿಮಾನಿಗಳ ಪ್ರಶ್ನೆಗಳಿಗೆ ಇನ್ಸ್ಟಾಗ್ರಾಮ್ ನಲ್ಲಿ ಉತ್ತರ ನೀಡುವ ಸಂದರ್ಭದಲ್ಲಿ ಅಭಿಮಾನಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ನಿಮ್ಮ ನೆಚ್ಚಿನ ಫೇವರೆಟ್ ಬ್ಯಾಟಿಂಗ್ ಪಾರ್ಟ್ನರ್ ಯಾರು, ಹೆಚ್ಚಿನ ಮನರಂಜನೆಯ ತಂಡದ ಆಟಗಾರ ಯಾರು? ನಿಮ್ಮ ಬಾಲ್ಯದ ನೆಚ್ಚಿನ ಕ್ರಿಕೆಟ್ ಆಟಗಾರರ ಹೆಸರು ತಿಳಿಸಿ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿರುವ ಶಿಖರ್ ಧವನ್ ರವರು ಮೊದಲಿಗೆ ನನ್ನ ಫೇವರೆಟ್ ಬ್ಯಾಟಿಂಗ್ ಪಾರ್ಟ್ನರ್ ರೋಹಿತ್ ಶರ್ಮಾ, ಇನ್ನುಳಿದಂತೆ ತಂಡದಲ್ಲಿ ಹೆಚ್ಚಿನ ಮನರಂಜನೆಯನ್ನು ನೀಡುವವರು ಯುಜ್ವೇಂದ್ರ ಚಹಲ್. ಇನ್ನು ನನ್ನ ಬಾಲ್ಯದ ಕ್ರಿಕೆಟ್ ನೆಚ್ಚಿನ ಆಟಗಾರರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್ ಹಾಗೂ ಆಂಡ್ರ್ಯೂ ಫ್ಲವರ್ ಎಂದು ತಿಳಿಸಿದ್ದಾರೆ.