ಗೋಸಂರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ ! ಮತ್ತೊಂದು ಮಹತ್ವದ ಯೋಜನೆ ಘೋಷಿಸಿದ ಕೋಟಾ ಶ್ರೀನಿವಾಸ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಅಧಿಕಾರಯುತ ಪಕ್ಷದ ಪ್ರತಿಯೊಬ್ಬ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿರುತ್ತಾರೆ. ಒತ್ತಾಯ ಮಾಡದೇ ಇದ್ದರೂ, ಬಹಿರಂಗವಾಗಿ ಬೇಡಿಕೆ ಇಡದೇ ಇದ್ದರೂ ಶಾಸಕರ ಮನಸ್ಸಿನಲ್ಲಿ ಸಚಿವರಾಗಬೇಕು ಎಂಬ ಕನಸು ಇದ್ದೇ ಇರುತ್ತದೆ.

ಆದರೆ ಬಹುತೇಕ ಶಾಸಕರು ಸಚಿವ ಸ್ಥಾನ ಸಿಕ್ಕರೂ ಕೂಡ ಕೇವಲ ಪ್ರಭಾವಿ ಖಾತೆ ಸ್ಥಾನ ಸಿಗಬೇಕು ಇಲ್ಲವಾದಲ್ಲಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಅಂದು ಕೊಂಡಿರುತ್ತಾರೆ. ಹೌದು, ಕೆಲವು ಖಾತೆಗಳನ್ನು ಯಾವುದೇ ಶಾಸಕರು ಪಡೆಯಲು ಬಯಸುವುದಿಲ್ಲ. ಅದರಲ್ಲಿ ಮುಜರಾಯಿ ಇಲಾಖೆಯ ಖಾತೆ ಕೂಡ ಒಂದು. ಬಹುತೇಕ ಶಾಸಕರು ಮುಜರಾಯಿ ಖಾತೆ ಬೇಡ ಎನ್ನುತ್ತಾರೆ. ಆದರೆ ಇಲ್ಲಿ ಒಬ್ಬರೂ ಖಾತೆ ಯಾವುದಾದರೇನು, ಇಚ್ಛಾಶಕ್ತಿಯಿಂದ ನಿರ್ವಹಿಸಿದರೇ ಯಾವುದೇ ಖಾತೆಯಲ್ಲೂ ಪ್ರಭಾವ ಬೀರಬಹುದು ಹಾಗೂ ಸುಧಾರಣಾ ಕ್ರಮಗಳಿಂದ ಇಲಾಖೆಯಲ್ಲಿ ಸುಧಾರಣೆಯನ್ನು ತಂದು ಪ್ರತಿಯೊಂದು ಕೆಲಸಗಳಿಗೂ ತನ್ನದೇ ಆದ ಮಹತ್ವ ಬರುವಂತೆ ಮಾಡಬಹುದು ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ.

ಹೌದು, ಅವರೇ ಕೋಟಾ ಶ್ರೀನಿವಾಸ ಪೂಜಾರಿ ! ಇದರ ಕುರಿತು ಇವರನ್ನು ಪ್ರಶ್ನೆ ಕೇಳಿದರೇ, ತಲೆಗೆ ಹೊಕ್ಕಿದ ಅಕ್ಷರ, ನೆಲಕ್ಕೆ ಬಿದ್ದ ಬೀಜ ಎಂದಿಗೂ ಫಲ ನೀಡದೆ ಇರುವುದಿಲ್ಲ. ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಂಡರೇ ಎಲ್ಲಾ ಖಾತೆಯು ದೇವರ ಖಾತೆಯೇ ಎಂದು ಈಗಾಗಲೇ ಹೇಳಿದ್ದಾರೆ. ಇದೀಗ ಕೋಟಾ ಶ್ರೀನಿವಾಸ ಪೂಜಾರಿ ರವರು ದೇವಾಲಯಗಳಿಗೆ ಬೇಕಾದ ಹೆಚ್ಚಿನ ಅನುದಾನಗಳು ಹಾಗೂ ನೂರಾರು ವರ್ಷಗಳಿಂದ ತನ್ನದೇ ಆದ ಇತಿಹಾಸವನ್ನು ಹೊಂದಿರುವ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಲು ನಿರ್ಧಾರ ಮಾಡಿರುವ ಕೋಟಾ ಪೂಜಾರಿ ರವರು ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇಷ್ಟು ದಿವಸ, ದೇವಾಲಯಗಳಲ್ಲಿ ಸಾಮೂಹಿಕ ವಿವಾಹ, ಪ್ರಚಾರ ರಥಯಾತ್ರೆ, ಮದ್ಯದ ಅಂಗಡಿಗೆ ದೇವರ ಹೆಸರು ನಿಷೇಧ ಹಾಗೂ ಹಿಂದೂ ದೇವಾಲಯಗಳಿಂದ ಬಂದ ಹಣವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಬಳಸುವುದು, ಹೀಗೆ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇದೀಗ ಗೋಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇನ್ನು ಮುಂದೆ ವಿಶೇಷವಾಗಿ ರಾಜ್ಯದ ಎ ದರ್ಜೆಯ 25 ದೇವಸ್ಥಾನಗಳಲ್ಲಿ ಮುಜರಾಯಿ ಇಲಾಖೆಯ ಸಂಪೂರ್ಣ ಅನುದಾನದಿಂದ ಗೋಶಾಲೆ ಸ್ಥಾಪಿಸಿ ಗೋವುಗಳನ್ನು ಸಂರಕ್ಷಿಸಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಹಲವಾರು ವರ್ಷಗಳ ಬಿಜೆಪಿ ಕಾರ್ಯಕರ್ತರ ಒತ್ತಾಯವನ್ನು ಈಡೇರಿಸಿರುವ ಕೋಟಾ ಶ್ರೀನಿವಾಸ ಪೂಜಾರಿ ರವರು, ಇಷ್ಟು ದಿವಸ ಇತರ ಶಾಸಕರು ಅಥವಾ ಸಚಿವರು ಬೇಡ ಎನ್ನುತ್ತಿದ್ದ ಖಾತೆಯಲ್ಲಿ ತಮ್ಮದೇ ಆದ ಕಾರ್ಯವೈಖರಿಯ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.

Post Author: Ravi Yadav