ಅಭಿಮಾನಿಗಳಿಗೆ ಹಬ್ಬ : ಹುಟ್ಟುಹಬ್ಬದ ದಿನವೇ ಎಬಿ ಡಿವಿಲಿಯರ್ಸ್ ರವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ !

ನಮಸ್ಕಾರ ಸ್ನೇಹಿತರೇ, ಕಳೆದ ಎರಡು ವರ್ಷಗಳ 2018 ರಲ್ಲಿ ಹಿಂದೆ ಎಬಿ ಡಿವಿಲಿಯರ್ಸ್ ರವರು ಐಪಿಎಲ್ ಬಳಿಕ ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಸಾಕಾಗುತ್ತಿಲ್ಲ ಎಂದು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಂಡಿದ್ದರು.

ದಿಡೀರ್ ನಿರ್ಧಾರ ಘೋಷಣೆ ಮಾಡಿದ ಬಳಿಕ ಅಭಿಮಾನಿಗಳು ಭಾರಿ ನಿರಾಸೆ ಗೊಂಡಿದ್ದರು. ಆದರೆ ವಿವಿಧ ದೇಶಗಳ ಟಿ20 ಟೂರ್ನಿಗಳಲ್ಲಿ ಪಾಲ್ಗೊಂಡು ಅಭಿಮಾನಿಗಳನ್ನು ರಂಜಿಸಿದ್ದ ಎಬಿ ಡಿವಿಲಿಯರ್ಸ್ ರವರು, ಕಳೆದ ವರ್ಷ ನಡೆದ ವಿಶ್ವಕಪ್ ಟೂರ್ನಿಗೆ ತಂಡಕ್ಕೆ ಅಗತ್ಯವಿದ್ದರೆ ಮತ್ತೊಮ್ಮೆ ವಾಪಸ್ ಆಗುವುದಾಗಿ ತಿಳಿಸಿದ್ದರು. ಆದರೆ ಆಯ್ಕೆ ಮಂಡಳಿಯು ನಾಲ್ಕು ವರ್ಷಗಳ ನಿರಂತರ ಅಭ್ಯಾಸದ ನಂತರ ಆಟಗಾರರನ್ನು ಆಯ್ಕೆ ಮಾಡಲಾಗಿದೆ, ಇದೀಗ ಅವರನ್ನು ಹೊರತುಪಡಿಸಿ ಎಬಿ ಡಿವಿಲಿಯರ್ಸ್ ಅವರಿಗೆ ಅವಕಾಶ ನೀಡಿದರೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಎಬಿ ಡಿವಿಲಿಯರ್ಸ್ ರವರ ಅಪ್ಲಿಕೇಶನ್ ಅನ್ನು ರಿಜೆಕ್ಟ್ ಮಾಡಿತ್ತು.

ಆದರೆ ವಿಶ್ವಕಪ್ ಟೂರ್ನಿಯಲ್ಲಿ ಕಂಡು ಕೇಳರಿಯದ ದಂತೆ ಸೌತ್ ಆಫ್ರಿಕಾ ತಂಡ ಸೋಲನ್ನು ಕಂಡಿತ್ತು. ಇಷ್ಟು ಸಾಲದು ಎಂಬಂತೆ ಇತ್ತೀಚೆಗೆ ಸೌತ್ ಆಫ್ರಿಕಾ ತಂಡವು ಬಹುತೇಕ ಸರಣಿಗಳಲ್ಲಿ ನೆಲಕಚ್ಚಿ, ನಿರಾಸೆ ಮೂಡಿಸುವಂತಹ ಪ್ರದರ್ಶನ ನೀಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿಯು ಇದೀಗ ಎಬಿ ಡಿವಿಲಿಯರ್ಸ್ ರವರು ಒಪ್ಪಿಕೊಂಡರೆ ಮುಂದಿನ ಟಿ-20 ವರ್ಲ್ಡ್ ಕಪ್ ನಲ್ಲಿ ಅವಕಾಶ ನೀಡುವುದಾಗಿ ಘೋಷಣೆ ಮಾಡಿದೆ. ತಂಡದ ಮುಖ್ಯ ಕೋಚ್ ಹಾಗೂ ಮಾಜಿ ಸೌತ್ ಆಫ್ರಿಕಾ ಆಟಗಾರ ಮಾರ್ಕ್ ಬೌಚರ್ ಅವರು ಇದೀಗ ಈ ಸುದ್ದಿಯನ್ನು ಘೋಷಣೆ ಮಾಡಿದ್ದು, ಎಬಿ ಡಿವಿಲಿಯರ್ಸ್ ರವರು ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸೌತ್ ಆಫ್ರಿಕಾ ತಂಡಕ್ಕೆ ಸೇರಿಕೊಳ್ಳಲು ಇಂಗಿತ ವ್ಯಕ್ತಪಡಿಸಿರುವ ಕಾರಣ ಎಬಿ ಡಿವಿಲಿಯರ್ಸ್ ಅವರು ಈ ಆಫರ್ ಅನ್ನು ತಿರಸ್ಕರಿಸುವ ಸಾಧ್ಯತೆಗಳು ಕಡಿಮೆ.

Post Author: Ravi Yadav